ಸರ್ಕಾರಿ ನೌಕರರಿಗೆ ಲಿಂಗರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ

KannadaprabhaNewsNetwork |  
Published : Oct 13, 2024, 01:07 AM IST
ಸರ್ಕಾರಿ ನೌಕರರಿಗೆ ಶಿರಸಂಗಿ ಲಿಂಗರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಶಿರಸಂಗಿ ಲಿಂಗರಾಜ ಮಹಾರಾಜರ ತ್ಯಾಗ, ಶೈಕ್ಷಣಿಕ ಪ್ರೇಮ ಎಲ್ಲರಿಗೂ ದಾರಿದೀಪ ಎಂದು ಕವಲಗಿಯ ಅಭಿನವ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಹೇಳಿದರು. ನಗರದಲ್ಲಿನ ಮನಿಯಾರ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಲಿಂಗರಾಜ ಸಂಸ್ಥೆ, ವಿಜಯಪುರ ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆ ಹಾಗೂ ಬಸವನಬಾಗೇವಾಡಿ ಸಹಯೋಗದಲ್ಲಿ ಸರ್ಕಾರಿ ನೌಕರರಿಗಾಗಿ ಆಯೋಜಿಸಲಾಗಿದ್ದ ಶಿರಸಂಗಿ ಲಿಂಗರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ವೇಳೆ ಆಶೀವರ್ಚನ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಿರಸಂಗಿ ಲಿಂಗರಾಜ ಮಹಾರಾಜರ ತ್ಯಾಗ, ಶೈಕ್ಷಣಿಕ ಪ್ರೇಮ ಎಲ್ಲರಿಗೂ ದಾರಿದೀಪ ಎಂದು ಕವಲಗಿಯ ಅಭಿನವ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಹೇಳಿದರು. ನಗರದಲ್ಲಿನ ಮನಿಯಾರ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಲಿಂಗರಾಜ ಸಂಸ್ಥೆ, ವಿಜಯಪುರ ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆ ಹಾಗೂ ಬಸವನಬಾಗೇವಾಡಿ ಸಹಯೋಗದಲ್ಲಿ ಸರ್ಕಾರಿ ನೌಕರರಿಗಾಗಿ ಆಯೋಜಿಸಲಾಗಿದ್ದ ಶಿರಸಂಗಿ ಲಿಂಗರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ವೇಳೆ ಆಶೀವರ್ಚನ ನೀಡಿದರು.

ಶಿರಸಂಗಿ ಲಿಂಗರಾಜ ಮಹಾರಾಜರು ಶಿರಸಂಗಿ ಸಂಸ್ಥಾನದ ಕರ್ಣಧಾರತ್ವ ವಹಿಸಿದರು. ಪ್ರತಿಯೊಬ್ಬರಿಗೂ ಶಿಕ್ಷಣ ಎಂಬ ದಿವ್ಯ ಬೆಳಕು ಪ್ರಾಪ್ತವಾಗಬೇಕು ಎಂಬ ಕನಸು ಕಂಡಿದ್ದ ಅವರು, ಈ ಕನಸು ನನಸಾಗಿಸಲು ಹೇರಳವಾಗಿ ಶಿಕ್ಷಣ ಸಂಸ್ಥೆಗಳಿಗೆ ದಾನ ಧರ್ಮ ಮಾಡಿದರು. ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶಮಯ. ಅವರ ತತ್ವಾದರ್ಶಗಳನ್ನು ನಾವು ಸ್ಮರಿಸಬೇಕಿದೆ ಎಂದು ಹೇಳಿದರು.

ಆಡಳಿತದಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ, ಈ ನೌಕರರು ದಿನನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುವುದುಂಟು, ಅವರ ಒತ್ತಡ ನಿವಾರಣೆಗಾಗಿ ಆಟೋಟಗಳನ್ನು ಆಯೋಜಿಸುವುದು ಸಂತೋಷ ತಂದಿದೆ ಎಂದರು.

ಐಆರ್‌ಬಿ ಕಮಾಂಡೆಂಟ್ ಪ್ರಸನ್ನಕುಮಾರ ಮಾತನಾಡಿ, ಆಟಗಳು ಏಕಾಗ್ರತೆ, ಆರೋಗ್ಯ ವೃದ್ಧಿಗೆ ಅತ್ಯಂತ ಸಹಾಯಕಾರಿ. ಸರ್ಕಾರಿ ನೌಕರರಿಗಾಗಿ ಟೂರ್ನಮೆಂಟ್ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಿಂಗರಾಜ ವಿವಿದ್ದೋದೇಶಗಳ ಸಂಘದ ಅಧ್ಯಕ್ಷ ಬಿ.ಎಸ್.ಜನಗೊಂಡ, ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ, ಅಶೋಕ ಯಡಹಳ್ಳಿ, ಆರ್‌.ಜಿ.ಕುರಿ, ಬಿ.ಎಸ್.ಮಜ್ಜಗಿ, ಎ.ಎಸ್.ಪಾಟೀಲ, ಸಿ.ಟಿ.ಚೌಧರಿ, ಎ.ಎನ್.ಮಾತಾಳಿ, ಆರ್‌.ಎಸ್.ಬಿಸನಾಳ, ಪ್ರಕಾಶ ಜುಮನಾಳ, ಮಲ್ಲಿಕಾರ್ಜುನ ಟಕ್ಕಳಕಿ, ಎಚ್.ಕೆ.ಬೂದಿಹಾಳ, ಸುನೀಲ ಬಿರಾದಾರ, ವಿನೋದಕುಮಾರ ಮಣೂರ, ಬಸವರಾಜ ಕರಿಕಬ್ಬಿ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''