ತಳ ಮಟ್ಟದಿಂದ ಪಕ್ಷ ಸಂಘಟಿಸಲು ಜನರ ಸಮಸ್ಯೆ ಆಲಿಸಿ : ಭಂಡಾರಿ

KannadaprabhaNewsNetwork |  
Published : Jun 28, 2025, 12:18 AM IST
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಅವರು ಉದ್ಘಾಟಿಸಿದರು. ಮಂಜುನಾಥ್‌ ಭಂಡಾರಿ, ಡಾ. ಡಿ.ಎಲ್‌. ವಿಜಯಕುಮಾರ್‌, ಗಾಯತ್ರಿ ಶಾಂತೇಗೌಡ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ತಳ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಎಲ್ಲಾ ಬೂತ್‌ಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಗ್ರಾಮೀಣ ಯುವಕರಿಗೆ ಪಕ್ಷದ ಸಿದ್ಧಾಂತ ಪರಿಚಯಿಸಿ ಸದಸ್ಯರನ್ನಾಗಿಸಿದರೆ ಭವಿಷ್ಯದಲ್ಲಿ ಕಾರ್ಯಕರ್ತರು ಉತ್ತಮ ನಾಯಕರಾಗಲು ಸಾಧ್ಯ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹೇಳಿದರು.

- ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ । ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಳ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಎಲ್ಲಾ ಬೂತ್‌ಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಗ್ರಾಮೀಣ ಯುವಕರಿಗೆ ಪಕ್ಷದ ಸಿದ್ಧಾಂತ ಪರಿಚಯಿಸಿ ಸದಸ್ಯರನ್ನಾಗಿಸಿದರೆ ಭವಿಷ್ಯದಲ್ಲಿ ಕಾರ್ಯಕರ್ತರು ಉತ್ತಮ ನಾಯಕರಾಗಲು ಸಾಧ್ಯ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜಕೀಯ ಪಕ್ಷ ಹಾಗೂ ವೈಯಕ್ತಿಕ ಕುಟುಂಬ ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬವನ್ನು ಸುರಕ್ಷಿತವಾಗಿ ಕಾಪಾಡುವಂತೆ, ಮಾತೃ ಸಮಾನ ಪಕ್ಷವನ್ನು ನಿಷ್ಟೆ, ಪ್ರಾಮಾಣಿಕತೆ ಹಾಗೂ ಚುರುಕಿನಿಂದ ಸಂಘಟಿಸುವ ಜೊತೆಗೆ ರಾಹುಲ್‌ಗಾಂಧಿ ಆಲೋಚನೆಗಳಿಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಒತ್ತು ನೀಡಬೇಕು ಎಂದರು.

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೂತನ ತಂಡ ಸಭೆಗಳನ್ನು ನಡೆಸಿ ಸ್ಥಳೀಯ ಸಮಸ್ಯೆ ಪರಿಹರಿಸುವ ಗುಣ ಬೆಳೆಸಿಕೊಳ್ಳಬೇಕು. ಧ್ವನಿಯಿಲ್ಲದವರಿಗೆ ಧ್ವನಿ, ಸಾಮಾಜಿಕ ಜ್ಞಾನದ ಕೊರತೆ ಇರುವವರಿಗೆ ಆತ್ಮಸ್ಥೈರ್ಯ ತುಂಬುವ ಮನೋಭಾವ ರೂಢಿಸಿಕೊಂಡಲ್ಲಿ ಜನತೆಯಲ್ಲಿ ವಿಶ್ವಾಸತೆ ಮೂಡಲಿದೆ ಎಂದು ಹೇಳಿದರು.ಭವಿಷ್ಯದ ಪ್ರಜೆಗಳು ದುರಾಡಳಿತ ಸರ್ಕಾರದಿಂದ ದಾರಿ ತಪ್ಪದಿರಲಿ ಎಂದು ರಾಹುಲ್‌ಗಾಂಧಿಯವರು ಯುವ ಕಾಂಗ್ರೆಸ್ ಸ್ಥಾಪಿಸಿ ಯುವಕ, ಯುವತಿಯರಲ್ಲಿ ಅರಿವು ಮೂಡಿಸಿದ್ದಾರೆ. ಆಯಾ ಗ್ರಾಮಗಳ ಯುವ ಪೀಳಿಗೆಗೆಯನ್ನು ಪಕ್ಷದ ಸದಸ್ಯರ ನ್ನಾಗಿಸಿ ಮುಂದಿನ ಚುನಾವಣಾ ಅಖಾಡಕ್ಕೆ ಮೊದಲ ಹೆಜ್ಜೆ ಇರಿಸುವ ಜೊತೆ ರಾಜ್ಯದ ಪಂಚ ಗ್ಯಾರಂಟಿಗಳ ಯೋಜನೆಗಳ ಮಾಹಿತಿ ತಲುಪಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಸಮಾಜದಲ್ಲಿ ನಾಯಕರಾಗಲು ಮೊದಲು ಸಾಮಾನ್ಯ ರೊಂದಿಗೆ ಬೆರೆಯುವ ಗುಣ ಬೆಳೆಸಿಕೊಳ್ಳಬೇಕು. ಚುನಾವಣೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ, ಜನರ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ಬಾರದೇ ಮನಸ್ಸಿನಲ್ಲಿ ಶಾಶ್ವತವಾಗಿ ನಂಬಿಕೆ ಉಳಿಸಿಕೊಳ್ಳುವ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.ಪಕ್ಷ ಸಂಘಟನೆ ಎಂದರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡರೆ ಸಾಲದು, ಜನರನ್ನು ಭೇಟಿ ಮಾಡಿ ಕಾಂಗ್ರೆಸ್ ಸಿದ್ಧಾಂತ, ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಚರ್ಚಿಸಿ ಮನವರಿಕೆ ಮಾಡಿದಲ್ಲಿ ಎಲ್ಲೆಡೆ ಕಾಂಗ್ರೆಸ್ ಸಂಘಟಿತವಾಗಿ ಬೆಳೆಯಬಹುದು ಎಂದರು.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಕ್ಷೇತ್ರವಾದ ಚಿಕ್ಕಮಗಳೂರು ವಿಶೇಷತೆ ಹೊಂದಿದೆ. ಮಲೆನಾಡಿನ ಪರಿಸರದಂತೆ ಶುದ್ಧ ಮನಸ್ಸಿನ ನಿವಾಸಿಗಳಾದ ಕಾರಣ ರಾವಣ ನಂತ ಹಿಂದಿನ ಶಾಸಕರನ್ನು ಸೋಲಿಸಿ ಮನೆಗೆ ಕಳುಹಿಸಲು ಯುವ ಕಾಂಗ್ರೆಸ್, ಎನ್‌ಎಸ್‌ಯುಐ ಹಾಗೂ ಮಹಿಳೆಯರ ಶಕ್ತಿಯೇ ಕಾರಣ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, ಯುವ ಕಾಂಗ್ರೆಸ್ ಸಾರಥ್ಯ ವಹಿಸಿರುವ ಅಧ್ಯಕ್ಷರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಕ್ಷೇತ್ರದಲ್ಲಿ ನಿರಂತರವಾಗಿ ಸಾಗಲು ಇಚ್ಚಾಶಕ್ತಿಯ ಅವಶ್ಯಕತೆಯಿದೆ. ಜನರೊಂದಿಗೆ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು. ಗಟ್ಟಿಯಾದ ವಿಚಾರನ್ನು ಪ್ರಸ್ತಾಪಿಸಬೇಕು. ಪಕ್ಷ ಹಾಗೂ ರಾಜ್ಯ ಸರ್ಕಾರ ಅಭಿವೃದ್ದಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎನ್.ಆದಿಲ್, ಅಜಿತ್, ಶಿವಪ್ರಸಾದ್, ಬಾಹುಬಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಜಿತ್, ಮುಖಂಡರಾದ ತನೋಜ್‌ ನಾಯ್ಡು, ಶಾದಬ್, ಸಿ.ಎನ್.ಅಕ್ಮಲ್, ಶಿವಕುಮಾರ್ ಉಪಸ್ಥಿತರಿದ್ದರು.

27 ಕೆಸಿಕೆಎಂ 3ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಉದ್ಘಾಟಿಸಿದರು. ಮಂಜುನಾಥ್‌ ಭಂಡಾರಿ, ಡಾ. ಡಿ.ಎಲ್‌. ವಿಜಯಕುಮಾರ್‌, ಗಾಯತ್ರಿ ಶಾಂತೇಗೌಡ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌