- ರೈತ ಸಂಘ-ಹಸಿರು ಸೇರೆ ಹೋರಾಟಕ್ಕೆ ಜಯ । ಆನಗೋಡು ವಿಜಯ ಬ್ಯಾಂಕ್‌ನಲ್ಲಿ ನಾಗಮ್ಮಗೆ ಆಗಿದ್ದ ಅನ್ಯಾಯ
- - - - ಸಾಮಾಜಿಕ ಭದ್ರತೆ, ಉದ್ಯೋಗ ಖಾತ್ರಿ ಕೂಲಿ, ಸಬ್ಸಿಡಿ ಹಣ ಸಾಲಕ್ಕೆ ಮುಟ್ಟುಗೋಲು ಹಾಕದಂತೆ ತಾಕೀತು - ಲೀಡ್ ಬ್ಯಾಂಕ್ ಅಲ್ಲ, ಆನಗೋಡು ವಿಜಯ ಬ್ಯಾಂಕ್ ವ್ಯವಸ್ಥಾಪಕರೇ ಹಣ ತರಲೆಂದು ರೈತರ ಪಟ್ಟು
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಸಾಮಾಜಿಕ ನ್ಯಾಯದ ಗೃಹಲಕ್ಷ್ಮಿ, ಅಂಗವಿಕಲರು, ವೃದ್ಧಾಪ್ಯ, ವಿಧವಾ ವೇತನ, ಉದ್ಯೋಗ ಖಾತ್ರಿ ಕೂಲಿ ಹಣ ಸೇರಿದಂತೆ ಸರ್ಕಾರದ ಯಾವುದೇ ಸಬ್ಸಿಡಿ ಹಣವನ್ನು ಸಾಲಕ್ಕೆ ಮುಟ್ಟುಗೋಲು ಹಾಕದಂತೆ ಸೂಚನೆ ಇದೆ. ಹೀಗಿದ್ದರೂ ಬಡವರ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡ ತಾಲೂಕಿನ ಆನಗೋಡು ಗ್ರಾಮದ ವಿಜಯ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರದಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.ತಾಲೂಕು ಕಚೇರಿ ಎದುರು ಸಂಘಟನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಬ್ಯಾಂಕ್‌ಗಳಿಂದ ಬಾಧಿತರಾದ ರೈತರು, ಗ್ರಾಮೀಣರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಸೀಲ್ದಾರ್ ಡಾ. ಅಶ್ವತ್ಥ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿದರು.
ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ದಾವಣಗೆರೆ ತಾಲೂಕು ಹೊನ್ನೂರು ಗ್ರಾಮದ ನಾಗಮ್ಮ ರಮೇಶ ಎಂಬುವರು ಅಂಗವಿಕಲರ ಕಲ್ಯಾಣ ಇಲಾಖೆಯಿಂದ ₹35 ಸಾವಿರ ಸಹಾಯಧನ, ₹65 ಸಾವಿರ ಸಾಲ ಸೇರಿ ₹1 ಲಕ್ಷ ಪಡೆದಿದ್ದರು. ಈಗಾಗಲೇ ₹50 ಸಾವಿರ ಸಾಲ ಮರು ಪಾವತಿಸಿದ್ದಾರೆ. ಉಳಿದ ₹15 ಸಾವಿರ ಕಾರಣಾಂತರದಿಂದ ಕಟ್ಟಲಾಗಿರಲಿಲ್ಲ. ಈಗ ₹15 ಸಾವಿರ ಬಾಕಿಗೆ ಗೃಹಲಕ್ಷ್ಮಿ, ಉದ್ಯೋಗ ಖಾತ್ರಿ, ಅಂಗವಿಕಲರ ವೇತನ ಇತರೆ ಎಲ್ಲ ಬಗೆ ಯೋಜನೆಗಳ ಸಬ್ಸಿಡಿ ಹಣವನ್ನೂ ಆನಗೋಡು ವಿಜಯ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಆರೋಪಿಸಿದರು.
ಹಣ ಖಾತೆಗೆ ಜಮಾ:
₹35 ಸಾವಿರ ವಾಪಸ್:
ರೈತರಾದ ಹೊನ್ನೂರು ನಾಗಮ್ಮ ರಮೇಶ, ರೈತ ಮುಖಂಡರಾದ ಆಲೂರು ಪರಶುರಾಮ, ಗಂಡುಗಲಿ, ಯರವ ನಾಗತಿಹಳ್ಳಿ ಪೂಜಾರ ಪರಮೇಶ್ವರಪ್ಪ, ಗುಮ್ಮನೂರು ರುದ್ರೇಶ, ಭೀಮೇಶ, ಶಿವಪುರ ಕೃಷ್ಣಮೂರ್ತಿ, ಚಿಕ್ಕಮಲ್ಲನಹೊಳೆ ಚಿರಂಜೀವಿ ಇತರರು ಇದ್ದರು.
ಕೋಟ್
- ಹುಚ್ಚವ್ವನಹಳ್ಳಿ ಮಂಜುನಾಥ, ರಾಜ್ಯಾಧ್ಯಕ್ಷ, ರೈತ ಸಂಘ-ಹಸಿರು ಸೇನೆ
- - --20ಕೆಡಿವಿಜಿ3, 4:
ದಾವಣಗೆರೆ ತಾಲೂಕು ಕಚೇರಿ ಎದುರು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಡಾ.ಅಶ್ವತ್ಥ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.