ನಾಗಾಪುರ ದೀಕ್ಷಾ ಭೂಮಿ ಪ್ರವಾಸ: ಯಾತ್ರೆಯ ಬಸ್‌ಗೆ ಡಿಸಿ ಚಾಲನೆ

KannadaprabhaNewsNetwork |  
Published : Oct 13, 2024, 01:07 AM IST
ನಾಗಾಪುರ ದೀಕ್ಷಾ ಭೂಮಿ ಪ್ರವಾಸ:  ಜಿಲ್ಲಾಧಿಕಾರಿಗಳಿಗೆ   ಯಾತ್ರೆಯ ಬಸ್‌ಗೆ ಚಾಲನೆ  | Kannada Prabha

ಸಾರಾಂಶ

ಅಶೋಕ ವಿಜಯ ದಸಮಿ ಮತ್ತು ಡಾ. ಬಾಬಾ ಸಾಹೇಬರು ಬೌದ್ಧ ಧಮ್ಮ ಸ್ವೀಕರಿಸಿದ ೬೮ನೇ ಧಮ್ಮ ಚಕ್ರ ಪರಿವರ್ತನೆಯ ಅಂಗವಾಗಿ ದೇಶ ವಿದೇಶಗಳಿಂದ ಸುಮಾರು ೫೦ ಲಕ್ಷ ಜನ ಅ.೧೨ ರಂದು ನಾಗಪುರ ದೀಕ್ಷ ಭೂಮಿಯಲ್ಲಿ ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಮಹಾರಾಷ್ಟ್ರ ರಾಜ್ಯದ ನಾಗಪುರದ ದೀಕ್ಷಾ ಭೂಮಿಗೆ ಚಾಮರಾಜನಗರ ಜಿಲ್ಲೆಯಿಂದ ಹೊರಟ ಯಾತ್ರಿಗಳ ಬಸ್‌ಗಳಿಗೆ ಜಿಲ್ಲಾಡಳಿತ ಭವನದ ಮುಂದೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಜಿಲ್ಲಾಡಳಿತ ಭವನದ ಮುಂದೆ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜನೆ ಮಾಡಿರುವ ಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿಗೆ ಐದು ದಿನಗಳ ಕಾಲ ಕೆಎಸ್‌ಆರ್‌ಟಿಯ ಲಕ್ಷುರಿ ಬಸ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಬೌದ್ಧ ಧರ್ಮವನ್ನು ಸ್ವೀಕರಿಸಿ ಡಾ. ಬಿ.ಆರ್. ಅಂಭೇಡ್ಕರ್ ಅವರು ದೀಕ್ಷಾ ಭೂಮಿಯಾಗಿರುವ ಮಹಾರಾಷ್ಟ್ರದ ನಾಗಪುರಕ್ಕೆ ತೆರಳುತ್ತಿರುವ ಎಲ್ಲರಿಗೂ ಶುಭವಾಗಲಿ, ತಮ್ಮೆಲ್ಲರ ಪ್ರಯಾಣ ಸುಖಕರವಾಗಿರಲಿ. ಸುರಕ್ಷಿತವಾಗಿ ಹೋಗಿ, ಮತ್ತೇ ಸುರಕ್ಷಿತವಾಗಿ ಜಿಲ್ಲೆಗೆ ವಾಪಸ್ ಆಗಬೇಕೆಂದರು.

ಅಶೋಕ ವಿಜಯ ದಸಮಿ ಮತ್ತು ಡಾ. ಬಾಬಾ ಸಾಹೇಬರು ಬೌದ್ಧ ಧಮ್ಮ ಸ್ವೀಕರಿಸಿದ ೬೮ನೇ ಧಮ್ಮ ಚಕ್ರ ಪರಿವರ್ತನೆಯ ಅಂಗವಾಗಿ ದೇಶ ವಿದೇಶಗಳಿಂದ ಸುಮಾರು ೫೦ ಲಕ್ಷ ಜನ ಅ.೧೨ ರಂದು ನಾಗಪುರ ದೀಕ್ಷ ಭೂಮಿಯಲ್ಲಿ ಭಾಗವಹಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ರಾಜ್ಯದ ನಾನಾ ಭಾಗದಿಂದ ಬರುತ್ತಿದ್ದಾರೆ. ಆದೇ ನಮ್ಮ ಜಿಲ್ಲೆಯಿಂದಲೂ ೫ ಬಸ್ ಗಳ ಮೂಲಕ ಬುದ್ದ ಅನುಯಾಯಿಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಮೋನಾರೋತ್, ಸಮಾಜ ಕಲ್ಯಾಣಾಧಿಕಾರಿ ಎನ್.ಮುನಿರಾಜು, ಉಪ ವಿಭಾಗಾಧಿಕಾರಿ ಮಹೇಶ್, ಪರಿಶಿಷ್ಟ ಪಂಗಡಗಳ ಜಿಲ್ಲಾಧಿಕಾರಿ ಬಿಂದ್ಯಾ, ತಹಸೀಲ್ದಾರ್ ಗಿರಿಜಾ, ಸಹಾಯಕ ನಿರ್ದೇಶಕ ಎಚ್.ಎನ್.ನಂಜುಂಡೇಗೌಡ , ರಾಜು, ಉಡಿಗಾಲ ವಾರ್ಡನ್ ಸಿ.ಎ. ರಾಜು, ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ಸಿ.ಎಂ.ನರಸಿಂಹಮೂರ್ತಿ, ಬುದ್ಧ ಮಹೇಶ್, ಸಿದ್ದರಾಜು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''