ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಲಿಂಗೈಕ್ಯ ಶಾಂತವೀರ ಶ್ರೀಗಳು: ಬಾಲಯೋಗಿ ಜಗದೀಶ್ವರ ಸ್ವಾಮೀಜಿ

KannadaprabhaNewsNetwork |  
Published : Feb 25, 2025, 12:50 AM IST
24ಎಚ್‌ವಿಆರ್2- | Kannada Prabha

ಸಾರಾಂಶ

ಒಬ್ಬ ಜಂಗಮ ಸುಧಾರಣೆಯಾದರೆ ಒಂದು ಗ್ರಾಮ ಸುಧಾರಣೆಯಾಗುತ್ತದೆ. ಒಬ್ಬ ಸ್ವಾಮಿ ಸುಧಾರಣೆಯಾದರೆ ಒಂದು ನಾಡು ಸುಧಾರಣೆಯಾಗುತ್ತದೆ ಎಂಬ ಸಮಾಜದ ಹಿತವನ್ನು ಬಯಸಿದವರು ಸಿಂಧಗಿಯ ಶಾಂತವೀರ ಗುರುಗಳು

ಹಾವೇರಿ: ಮಠದಿಂದ ಘಟ ಬೆಳಗಬಾರದು, ಘಟಕದಿಂದ ಮಠ ಬೆಳಗಬೇಕು ಎಂಬ ಹಾನಗಲ್ಲ ಲಿಂಗೈಕ್ಯ ಕುಮಾರ ಶ್ರೀಗಳ ವಾಣಿಯನ್ನು ಅಕ್ಷರಶಃ ಪಾಲಿಸಿ, ಸಮಾಜಕ್ಕೆ ಸಮರ್ಪಿಸಿದವರು ಸಿಂಧಗಿಯ ಶಾಂತವೀರ ಪಟ್ಟಾಧ್ಯಕ್ಷರು ಎಂದು ಕುಮಾರಪಟ್ಟಣದ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ತಿಳಿಸಿದರು.ಸ್ಥಳೀಯ ಸಿಂಧಗಿ ಮಠದ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯಸ್ಮರಣೋತ್ಸವದ ಎರಡನೇ ದಿನದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಒಬ್ಬ ಜಂಗಮ ಸುಧಾರಣೆಯಾದರೆ ಒಂದು ಗ್ರಾಮ ಸುಧಾರಣೆಯಾಗುತ್ತದೆ. ಒಬ್ಬ ಸ್ವಾಮಿ ಸುಧಾರಣೆಯಾದರೆ ಒಂದು ನಾಡು ಸುಧಾರಣೆಯಾಗುತ್ತದೆ ಎಂಬ ಸಮಾಜದ ಹಿತವನ್ನು ಬಯಸಿದವರು ಸಿಂಧಗಿಯ ಶಾಂತವೀರ ಗುರುಗಳು. ಪ್ರತಿವರ್ಷ ಈ ಕ್ಷೇತ್ರದಲ್ಲಿ ಗದುಗಿನ ಜಗದ್ಗುರುಗಳ ಮಾರ್ಗದರ್ಶನದಲ್ಲಿ ನಿಷ್ಠಾವಂತ ಭಕ್ತರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗುತ್ತಿರುವುದು ಶ್ಲಾಘನೀಯ ಎಂದರು.ನಂತರ ಕಲಬುರಗಿ ಶರಣಬಸವೇಶ್ವರ ವಿಶ್ವವಿದ್ಯಾಲಯದ ಸಂಗೀತ ವಿಭಾಗದದ ಪ್ರೊ. ರೇವಯ್ಯ ವಸ್ತ್ರದಮಠ ಅವರಿಂದ ಸಂಗೀತ ಸೇವೆ ಜರುಗಿತು. ಪ್ರಶಾಂತ ರೇವಯ್ಯ ತಬಲಾ ಸಾಥ್ ನೀಡಿದರು.ಇದೇ ಸಂರ್ಭದಲ್ಲಿ ಅನುಶ್ರೀ ಹಾಗೂ ತನುಶ್ರೀ ಹುಳಿಬುತ್ತಿ ಸಹೋದರಿಯರಿಂದ ಭರತನಾಟ್ಯ ಪ್ರದರ್ಶನ ಜರುಗಿತು. ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಹೊತ್ತನಹಳ್ಳಿ ಸಿಂಧಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು, ಪ್ರತಿದಿನ ಶರಣರ ಜೀವನ ದರ್ಶನ ಪ್ರವಚನ ನೀಡಲು ಆಗಮಿಸಿದ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭು ಸ್ವಾಮೀಜಿ ಉಪಸ್ಥಿತರಿದ್ದರು.

ಸಿಂಧಗಿ ಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ, ಜಿ.ಎಸ್. ಭಟ್, ವೀರಣ್ಣ ಶೀಲವಂತ, ಶಾಮ್ ದೊಡ್ಡಮನಿ, ವಾಗೀಶ ಶಾಸ್ತ್ರಿಗಳು, ಡಂಬಳ ಶಾಸ್ತ್ರಿಗಳು, ಶಿವಯೋಗಿಯ್ಯ ಹಿರೇಮಠ, ವೀರಣ್ಣ ಮಹಾರಾಜಪೇಟ, ಶಂಕ್ರಣ್ಣ ಇಟಗಿ, ಸಿದ್ದಲಿಂಗಯ್ಯ ಹಿರೇಮಠ, ತಿಪ್ಪೇಸ್ವಾಮಿ ಸೇರಿದಂತೆ ಇತರರು ಇದ್ದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ