ಮದ್ಯ ಮಾರಾಟ: 13 ವರ್ಷದ ದಾಖಲೆ ಉಡೀಸ್‌!

KannadaprabhaNewsNetwork |  
Published : May 05, 2026, 02:00 AM IST
ಬೀರು | Kannada Prabha

ಸಾರಾಂಶ

ಏಪ್ರಿಲ್‌ ತಿಂಗಳು ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯ ಕಳೆದ 13 ವರ್ಷದ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿರುವುದು ಐತಿಹಾಸಿಕ ದಾಖಲೆಯಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಏಪ್ರಿಲ್‌ ತಿಂಗಳು ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯ ಕಳೆದ 13 ವರ್ಷದ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿರುವುದು ಐತಿಹಾಸಿಕ ದಾಖಲೆಯಾಗಿದೆ.

ವಿಸ್ಕಿ, ಬ್ರಾಂಡಿ, ರಮ್‌, ಜಿನ್‌ ಸೇರಿದಂತೆ 68.17 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 8.64 ಲೀಟರ್‌) ದಾಖಲೆಯ ಐಎಂಎಲ್‌ ಮದ್ಯ ಮಾರಾಟವಾಗಿದೆ. ಮತ್ತೊಂದೆಡೆ, 50.39 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 7.80 ಲೀಟರ್‌) ಬಿಯರ್‌ ಮಾರಾಟವಾಗಿದೆ. ಒಟ್ಟಾರೆ 118.56 ಲಕ್ಷ ಬಾಕ್ಸ್‌ ಮದ್ಯ ಮಾರಾಟವಾಗಿದ್ದು 2013ರಿಂದ ಈಚೆಗೆ ಕಳೆದ 13 ವರ್ಷದಲ್ಲಿ ಯಾವ ತಿಂಗಳಿನಲ್ಲೂ ಈ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿಲ್ಲ ಎಂಬುದು ವಿಶೇಷವಾಗಿದೆ.

2025 ಏಪ್ರಿಲ್‌ನಲ್ಲಿ 57.44 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದು ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ 68.17 ಲಕ್ಷ ಬಾಕ್ಸ್‌ ಮಾರಾಟವಾಗಿ ಶೇ.18.68 ರಷ್ಟು ಬೆಳವಣಿಗೆಯಾಗಿದೆ. ಇನ್ನು ಬಿಯರ್‌ ವಿಷಯಕ್ಕೆ ಬರುವುದಾದರೆ, 2025 ಏಪ್ರಿಲ್‌ನಲ್ಲಿ 41.60 ಲಕ್ಷ ಬಾಕ್ಸ್‌ ಮಾರಾಟವಾಗಿತ್ತು. ಪ್ರಸಕ್ತ ಏಪ್ರಿಲ್‌ನಲ್ಲಿ 50.39 ಲಕ್ಷ ಬಾಕ್ಸ್‌ ಮಾರಾಟವಾಗಿ ಶೇ.21.13 ಬೆಳವಣಿಗೆಯಾಗಿದೆ.

₹3688 ಕೋಟಿ ರಾಜಸ್ವ ಸಂಗ್ರಹ:

2023 ಜುಲೈನಲ್ಲಿ 66.22 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದೇ ಕಳೆದ 13 ವರ್ಷಗಳಲ್ಲಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಏಪ್ರಿಲ್‌ನ ಮದ್ಯ ಮಾರಾಟ ಹಿಂದಿಕ್ಕಿದೆ. 2025 ಏಪ್ರಿಲ್‌ನಲ್ಲಿ ಮದ್ಯ ಮರಾಟದಿಂದ ಒಟ್ಟಾರೆ ₹2904 ಕೋಟಿ ರಾಜಸ್ವ ಸಂಗ್ರಹವಾಗಿತ್ತು. ಪ್ರಸಕ್ತ ಏಪ್ರಿಲ್‌ನಲ್ಲಿ ₹3688 ಕೋಟಿ ರಾಜಸ್ವ ಸಂಗ್ರಹವಾಗಿ ಶೇ.27 ರಷ್ಟು ಬೆಳವಣಿಗೆಯಾಗಿದೆ.ಬಾಕ್ಸ್‌....

ಎಲೆಕ್ಷನ್‌ ಎಫೆಕ್ಟ್‌ ?

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡು ವಿಧಾನ ಸಭೆಗೆ ಏಪ್ರಿಲ್‌ನಲ್ಲಿ ನಡೆದ ಚುವಾವಣೆಯು ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಳವಾಗಲು ‘ಕಾಣಿಕೆ’ ನೀಡಿರಬಹುದು. ಮತದಾನಕ್ಕೂ ಮುನ್ನ ಈ ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದ್ದರಿಂದ ಕೇರಳ, ತಮಿಳುನಾಡಿಗೆ ಹೊಂದಿಕೊಂಡ ರಾಜ್ಯದ ಗಡಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಅಷ್ಟೇ ಅಲ್ಲ, ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯೂ ಮದ್ಯ ಮಾರಾಟ ಹೆಚ್ಚಳವಾಗಲು ಕಾರಣವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.ಬಾಕ್ಸ್‌....

ಏಪ್ರಿಲ್‌ ತಿಂಗಳ ಐಎಂಎಲ್‌ ಮದ್ಯ ಮಾರಾಟ ಲಕ್ಷ ಬಾಕ್ಸ್‌ಗಳಲ್ಲಿ

2023202420252026

52.9054.4657.4468.17ಬಾಕ್ಸ್‌

ಏಪ್ರಿಲ್‌ ತಿಂಗಳ ಬಿಯರ್‌ ಮಾರಾಟ ಲಕ್ಷ ಬಾಕ್ಸ್‌ಗಳಲ್ಲಿ

2023202420252026

38.5949.7241.6050.39

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ ಇಲಾಖೆ ಅಧಿಕಾರಿ, ನೌಕರರ ನಿಸ್ವಾರ್ಥ ಸೇವೆ ಸ್ಮರಿಸಬೇಕು: ಕೆ.ಎಸ್.ಆನಂದ್
ಸ್ವಚ್ಛತೆ ಮಾಡುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗದು: ಎಂ.ಪಿ.ಸನ್ನಿ