ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ವಿಜಯ ಮಹಾಂತೇಶ್ವರ ಶ್ರೀಮಠದ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಶ್ರೀಮಠದ ಬಸವ ದಾಸೋಹ ಭವನದಲ್ಲಿ ಏರ್ಪಡಿಸಿದ್ದ ಸಹಜ ಶಿವಯೋಗ ಶಿಭರದ ದಿವ್ಯ ಸಾನ್ನಿಧ್ಯ ವಹಿಸಿ ಸಾವಿರಾರು ಭಕ್ತರೊಂದಿಗೆ ತಮ್ಮ ಲಿಂಗಪೂಜೆ ನೇರವೇರಿಸಿ ಮಾತನಾಡಿದರು.
ಆದಿ ಕಾಲದಿಂದಲೂ ಹಿಂದಿನ ಶರಣರು ಲಿಂಗಪೂಜೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತನ್ಮಯರಾಗಿ ದೇವರನ್ನು ಕಾಣುತಿದ್ದರು. ಆದರೆ, ಇಂದು ಅಂತ ಕಠಿಣ ಲಿಂಗಪೂಜೆ ಮಾಡಲು ನಿಮಗೆ ಸಮಯವಿಲ್ಲ ಎನ್ನುವ ತಾಯಂದಿರು ಬ್ಯೂಟಿ ಪಾರ್ಲರನಲ್ಲಿ 2 ಗಂಟೆ ತಮ್ಮ ಸೌಂದರ್ಯಕ್ಕಾಗಿ ಮೀಸಲಿಡುತ್ತಾರೆ. ಜೀವನದಲ್ಲಿ ಎಲ್ಲವೂ ಬೇಕು. ಆದರೆ, ಮನಶುದ್ಧಿಗೆ ಮತ್ತು ಜೀವನ ಸುಧಾರಣೆಗೆ ಲಿಂಗಪೂಜೆ ಅಗತ್ಯವಾಗಿದೆ. ಐದು ಸಾವಿರಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಶ್ರೀಗಳೊಂದಿಗೆ ಸಾಮೂಹಿಕ ಲಿಂಗಪೂಜೆ ಮಾಡಿಕೊಂಡರು.ಗುರುಮಹಾಂತ ಶ್ರೀಗಳ ಜತೆ ಶಿರೂರಿನ ಡಾ.ಬಸವಲಿಂಗ ಶ್ರೀಗಳು ಹಾಗು ಇತರ ಶ್ರೀಗಳು ಸಾಮೂಹಿಕ ಲಿಂಗಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.