ಲಯನ್ಸ್ ಕ್ಲಬ್ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ

KannadaprabhaNewsNetwork | Published : Feb 19, 2025 12:45 AM

ಸಾರಾಂಶ

ಮುರ್ಡೇಶ್ವರ ಲಯನ್ಸ್ ಕ್ಲಬ್ ಪರಿಸರ ಜಾಗೃತಿ, ಯುವ ಜಾಗೃತಿ, ಬಡತನ ನಿರ್ಮೂಲನೆ, ಮಕ್ಕಳ ಕ್ಯಾನ್ಸರ್, ಮಧುಮೇಹ, ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸೆ ಮುಂತಾದ ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿ

ಭಟ್ಕಳ: ಕಳೆದ ೧೭ವರ್ಷಗಳಿಂದ ಸಮಾಜಮುಖಿ ಕಾರ್ಯ ಮಾಡಿ ಗಮನ ಸೆಳೆದಿರುವ ಮುರ್ಡೇಶ್ವರ ಲಯನ್ಸ್ ಕ್ಲಬ್ ಈ ವರ್ಷವೂ ಕೂಡಾ ಉತ್ತಮ ಕಾರ್ಯ ಮಾಡಿ ಮುಂಚೂಣಿಯಲ್ಲಿದೆ ಎಂದು ಲಯನ್ ೩೧೭ಬಿ ಜಿಲ್ಲೆಯ ಗವರ್ನರ್ ಹುಬ್ಬಳ್ಳಿಯ ಮನೋಜ್ ಮಾಣಿಕ್ ಹೇಳಿದರು.

ಅವರು ಮುರ್ಡೇಶ್ವರದ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಬಸ್ತಿಮಕ್ಕಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸ್ಥಾಪಿಸಲಾದ ಸ್ವಾಗತ ಫಲಕ (ಹೋರ್ಡಿಂಗ್) ಅನಾವರಣಗೊಳಿಸಿ ನಂತರ ಶಿರಾಲಿಯ ಶ್ರೀದೇವಿ ಹೆರಿಟೇಜ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಅಧೀಕೃತ ಭೇಟಿಯ ಸಂದರ್ಭದಲ್ಲಿ ಮಾತನಾಡಿದರು.

ಮುರ್ಡೇಶ್ವರ ಲಯನ್ಸ್ ಕ್ಲಬ್ ಪರಿಸರ ಜಾಗೃತಿ, ಯುವ ಜಾಗೃತಿ, ಬಡತನ ನಿರ್ಮೂಲನೆ, ಮಕ್ಕಳ ಕ್ಯಾನ್ಸರ್, ಮಧುಮೇಹ, ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸೆ ಮುಂತಾದ ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಪ್ರಸ್ತುತ ವರ್ಷದ ೮ ತಿಂಗಳಲ್ಲಿ ೭೪ ಕಾರ್ಯಚಟುವಟಿಕೆ ನಡೆಸುವ ಮೂಲಕ ಸಮಾಜಮುಖಿ ಕಾರ್ಯ ಮುಂದುವರಿಸಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಗದ್ದೆಯ ಶಿಕ್ಷಕ ವಸಂತ ಮಂಜುನಾಥ ನಾಯ್ಕ ಉತ್ತಮ ಸೇವೆ ಗುರುತಿಸಿ ವಾಜಂತ್ರಿ ಅವಾರ್ಡನ್ನು ಹಾಗೂ ಸರ್ಕಾರಿ ಪ್ರೌಢಶಾಲೆ ಸೋನಾರಕೇರಿಯ ಶಿಕ್ಷಕಿ ಸವಿತಾ ನಾಯ್ಕ ಅವರ ಶೈಕ್ಷಣಿಕ ಸಾಧನೆಗಾಗಿ ಉಡುಪ ಅವಾರ್ಡನ್ನು ನೀಡಿ ಗೌರವಿಸಲಾಯಿತು.

ಲಯನ್ಸ ಕ್ಲಬ್ ನಿಂದ ಕ್ಯಾನ್ಸರ ಪೀಡಿತ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗಾಗಿ ಧನಸಹಾಯ ಮಾಡಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟದಮಕ್ಕಿಗೆ ವಾಟರ್ ಫಿಲ್ಟರ್‌, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಣಭಾವಿಗೆ ಕಬ್ಬಿಣದ ಕಪಾಟ್‌ , ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿರಾಣಿಕೇರಿಗೆ ಟೇಬಲ್ ಹಾಗೂ ಖುರ್ಚಿ, ಶಿರಾಣಿಕೇರಿ ಅಂಗನವಾಡಿಗೆ ಪುಸ್ತಕ ಇಡುವ ರ‍್ಯಾಕ್ಸ್‌ ವಿತರಿಸಲಾಯಿತು. ವೇದಿಕೆಯಲ್ಲಿ ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ಅಧ್ಯಕ್ಷ ವಿಶ್ವನಾಥ ಮಡಿವಾಳ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ವಿನೋದ್ ಕುಮಾರ್ ಜೈನ್, ಲಯನ್ ೩೧೭ಬಿ ಜಿಲ್ಲೆಯ ವಿಭಾಗ ೭ರ ರೀಜನ್ ಚೇರ್‌ಪರ್ಸನ್ ರವಿ ನಾಯಕ, ಜಿಲ್ಲಾ ಚೇರ್‌ಪರ್ಸನ್ ಡಾ. ಸುನೀಲ್ ಜತ್ತನ್, ಕಾರ್ಯದರ್ಶಿ ನಾಗೇಶ ಮಡಿವಾಳ, ಕೋಶಾಧ್ಯಕ್ಷ ಡಾ. ವಾಧಿರಾಜ ಭಟ್ ಉಪಸ್ಥಿತರಿದ್ದರು.

ಸಂಜನಾ ಪ್ರಾರ್ಥಿಸಿದರು. ಮುರ್ಡೇಶ್ವರ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಎಂ.ವಿ ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ನಾಗೇಶ ಮಡಿವಾಳ ವಾರ್ಷಿಕ ವರದಿ ವಾಚಿಸಿದರು. ಕೋಶಾಧ್ಯಕ್ಷ ಡಾ. ವಾಧಿರಾಜ ಭಟ್ ವಂದಿಸಿದರು. ಕೃಷ್ಣ ಹೆಗಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ನಾಗರಾಜ ಭಟ್, ಜಗದೀಶ ಜೈನ್, ಬಸ್ತ್ಯಾಂವ್ ಡಿಕೋಸ್ತಾ, ಬಾಬು ಮೊಗೇರ, ಸುಬ್ರಾಯ ನಾಯ್ಕ, ಗಜಾನನ ಭಟ್, ವಿಶ್ವನಾಥ ಕಾಮತ, ಕಿರಣ ಕಾಯ್ಕಿಣಿ, ಕಿರಣ ಮಾನಕಾಮೆ, ಗೌರೀಶ ಟಿ.ನಾಯ್ಕ, ಮಂಜುನಾಥ ನಾಯ್ಕ, ಡಾ. ಮನೋಜ ಆಚಾರ್ಯ, ಜಯಪ್ರಕಾಶ ಕರ್ಕಿಕರ್, ರಾಮದಾಸ ಶೇಟ್ ಮುಂತಾದವರಿದ್ದರು.

Share this article