ನಾಳೆ ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳ ಪದಗ್ರಹಣ

KannadaprabhaNewsNetwork |  
Published : Jul 11, 2026, 01:30 AM IST
ಯನ್ಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ಡಾ. ಕ್ಷಮತಾ ಕೆರೂಡಿ 12 ರಂದು ಪದಗ್ರಹಣ ಸಮಾರಂಭ   | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ 100 ವರ್ಷಗಳಿಂದ ಹಾಗೂ ಬಾಗಲಕೋಟೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಸುದೀರ್ಘ 55 ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯ ಮಾಡುತ್ತಿರುವ ಲಯನ್ಸ್ ಕ್ಲಬ್‌ 2026-27ನೇ ಸಾಲಿನ 56ನೇ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.12ರ ಸಂಜೆ 6 ಗಂಟೆಗೆ ನಗರದ ಸಿ.ವಿ. ಚರಂತಿಮಠ ಲಯನ್ಸ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಿಂಕೇಶ ಬರ್ಹನಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ 100 ವರ್ಷಗಳಿಂದ ಹಾಗೂ ಬಾಗಲಕೋಟೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಸುದೀರ್ಘ 55 ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯ ಮಾಡುತ್ತಿರುವ ಲಯನ್ಸ್ ಕ್ಲಬ್‌ 2026-27ನೇ ಸಾಲಿನ 56ನೇ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.12ರ ಸಂಜೆ 6 ಗಂಟೆಗೆ ನಗರದ ಸಿ.ವಿ. ಚರಂತಿಮಠ ಲಯನ್ಸ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಿಂಕೇಶ ಬರ್ಹನಾಪೂರ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಒಂದು ದಶಕದಿಂದ ವೈದ್ಯಕೀಯ ಮತ್ತು ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ, ಕೆರೂಡಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಖ್ಯಾತ ಹೃದಯ ರೋಗ ತಜ್ಞರಾದ ಡಾ. ಕ್ಷಮತಾ ಕೆರೂಡಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಾಗಲಕೋಟೆ ಲಯನ್ಸ್ ಕ್ಲಬ್‌ ಇದೇ ಮೊದಲ ಬಾರಿಗೆ ಮಹಿಳೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರೊಂದಿಗೆ ಕಾರ್ಯದರ್ಶಿಯಾಗಿ ಯುವ ಉದ್ಯಮಿ ಅಶೋಕ್ ರುದ್ರಾಕ್ಷಿ ಮತ್ತು ಖಜಾಂಚಿಯಾಗಿ ನಗರದ ವೈದ್ಯ ಹೆಚ್.ಎಫ್. ಯೋಗಪ್ಪನವರ ಪುತ್ರ ಡಾ.ಸಾಮ್ರಾಟ್ ಯೋಗಪ್ಪನವರ ಅಧಿಕಾರ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಅಂಗಸಂಸ್ಥೆಯಾದ ಲೇಡಿ ಲಯನ್ಸ್ ಕ್ಲಬ್ ಆಫ್ ಬಾಗಲಕೋಟೆ ನೂತನ ಅಧ್ಯಕ್ಷರಾಗಿ ಸುಮಾ ಪಟ್ಟಣಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಸಿಎ ಸೀಮಾ ಮನ್ನೂರ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.ಕಾರ್ಯಕ್ರಮಕ್ಕೆ ಪದಗ್ರಹಣ ಅಧಿಕಾರಿಯಾಗಿ ಜಿಲ್ಲಾ ಲಯನ್ಸ್ ಲಿಯೋ ಸಂಯೋಜಕಿ ಭಾರತಿ ವಡವಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಧಾರವಾಡದ ಅಭಿನಯ ಭಾರತಿಯ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಎ.ಕೆ.ಕುಲಕರ್ಣಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಕ್ಷಮತಾ ಕೆರೂಡಿ ಮಾತನಾಡಿ, ಸಮಾಜದಲ್ಲಿನ ಬಡವರು, ಹಿಂದುಳಿದವರು, ಕಾರ್ಮಿಕರ ಮಕ್ಕಳು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ಗುರಿಯೊಂದಿಗೆ ಲಯನ್ಸ್ ಕ್ಲಬ್ ಈ ವರ್ಷ ಹತ್ತಾರು ಹೊಸ ಮತ್ತು ಶಾಶ್ವತ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.-------ತರಕಾರಿ ವ್ಯಾಪಾರಿಗಳಿಗೆ ನೆರವು:

ನಗರದ ಬಡ ತರಕಾರಿ ವ್ಯಾಪಾರಿಗಳಿಗೆ ಛತ್ರಿಗಳ ವಿತರಣೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ವಿಶೇಷ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ. ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಿಗಾಗಿ ಲಯನ್ಸ್ ಚಟುವಟಿಕೆಗಳ ಕುರಿತು ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ವರ್ಷದ ಯೋಜನಾ ಕಾರ್ಯವನ್ನು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಅಶೋಕ ರುದ್ರಾಕ್ಷಿ, ಖಜಾಂಚಿ ಡಾ.ಸಮರ್ಥ ಯೋಗಪ್ಪನವರ, ಸುಮಾ ಆರ್.ಪಟ್ಟಣಶೆಟ್ಟಿ, ಸೀಮಾ ಮನ್ನೂರ ತೃಪ್ತಿ ರ್ಬಾರ ಇದ್ದರು.

------ಬಾಕ್ಸ್ಉಚಿತ ಕಣ್ಣಿನ ಆಸ್ಪತ್ರೆ ಶುಭಾರಂಭಲಯನ್ಸ್ ಕ್ಲಬ್ ಹಾಗೂ ಡಾ.ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಹುನಗುಂದದಲ್ಲಿ ಜುಲೈ 17 ರಂದು ಉಚಿತ ಕಣ್ಣಿನ ಆಸ್ಪತ್ರೆ ಶುಭಾರಂಭಗೊಳ್ಳಲಿದೆ. ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆಗಾಗಿ 16 ರಿಂದ 45 ವರ್ಷದೊಳಗಿನ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಲಸಿಕೆ ನೀಡಲಾಗುವುದು. ನವಜಾತ ಶಿಶುಗಳ ಆರೈಕೆಗಾಗಿ ₹ 70 ಲಕ್ಷ ವೆಚ್ಚದಲ್ಲಿ ಲಯನ್ಸ್ ಕ್ಲಬ್ ಬಾಗಲಕೋಟೆ, ಜಮಖಂಡಿ ಲಯನ್ಸ್ ಕ್ಲಬ್, ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಶನ್ ಮತ್ತು ಹೆಚ್.ಎಸ್.ಕೆ ಆಸ್ಪತ್ರೆಯ ಸಹಯೋಗದೊಂದಿಗೆ ಬಾಗಲಕೋಟೆ ನಗರದ ಹೆಚ್.ಎಸ್.ಕೆ ಆಸ್ಪತ್ರೆಯಲ್ಲಿ ಇದನ್ನು ಸ್ಥಾಪಿಸಲಾಗುವುದು ನೂತನ ಅಧ್ಯಕ್ಷೆ ಕ್ಷಮತಾ ಕೆರೂಡಿ ತಿಳಿಸಿದರು.ನಗರದ 5 ಆಯ್ದ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರಿನ ತೊಟ್ಟಿಗಳನ್ನು ಸ್ಥಾಪಿಸಲಾಗುವುದು. ಕಾರ್ಮಿಕ ವರ್ಗ, ಕೆ.ಎಸ್.ಆರ್.ಟಿ.ಸಿ ಉದ್ಯೋಗಿಗಳು ಹಾಗೂ ಅರಕ್ಷಕ ಸಿಬ್ಬಂದಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ತುರ್ತು ಹೃದಯ ಚಿಕಿತ್ಸೆ ಕುರಿತು ಸಂಚಾರಿ ಪೊಲೀಸ್ ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ-ಜಿ ರಾಮ್ ಜಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ
ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಯಾರ ಅನುಮತಿ ಬೇಕಿಲ್ಲ:ಜಿಗಜಿಣಗಿ