ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ಲಯನ್ಸ್ ವಿಶ್ವದ ೨೦೮ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಲಯನ್ಸ್ ಸಂಸ್ಥೆಯು ಸೇವೆ ಮತ್ತು ನಾಯಕತ್ವವನ್ನು ಕಲಿಸುತ್ತದೆ ಎಂದು ಲಯನ್ಸ್ ಸಂಸ್ಥೆಯ ಮಾಜಿ ಜಿಲ್ಲಾ ರಾಜ್ಯಪಾಲ ಲ.ಟಿ.ಜೆ.ರಾಮಮೂರ್ತಿ ತಿಳಿಸಿದರು.ನಗರದ ಬಾಲು ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ನಡೆದ ಲಯನ್ಸ್ ಸಂಸ್ಥೆಯ ೨೦೨೪-೨೫ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಸಮಾಜ ಸೇವೆ ಮತ್ತು ನಾಯಕತ್ವಕ್ಕೆ ಲಯನ್ಸ್ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದರು.
ಲಯನ್ಸ್ ಸಂಸ್ಥೆ ೫೪ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳನ್ನು ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಸಂಸ್ಥೆಯ ಸೇವೆಯನ್ನು ಇನ್ನಷ್ಟು ವಿಸ್ತರಿಸಲಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಲಿ. ಚನ್ನಪಟ್ಟಣ ಲಯನ್ಸ್ ಸಂಸ್ಥೆ ಜಿಲ್ಲೆಯಲ್ಲೇ ಅತ್ಯುತ್ತಮ ಸಂಸ್ಥೆ ಎಂಬ ಹೆಸರು ಗಳಿಸಲಿ ಎಂದು ಅವರು ಆಶಿಸಿ, ನೂತನ ತಂಡಕ್ಕೆ ಶುಭ ಹಾರೈಸಿದರು.ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಲ.ವಿ.ವೆಂಕಟಸುಬ್ಬಯ್ಯ ಚೆಟ್ಟಿ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಸಾವಿನ ನಡುವೆ ಶಾಶ್ವತವಾದ, ಸಮಾಜ ಒಪ್ಪುವಂತಹ ಸೇವೆ ಮಾಡಿ ನನ್ನ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸುಮಾರು ೪೦ ವರ್ಷಗಳಿಂದ ಸೇವಾ ಚಟುವಟಿಕೆಗಳಲ್ಲಿ ನಾನು ಮತ್ತು ನನ್ನ ಕುಟುಂಬ ತೊಡಗಿಸಿಕೊಂಡು ಬರುತ್ತಿರುವೆ. ನನ್ನ ಈ ಅಧಿಕಾರ ಅವಧಿಯಲ್ಲಿ ಲಯನ್ಸ್ ಸಂಸ್ಥೆಯ ಮಾರ್ಗದರ್ಶನದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೇವಾ ಚಟುವಟಿಕೆಗಳನ್ನು ಮಾಡಿ ಜಿಲ್ಲೆಯಲ್ಲೇ ನಂಬರ್ ಒನ್ ಸಂಸ್ಥೆಯನ್ನಾಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಮಾಜಿ ಅಧ್ಯಕ್ಷ ಕೆ.ತಿಪ್ರೇಗೌಡ ಅವರು ನೂತನ ಅಧ್ಯಕ್ಷ ಲ.ವಿ.ವೆಂಕಟಸುಬ್ಬಯ್ಯ ಚೆಟ್ಟಿ ಅವರಿಗೆ ಲಯನ್ಸ್ ಸಂಸ್ಥೆಯ ದಂಡವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಿದರು.ಮುಖ್ಯ ಅತಿಥಿಗಳಾಗಿ ಲಯನ್ಸ್ ಸಂಸ್ಥೆಯ ಜಿಲ್ಲಾ ಗೌರ್‍ನರ್ ಎನ್.ಮೋಹನ್ ಕುಮಾರ್, ರಾಘವೇಂದ್ರ ಅವರು ನೂತನ ತಂಡಕ್ಕೆ ಶುಭ ಕೋರಿದರು.
ಲಯನ್ ವಿ.ಬಾಲಸುಬ್ರಹ್ಮಣ್ಯಂ ನೂತನ ಅಧ್ಯಕ್ಷರ ಪರಿಚಯ ಮಾಡಿಕೊಟ್ಟರು. ಲಯನ್ ವಿ.ಸಿ.ಚಂದ್ರೇಗೌಡ ಕಾರ್ಯಕ್ರಮ ನಿರೂಪಣೆ ಮಾಡಿದರು.ನೂತನ ಪದಾಧಿಕಾರಿಗಳು:
ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ವಿ.ವೆಂಕಟಸುಬ್ಬಯ್ಯ ಚೆಟ್ಟಿ, ಉಪಾಧ್ಯಕ್ಷರಾಗಿ ಲ.ಎಂ.ಎನ್.ಸುಧಾಕರ್(ಪ್ರಥಮ) ಅಲ್ಲಾ ಬಕಾಶ್ ಚೌದ್ರಿ (ದ್ವಿತೀಯ),ಕಾರ್ಯದರ್ಶಿಯಾಗಿ ಲ.ಸಿ.ಆರ್.ಲವೀಶ್ ಚಂದ್ರ, ಖಜಾಂಚಿಯಾಗಿ ಲ. ಕೆ.ತಿಪ್ರೇಗೌಡ, ಪದಾಧಿಕಾರಿಗಳಾಗಿ ಸಿ.ಜಿ.ಸುರೇಶ್‌ಕುಮಾರ್, ನಿಜಲಿಂಗೇಗೌಡ, ವಿ.ಸಿ.ಚಂದ್ರೇಗೌಡ, ವಸಂತಕುಮಾರ್ ಹಾಗೂ ನಿರ್ದೇಶಕರಾಗಿ ಗೋವಿಂದಯ್ಯ, ಎಚ್.,ವರದರಾಜು ಎಲ್.ಎಂ.ಎನ್.ಕೃಷ್ಣಕುಮಾರ್ ಆಯ್ಕೆಯಾಗಿದ್ದಾರೆ.