ನಾಪೋಕ್ಲು: 4ರಂದು ಲಯನ್ಸ್ ರೀಜನ್ ಮೀಟ್ ‘ಬೆಸುಗೆ’ ಸಮ್ಮೇಳನ

KannadaprabhaNewsNetwork |  
Published : Jan 02, 2026, 04:00 AM IST
  ಕೊಡವ ಸಮಾಜದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಗಳ ಪ್ರಾಂತೀಯ ಅಧ್ಯಕ್ಷ  ಡಾ. ಕೋಟೆರ ಪಂಚಮ್  ತಿಮ್ಮಯ್ಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಜ. 4ರಂದು ಲಯನ್ಸ್ ರಿಜನ್ ಮೀಟ್ ‘ಬೆಸುಗೆ’ ಸಮ್ಮೇಳನವನ್ನು ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಲಯನ್ಸ್ ಕ್ಲಬ್ ನಾಪೋಕ್ಲು ವತಿಯಿಂದ ಜ. 4ರಂದು ಲಯನ್ಸ್ ರಿಜನ್ ಮೀಟ್ ‘ಬೆಸುಗೆ’ ಸಮ್ಮೇಳನವನ್ನು ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ಕೊಡಗು ಮತ್ತು ಪಿರಿಯಾಪಟ್ಟಣ ವಲಯಕ್ಕೆ ಒಳಪಟ್ಟ 12 ಲಯನ್ಸ್ ಕ್ಲಬ್ ಗಳ ಪ್ರಾಂತೀಯ ಅಧ್ಯಕ್ಷ ಲಯನ್ ಡಾ. ಕೋಟೆರ ಪಂಚಮ್ ತಿಮ್ಮಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲಯನ್ಸ್ ಕ್ಲಬ್ ಕೊಡಗು, ರೆವಿನ್ಯೂ ಜಿಲ್ಲೆಗಳನ್ನು ಹೊಂದಿದ್ದು ಇದರಲ್ಲಿ ಜಿಲ್ಲೆಯ ಲಯನ್ಸ್ ಕ್ಲಬ್ ಗಳು ಭಾಗವಹಿಸುವುದರೊಂದಿಗೆ 4 ರಂದು ಸಂಜೆ 4 ಗಂಟೆಯಿಂದ 9 ಗಂಟೆ ವರೆಗೆ ಅದ್ದೂರಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಂದರ್ಭ 12 ಕ್ಲಬ್ ಗಳ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಲಿಯೋ ಕ್ಲಬ್ ನಾಪೋಕ್ಲು , ಲಯನ್ಸ್ ಜೋನ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದು ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್, ರೊಟೇರಿಯನ್ ಅಭಿನಂದನ್ ಎ . ಶೆಟ್ಟಿ ಮುಖ್ಯ ಭಾಷಣಕಾರರಾಗಿರುವರು. ಕಾರ್ಯಕ್ರಮದಲ್ಲಿ 12 ಕ್ಲಬ್ ಗಳ ಸೇವೆಯನ್ನು ಪರಿಗಣಿಸಿ ಪುರಸ್ಕರಿಸಲಾಗುವುದು. ಸಮ್ಮೇಳನ ಸುಸೂತ್ರವಾಗಿ ಜರುಗಲು ಇದೀಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಕಾರ್ಯಪ್ರವೃತ್ತವಾಗಿದೆ ಎಂದರು.

ಸಮ್ಮೇಳನ ಅಧ್ಯಕ್ಷೆ ಲಯನ್ ಕೇಟೋಳಿರ ರತ್ನ ಚರ್ಮಣ್ಣ, ಕಾರ್ಯದರ್ಶಿ ಲಯನ್ ಮುಕ್ಕಾಟಿರ ವಿನಯ್, ಖಜಾಂಚಿ ಲಯನ್ ಎಳ್ತತಂಡ ಬಿ. ಬೋಪಣ್ಣ, ನಾಪೋಕು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಮಾದೇಯಂಡ ಬಿ. ಕುಟ್ಟಪ್ಪ, ಕಾರ್ಯದರ್ಶಿ ಲಯನ್ ಅಪ್ಪುಮಣಿಯ೦ಡ ಬನ್ಸಿ ಭೀಮಯ್ಯ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!