ಕನ್ನಡಪ್ರಭ ವಾರ್ತೆ ಬೆಂಗಳೂರು:
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯು ಜಗದ್ಗುರು ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ‘ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಮೊದಲ ಸಂಸತ್ತನ್ನು ಪರಿಚಯಿಸಿದ್ದು ಬಸವಣ್ಣನವರು. ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ವೀರಶೈವ ಲಿಂಗಾಯತ ಧರ್ಮ. ಹಾಗಾಗಿ, ಬಸವಣ್ಣನವರನ್ನು ವಿಶ್ವಗುರು ಎಂದು ಕರೆಯುತ್ತೇವೆ. ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದಲೇ ಶಾಂತಿ ಎಂದು ನಮ್ಮ ವೀರಗಂಗಾಧರ ಅಜ್ಜ ಅವರು ಹೇಳಿದರು. ಮಾನವ ಧರ್ಮದ ಪ್ರತಿಪಾದನೆಯಿಂದಲೇ ಮಠಗಳಿಗೆ ಶಕ್ತಿ, ಬಲ ಬರುತ್ತದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಸಾರಿದ ವೀರಶೈವ ಧರ್ಮವನ್ನು ಎಲ್ಲರೂ ಕಾಪಾಡಬೇಕು ಎಂದು ಮನವಿ ಮಾಡಿದರು.ವೀರಶೈಧರ್ಮದ ಆರ್ಥಿಕವಾಗಿ ಸಬಲರಾಗಿರುವ ಮಠಗಳು ಸರ್ಕಾರಕ್ಕೆ ಸರಿಸಮನಾಗಿ ಸಮಾಜದ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಸಂಸ್ಕಾರ, ಶಿಕ್ಷಣ, ಜ್ಞಾನ, ಅಕ್ಷರದಾಸೋಹ ಮಾಡುತ್ತಿದೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವುದು ಲಿಂಗಾಯತ ಮಠಗಳು. ಪ್ರಪಂಚದ ನಾನಾ ಭಾಗಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಬಿ.ಡಿ ಜತ್ತಿಯವರು ಪಂಚಾಯತಿ ಸದಸ್ಯತ್ವದಿಂದ-ರಾಷ್ಟ್ರಪತಿಯಂಥ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರು ಎನ್ನುವುದನ್ನು ಸ್ಮರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ರಂಭಾಪುರಿ ಪೀಠದ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು, ಹಿಮವತ್ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯರು, ವಾರಾಣಸಿ (ಕಾಶಿ) ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಸೇರಿ ವೀರಶೈವ ಲಿಂಗಾಯತ ಸಮುದಾಯದ ಅನೇಕ ಮಠ, ಪೀಠಗಳ ಸ್ವಾಮೀಜಿಗಳು, ಸಚಿವರಾದ ಈಶ್ವರ ಖಂಡ್ರೆ, ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಸಮುದಾಯದ ಅನೇಕ ನಾಯಕರು ಭಾಗವಹಿಸಿದ್ದರು.----ಮಠಾಧೀಶರು, ಭಕ್ತರು ಉಳಿದುಕೊಳ್ಳಲು 2 ಎಕ್ರೆ:
ಬಿಡದಿ ಟೌನ್‌ಶಿಪ್‌ಗೆ ಜಮೀನು ನೀಡುವಂತೆ ಯಾವ ರೈತರ ಮೇಲೂ ಸರ್ಕಾರ ಒತ್ತಡ ಹಾಕುತ್ತಿಲ್ಲ. ಇಷ್ಟವಿಲ್ಲದವರು ಜಮೀನು ಕೊಡಬೇಡಿ ಎಂದೇ ಹೇಳುತ್ತಿದ್ದೇನೆ. ಹೀಗಿದ್ದರೂ ಬೈರಮಂಗಲದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವುದು ಯಾಕೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಭೇಟಿ ಮಾಡಿ ಕೆಲ ಕಾಲ ರಾಜ್ಯ ರಾಜಕೀಯ ಹಾಗೂ ಚುನಾವಣಾ ಆಯೋಗದ ವಿರುದ್ಧ ಅಪಸ್ವರ, ಮತಗಳ್ಳತನದ ವಿರುದ್ಧದ ಮುಂದಿನ ಹೋರಾಟಗಳ ಕುರಿತು ಚರ್ಚೆ ನಡೆಸಿದರು.
ಮತಗಳ್ಳತನ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದ ಅಂಶಗಳು ನಿಜವಾಗಿವೆ. ಹಾಗಾಗಿ ಹೈಕಮಾಂಡ್ ನಾಯಕರು ಮತಗಳ್ಳತನ ವಿಚಾರವಾಗಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದು, ನಮ್ಮ ಭೇಟಿ ವೇಳೆ ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಅಲ್ಲದೆ, ಚುನಾವಣಾ ಆಯೋಗದಲ್ಲಿನ ಅಪಸ್ವರ ಹಾಗೂ ಅಕ್ರಮಗಳು ಬೆಳಕಿಗೆ ಬಂದಿವೆ. ಈ ವಿಚಾರವಾಗಿ ದೇಶವೇ ಜಾಗೃತಗೊಂಡಿದ್ದು, ಪಕ್ಷದ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚೆ ಮಾಡಿದ್ದೇವೆ. ಕಾರ್ಯಕಾರಿ ಸಮಿತಿ ಸಭೆ ಬಳಿಕ ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಚುನಾವಣಾ ಸೋಲಿನ ಹತಾಶೆಯಿಂದ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂಬ ಬಿಜೆಪಿಯವರ ಟೀಕೆ ಕುರಿತ ಪ್ರಶ್ನೆಗೆ, ನಾವು ಹೇಳಿದ್ದನ್ನೇ ಚುನಾವಣಾ ಆಯೋಗದವರು ಹೇಳಿದ್ದಾರಲ್ವಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತದ ತೀರ್ಮಾನ ಆಗಬೇಕು. ಆದರೆ ಮೂವರಲ್ಲಿ ಇಬ್ಬರು ಆಯುಕ್ತರ ಭಿನ್ನಮತ ನಡುವೆ ತೀರ್ಮಾನ ಮಾಡಲಾಗಿದೆ. ಈಗ ಅವರ ಮಧ್ಯೆ ತೇಪೆ ಹಚ್ಚಿ ಕೂರಿಸಿದ್ದಾರೆ ಎಂದು ತಿರುಗೇಟು ನೀಡಿದರು.