ಕೊತ್ತತ್ತಿ ಗ್ರಾಮದಲ್ಲಿ ಈಗಾಗಲೇ ಮದ್ಯದಂಗಡಿ ಇದೆ. ಇದರ ಜೊತೆಗೆ ಹೊಸದಾಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದೆ. ಅದು ಸರ್ಕಾರಿ ಶಾಲೆಗೆ ಸನಿಹದಲ್ಲೇ ಇದೆ. ಕಾನೂನುಬಾಹೀರವಾಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವುದಕ್ಕೆ ಸಹಕಾರ ನೀಡುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಿ ಶಾಲೆಯ ಸಮೀಪವೇ ಮದ್ಯದಂಗಡಿ ತೆರೆಯುತ್ತಿರುವುದಕ್ಕೆ ಅಬಕಾರಿ ಜಿಲ್ಲಾ ಅಧಿಕಾರಿಗಳೇ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕೊತ್ತತ್ತಿ ಗ್ರಾಮದ ಮುಖಂಡರು ಅಬಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ಜಿಲ್ಲಾ ಅಬಕಾರಿ ಕಚೇರಿ ಮುಂಭಾಗ ಸೇರಿದ ಹಲವು ಮುಖಂಡರು ಮೌನ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು. ಗ್ರಾಮದಲ್ಲಿ ಈಗಾಗಲೇ ಮದ್ಯದಂಗಡಿ ಇದೆ. ಇದರ ಜೊತೆಗೆ ಹೊಸದಾಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದೆ. ಅದು ಸರ್ಕಾರಿ ಶಾಲೆಗೆ ಸನಿಹದಲ್ಲೇ ಇದೆ. ಕಾನೂನುಬಾಹೀರವಾಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವುದಕ್ಕೆ ಸಹಕಾರ ನೀಡುತ್ತಿರುವ ಜಿಲ್ಲಾ ಅಬಕಾರಿ ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಗ್ರಾಮದ ಸರ್ಕಾರಿ ಶಾಲೆ, ವಸತಿಗೃಹಗಳು, ಗ್ರಾಮ ಪಂಚಾಯ್ತಿ ಕಾರ್ಯಾಲಯ, ಪಶು ವೈದ್ಯಕೀಯ ಆಸ್ಪತ್ರೆ ಇದ್ದು ಇಲ್ಲಿಯೇ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವುದನ್ನು ಖಂಡಿಸಿದರು.
ಕೂಡಲೇ ಮಂಡ್ಯ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಿ ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆ: ಆರ್.ಕೆ.ವಿದ್ಯಾಸಂಸ್ಥೆಗೆ ಶೇ.99 ರಷ್ಟು ಫಲಿತಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್.ಕೆ.ವಿದ್ಯಾ ಸಂಸ್ಥೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.99 ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಕುಳಿತಿದ್ದ ಕಾಲೇಜು ವಿಜ್ಞಾನ ವಿಭಾಗದ 77 ವಿದ್ಯಾರ್ಥಿಗಳ ಪೈಕಿ 76 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 25, ಪ್ರಥಮ ಶ್ರೇಣಿಯಲ್ಲಿ 51 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿ.ಎ.ಪುಷ್ಪವತಿ 568, ಭೂಮಿಕ 567, ಚೈತನ್ಯ 567, ಎನ್.ಲಕ್ಷ್ಮಿ 562, ವಿ.ಲೇಖನ 562 ಅಂಕ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 46 ವಿದ್ಯಾರ್ಥಿಗಳ ಪೈಕಿ 45 ವಿದ್ಯಾರ್ಥಿಗಳು ತೇರ್ಗಡೆ ಗೊಂಡಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 10, ಪ್ರಥಮ ಶ್ರೇಣಿಯಲ್ಲಿ 36 ವಿದ್ಯಾರ್ಥಿಗಳು ಉತೀರ್ಣಗೊಂಡಿದ್ದಾರೆ. ಬಿ.ಸಿ.ಅಮೂಲ್ಯ 559, ಜಿ.ಆರ್.ತೇಜಶ್ವಿನಿ 545, ಎಂ. ತನುಶ್ರೀ 542, ಶ್ವೇತಾ 539 ಹಾಗೂ ತನುಶ್ರೀ 531 ಅಂಕ ಪಡೆದು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜು ಉತ್ತಮ ಫಲಿತಾಂಶ ಪಡೆಯಲು ಸಂಸ್ಥೆ ಆಡಳಿತ ಅಧಿಕಾರಿ ಮರಿಸ್ವಾಮಿಗೌಡ, ಪ್ರಾಂಶುಪಾಲ ಆರ್.ಪ್ರವೀಣ್, ಶೈಕ್ಷಣಿಕ ಪಾಲುದಾರರಾದ ವೈ.ಎಸ್. ಅಜಯ್ ಕುಮಾರ್, ಕೆ.ಸಿ.ಗೌತಮ್, ಮತ್ತು ಎಲ್.ಎನ್.ಚಂದ್ರಶೇಖರ ಹಾಗೂ ಬೋಧಕ ಮತ್ತು ಬೋಧಕ್ಕೆ ತರ ಸಿಬ್ಬಂದಿಯನ್ನು ಆರ್.ಕೆ. ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ.ರಾಮಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಸಿಇಒ ಆರ್.ಕೀರ್ತನ ನಿಖಿಲ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.