ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಈ ಸಮಾರಂಭಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಮಹಾಸಭೆಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಲೂಕಿನಿಂದ ಅತಿ ಹೆಚ್ಚು ಸಮಾಜ ಬಾಂಧವರು ಈ ಮಹಾದಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದರು. ಈ ಐತಿಹಾಸಿಕ 24ನೇ ಮಹಾ ಅಧಿವೇಶನ ಸಮಾರೋಪ ಸಮಾರಂಭದಲ್ಲಿ ಸಮಾಜದ ಭವಿಷ್ಯದ ಅಭಿವೃದ್ಧಿಗಾಗಿ ಸಮಾಜದ ಒಳಿತಿಗಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಗಳ ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು ಸುಮಾರು 8 ವರ್ಷಗಳಷ್ಟು ಹಳೆಯದಾದ ಅನೇಕ ಲೋಪದೋಷಗಳಿಂದ ಕೂಡಿರುವ ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡಿರುವ ಕಾಂತರಾಜು ಆಯೋಗದ ವರದಿಯನ್ನು ತಿರಸ್ಕರಿಸುವುದು ಮತ್ತು ಯಾವುದೇ ಕಾರಣಕ್ಕೂ ವರದಿಯನ್ನು ಸ್ವೀಕರಿಸಿದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು, ಪ್ರಸ್ತುತ ತಂತ್ರಜ್ಞಾನಗಳನ್ನು ಬಳಸಿಕೊಂಡು ಲೋಪ ದೋಷಗಳನ್ನು ಸರಿಪಡಿಸಿಕೊಂಡು ರಾಜ್ಯ ಸರ್ಕಾರವು ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವುದಾದರೆ ಸಂಪೂರ್ಣ ಸಹಕಾರ ನೀಡುವುದು ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಮಾವೇಶದಲ್ಲಿ ಉದ್ಘಾಟನೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕೆ ಕೃಷಿ ಯುವ ಮಹಿಳಾ ಅಧಿವೇಶನಗಳು ಮತ್ತು ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಪರಂಪರೆ ಮುಂತಾದ ವಿಷಯಗಳ ಬಗ್ಗೆ ಗೋಷ್ಠಿಗಳಿರುತ್ತವೆ. ಅಧಿವೇಶನದ ಸವಿ ನೆನಪಿಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಮಹಾಸಭೆಯ ಇತಿಹಾಸ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸುವ ವಸ್ತು ಪ್ರದರ್ಶನ ಇರಲಿದೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಹಾಗೆಯೇ ಕೈಗಾರಿಕಾ ಮತ್ತು ವಾಣಿಜ್ಯ ಹಾಗೂ ಕೃಷಿ ಸಂಬಂಧಿತ ವಸ್ತು ಪ್ರದರ್ಶನವಿರುತ್ತದೆ. ಈ ಸಮಾರಂಭವನ್ನು ಯಶಸ್ವಿಗೊಳಿಸಲು ಭಾಗವಹಿಸಬೇಕೆಂದರು.ಈ ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎ. ಆರ್. ನಾಗರಾಜ್, ಕೋಶಾಧ್ಯಕ್ಷ ರುದ್ರಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಂದೀಶ್, ಖಜಾಂಚಿ ಸುರೇಶ್, ಲಾಯರ್ ದರ್ಶನ್, ಬಿ.ಸಿ. ಚೆನ್ನೇಗೌಡ ಜಿಲ್ಲಾ ನಿರ್ದೇಶಕರಾದ ದೇವೇಂದ್ರಪ್ಪ, ಸತೀಶ್, ಮಂಜುನಾಥ್, ಭಾರತಿ, ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿ, ರೇಖಾ ಗಿರೀಶ್, ಯುವ ಘಟಕದ ಉಪಾಧ್ಯಕ್ಷ ಮರಿ ಶೆಟ್ಟಿಹಳ್ಳಿ ಸತೀಶ್, ಕಾರ್ಯದರ್ಶಿ ಆಕಾಶ್, ಖಜಾಂಚಿ ಚಿರಂಜೀವಿ, ಶಿವಾನಂದ್, ಮಹಿಳಾ ಘಟಕದ ಕಾರ್ಯದರ್ಶಿ ಯಶಸ್ವಿನಿ, ಉಪಾಧ್ಯಕ್ಷೆ ರೂಪವತಿ, ಶುಭ ವಿದ್ಯಾರಾಣಿ ಇತರರು ಹಾಜರಿದ್ದರು. ಫೋಟೋ ಸುದ್ದಿ ಅರಳೆಪೇಟೆ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ಮಾಸಿಕ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್. ಪರಮೇಶ್ ಕಾರ್ಯದರ್ಶಿ ನಂದೀಶ್, ಜಿಲ್ಲಾ ಉಪಾಧ್ಯಕ್ಷ ಎ. ಆರ್. ನಾಗರಾಜ್, ರುದ್ರಸ್ವಾಮಿ, ಎಂ.ಎಸ್. ಸುರೇಶ್, ರೇಖಾ ಗಿರೀಶ್, ಯಶಸ್ವಿನಿ ಇದ್ದರು.