ಪುರಾಣ ಕೇಳುವುದರಿಂದ ಆತ್ಮ ಚೈತನ್ಯ ಮೂಡುವುದು: ಶಾಂತಮಲ್ಲ ಶ್ರೀ

KannadaprabhaNewsNetwork |  
Published : Feb 16, 2024, 01:47 AM IST
 14-ಮಾನ್ವಿ-1: | Kannada Prabha

ಸಾರಾಂಶ

ಜಾನೇಕಲ್ ಗ್ರಾಮದಲ್ಲಿ ಶ್ರೀಜೀವೈಕ್ಯ ವಿಜಯ ರುದ್ರ ಮಹಾಸ್ವಾಮಿಗಳ ಹೀರೆಮಠದ ಆವರಣದಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ವಿಜಯರುದ್ರ ಮಹಾಸ್ವಾಮಿಗಳ ಪುರಾಣ ಪ್ರವಚನ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಮಾನ್ವಿ

ಪುರಾಣ ಪುಣ್ಯಕಥೆಗಳನ್ನು ಕೇಳುವುದರಿಂದ ಆತ್ಮ ಚೈತನ್ಯ ಮೂಡುತ್ತದೆ. ಇಂದು ವಿಶ್ವದಲ್ಲಿಯೇ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಮ್ಮ ದೇಶ ಉನ್ನತ ಸ್ಥಾನ ಹೊಂದಿದೆ ಎಂದು ರಾಯಚೂರಿನ ಕಿಲ್ಲೇಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ತಾಲೂಕಿನ ಜಾನೇಕಲ್ ಗ್ರಾಮದಲ್ಲಿನ ಶ್ರೀ ಜೀವೈಕ್ಯ ವಿಜಯ ರುದ್ರ ಮಹಾಸ್ವಾಮಿಗಳ ಹೀರೆಮಠದ ಆವರಣದಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ವಿಜಯರುದ್ರ ಮಹಾಸ್ವಾಮಿಗಳ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮಿಗಳು, ಜೀವನದುದ್ದಕ್ಕೂ ಬಾಳಿ ಬದುಕುವುದಕ್ಕೆ ಪ್ರತಿಯೊಬ್ಬ ವ್ಯಕ್ತಿಗಳಿಗೂ ಕೂಡ ಅಧ್ಯಾತ್ಮಿಕ ಚಿಂತನೆಗಳನ್ನು ಕೈಗೊಳ್ಳದೆ ಹೊದಲ್ಲಿ ಜೀವನದಲ್ಲಿ ನಮ್ಮಗೆ ಬರುವ ನೋವು ನಲಿವು ಗಳನ್ನು ಎದುರಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದರು.

ಬೃಹನ್ಮಠ ಕರೇಗುಡ್ಡ ಶ್ರೀ ಮಹಾಂತೇಶ್ವರ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಇದೇ ವೇಳೆ ಅಯೋಧ್ಯ ಶ್ರೀರಾಮ ಮಂದಿರ ಶಿಲ್ಪಿ ವೀರೇಶ ಸಣ್ಣ ವೀರಭದ್ರಪ್ಪ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪುರಾಣ ಪ್ರವಚನವನ್ನು ಖರಾಬದಿನ್ನಿಯ ದೊಡ್ಡಬಸ್ಸಯ್ಯ ಶಾಸ್ತ್ರಿಗಳು ನೀಡಿದರು. ಸಂಗೀತ ಸೇವೆಯನ್ನು ಕರೇಗುಡ್ಡ ಅಮರೇಶ ಗವಾಯಿ ಸಾಲಿಮಠ ನೀಡಿದರು. ತಬಲ ಸಾತ್ ಆರ್. ಮಲ್ಲಿನಾಥ ಹಳ್ಳಿಮಠ ನೀಡಿದರು.

ಈ ವೇಳೆ ಶ್ರೀಮಠದ ಆರ್.ಎಸ್. ಸೂಗೂರಯ್ಯ ಸ್ವಾಮಿ ಹಿರೇಮಠ, ಶರಣಯ್ಯ ಸ್ವಾಮಿ,ಗ್ರಾಪಂ ಅಧ್ಯಕ್ಷ ಚನ್ನ ಬಸವ ಪೊಲೀಸ್ ಪಾಟೀಲ್ ಸೇರಿ ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!