ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಕುಮುದಾ ಶಾಲೆ, ಕಾಲೇಜು ಹಾಗೂ ಅಮೃತ ವಿದ್ಯಾಲಯ ಶಾಲೆಯಲ್ಲಿ ಸೋಮವಾರ ಭೇಟಿಯಾಗಿ, ಮತಯಾಚಿಸಿದ ಅವರು, ಸುಮಾರು 600 ವಾಟರ್ ಫಿಲ್ಟರ್ ಕುಡಿಯುವ ನೀರು ವ್ಯವಸ್ಥೆ ಸಹ ಮಾಡಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರದ ಕೆಲವು ನಿರ್ಧಾರಗಳಿಂದ ಮಕ್ಕಳ ಭವಿಷ್ಯ ಮಂಕಾಗಿದೆ. ಈ ಬಾರಿ ಸರ್ಕಾರದ ಸಚಿವರಲ್ಲಿ ಇಲಾಖೆಯ ಹಿಡಿತವಿಲ್ಲದೇ, ಅಧಿಕಾರಿಗಳ ಹಿಟ್ಲರ್ ದರ್ಬಾರ್ ಆಗಿ ಇಲಾಖೆಯಲ್ಲಿ ಪ್ರಜಾಪ್ರಭುತ್ವ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಬಾರಿ ಅವ್ಯವಸ್ಥೆಯಾಗಿದೆ. ಖಾಸಗಿ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಯಾವುದೇ ರೀತಿಯ ತೊಂದರೆ ಆದರೂ ಸಾಕಷ್ಟು ಬಾರಿ ಹೋರಾಟ ಮಾಡಿದ್ದೇನೆ ಎಂದರು.ಮುಂಬರುವ ದಿನಗಳಲ್ಲಿಯೂ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತೇನೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವ ಇತಿಹಾಸವೇ ಇಲ್ಲ. ಆದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಮಾಯಕೊಂಡ ಮಾಜಿ ಶಾಸಕ ಎನ್.ನಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಎನ್.ಶಿವಕುಮಾರ, ಸಾಂಬಶಿವಯ್ಯ ಇತರರು ಭಾಗವಹಿಸಿದ್ದರು.- - - -20ಕೆಡಿವಿಜಿ35,36ಃ:
ದಾವಣಗೆರೆಯ ಕುಮುದಾ ಶಾಲೆ, ಕಾಲೇಜು, ಅಮೃತ ವಿದ್ಯಾಲಯದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಮಾತನಾಡಿದರು.