- ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಸಮಿತಿ ರಚನೆ ಸಭೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಬಸವ ಗುರುಕುಲದಲ್ಲಿ ಹಮ್ಮಿಕೊಂಡ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಸಮಿತಿ ರಚನಾ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣ ಶೈವ ಬ್ರಾಹ್ಮಣರಾಗಿದ್ದರು. ವಿದ್ಯೆ, ಗೌರವ, ಘನತೆ ಇತ್ತು. ಬಿಜ್ಜಳ ರಾಜನ ಆಸ್ಥಾನದಲ್ಲಿ ಐಶಾರಾಮಿ ಜೀವನ ನಡೆಸದೇ ಸಾಮಾನ್ಯರ ಜೀವನವನ್ನು ಉತ್ತಮಪಡಿಸಲು ಸಾಮಾಜಿಕ ಕ್ರಾಂತಿ ಮಾಡಿದವರು ಎಂದರು.
ದಾಸೋಹ, ಕಾಯಕ, ಮಹಾಮನೆ ಮೂಲಕ ಅಮಾಯಕ ಜನರು, ದುಡಿಯುವ ವರ್ಗಕ್ಕೆ ಸಂಘಟನೆ ಮಾಡಿ ವಚನಗಳಲ್ಲಿ ಬದುಕಿನ ಸಾರವನ್ನು ಸಾರಿದದವರು ಬಸವಣ್ಣ. ನೊಂದವರ ಪರ ಹೋರಾಡಿ, ಶೋಷಣೆಯಿಂದ ವಿಮೋಚನೆಗೊಳಿಸುವ ಪ್ರಯತ್ನ ಮಾಡಿದರು. ಬಸವೇಶ್ವರರು ಹಣ ಲೂಟಿ ಮಾಡದೇ, ಪ್ರಾಮಾಣಿಕರಾಗಿದ್ದು, ಶ್ರದ್ಧೆಯಿಂದ ಕಾಯಕದಲ್ಲಿ ತೊಡಗಿದ್ದರು ಎಂದರು.ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಕುಸುಮಾ ಲೋಕೇಶ್ ಮಾತನಾಡಿ, ಬಸವಣ್ಣ ಅವರು ಧರ್ಮಗ್ರಂಥ, ಲಾಂಛನ, ವಚನಗಳ ಮೂಲಕ ಮೌಲ್ಯಯುತ ವಿಚಾರಗಳನ್ನು ನೀಡಿ ವೀರಶೈವರು, ಲಿಂಗಾಯತರಲ್ಲಿನ ಗೊಂದಲಗಳನ್ನು ದೂರ ಮಾಡಿದ್ದಾರೆ ಎಂದರು.
ಮುಖಂಡ ನಾರೇಶಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ರಚನಾ ಉದ್ದೇಶ, ಆಶಯಗಳು, ಅದರ ಕಾರ್ಯ ಚಟುಟಿಕೆಗಳನ್ನು ತಿಳಿಸಿದರು.
ಮಲೇಬೆನ್ನೂರು ಅಕ್ಕನ ಬಳಗದ ಮಹಿಳಾ ಸದಸ್ಯರು ವಚನ ಗೀತೆ ಹಾಡಿದರು. ಜಿಗಳಿ, ಹಳ್ಳಿಹಾಳು, ಯಲವಟ್ಟಿ, ನಂದಿತಾವರೆ, ಮಲೇಬೆನ್ನೂರು ಗ್ರಾಮದ ಶರಣರು ಇದ್ದರು. ಅಕ್ಕನ ಬಳಗದ ಸದಸ್ಯೆ ಮಂಜುಳಾ ವಂದಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಸಮಿತಿ ರಚನಾ ಸಭೆಯಲ್ಲಿ ಆವರಗೆರೆ ರುದ್ರಮುನಿ ಮಾತನಾಡಿದರು.