ಸ್ವಚ್ಛತೆ ಮಾಡುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗದು: ಎಂ.ಪಿ.ಸನ್ನಿ

KannadaprabhaNewsNetwork |  
Published : May 05, 2026, 02:00 AM IST
 ನರಸಿಂಹರಾಜಪುರ ತಾಲಕು ಗದ್ದೇಮನೆ ವಿಶ್ವನಾಥ ಚಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಸ್ವಚ್ಛತೆಗೆ ಬೇಕಾದ ಕಿಟ್ ಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರಹಗಲು ರಾತ್ರಿ ಎನ್ನದೆ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗುದು ಎಂದು ಗದ್ದೇಮನೆ ವಿಶ್ವನಾಥ್ ಚಾರಿಟಬಲ್ ಟ್ರಸ್ಟ್ ಸದಸ್ಯ ಎಂ.ಪಿ.ಸನ್ನಿ ಹೇಳಿದರು.

ಗದ್ದೇಮನೆ ವಿಶ್ವನಾಥ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಹಗಲು ರಾತ್ರಿ ಎನ್ನದೆ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗುದು ಎಂದು ಗದ್ದೇಮನೆ ವಿಶ್ವನಾಥ್ ಚಾರಿಟಬಲ್ ಟ್ರಸ್ಟ್ ಸದಸ್ಯ ಎಂ.ಪಿ.ಸನ್ನಿ ಹೇಳಿದರು.

ಶುಕ್ರವಾರ ಪ.ಪಂ. ಆವರಣದಲ್ಲಿ ಪೌರ ಕಾರ್ಮಿಕರಿಗೆ ಗದ್ದೇಮನೆವಿಶ್ವನಾಥ್ ಚಾರಿಟಬಲ್ ಟ್ರಸ್ಟ್ ನಿಂದ ಸ್ವಚ್ಛತೆಗೆ ಬೇಕಾದ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ಈಗಾಗಲೇ ಗದ್ದೇಮನೆ ವಿಶ್ವನಾರ್ಥ ಚಾರಿಟಬಲ್ ಟ್ರಸ್ಟ್ ನಿಂದ ಅನೇಕ ಸೇವಾ ಕಾರ್ಯ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸ್ಪೆಟರ್, ಪುಸ್ತಕಗಳು, ಲೇಖನ ಸಾಮಾಗ್ರಿಗಳು ಹಾಗೂ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿದೆ. ಪ.ಪಂ. ಪೌರ ಕಾರ್ಮಿಕರಿಗೆ ಪಟ್ಟಣದ ಸ್ವಚ್ಛತೆ ಕಾರ್ಯ ಮಾಡಲು ಅವರ ಸುರಕ್ಷತೆಗೆ ಸಲಕರಣೆಗಳ ಅವಶ್ಯಕತೆ ಇದೆ. ಅವರು ಒಂದು ದಿನ ತಮ್ಮ ಕರ್ತವ್ಯ ಮಾಡದೆ ಹೋದರೆ ಪಟ್ಟಣದ ನೈರ್ಮಲ್ಯವೇ ಹಾಳಾಗುತ್ತದೆ. ಅವರ ಸೇವೆ ಮನಗಂಡು ಇಂದು ಸ್ವಚ್ಛತಾ ಕಾರ್ಯಕ್ಕೆ ಬೇಕಾದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದರು. ಟ್ರಸ್ಟ್ ಸದಸ್ಯ ಗದ್ದೇಮನೆ ಸತೀಶ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಾರೆ. ಅವರ ಸುರಕ್ಷತೆ ಜೊತೆಗೆ ಅವರ ಆರೋಗ್ಯದ ಸುರಕ್ಷತೆಯೂ ಮುಖ್ಯವಾಗಿದೆ. ಆದ್ದರಿಂದ ನಮ್ಮ ಚಾರಿಟಬಲ್ ಟ್ರಸ್ಟ್ ನಿಂದ ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗದ್ದೇಮನೆ ವಿಶ್ವನಾಥ್ ಫ್ಯಾನ್ಸ್ ಕ್ಲಬ್ ಅಧ್ಯಕ್ಷ ಮುರುಳಿ, ಪ್ಯಾನ್ಸ್ ಕ್ಲಬ್ ಸದಸ್ಯ ಅಜಿತ್, ಗದ್ದೇಮನೆ ವಿಶ್ವನಾಥ್ ಚಾರಿಟಬಲ್ ಟ್ರಸ್ಟ್ ಸದಸ್ಯರಾದ ಎಂ.ಪಿ.ಮನು,ಸಚಿನ್, ರೀನಾಬೆನ್ನಿ,ಎಲಿಯಾಸ್,ಸಾಜು, ಪ್ರದೀಪ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯ ಮಾರಾಟ: 13 ವರ್ಷದ ದಾಖಲೆ ಉಡೀಸ್‌!
ಆರೋಗ್ಯ ಇಲಾಖೆ ಅಧಿಕಾರಿ, ನೌಕರರ ನಿಸ್ವಾರ್ಥ ಸೇವೆ ಸ್ಮರಿಸಬೇಕು: ಕೆ.ಎಸ್.ಆನಂದ್