ಭಾಗವತ ಶ್ರವಣದಿಂದ ಆಯುಷ್ಯ ಸಾರ್ಥಕ: ಭೀಮಸೇನಾಚಾರ್ಯ ಮಳಗಿ

KannadaprabhaNewsNetwork |  
Published : Jul 28, 2025, 12:32 AM IST
27ಎಸ್‌ವಿಆರ್‌01 | Kannada Prabha

ಸಾರಾಂಶ

ವೈರಾಗ್ಯವೇ ಪ್ರಮುಖ ಉದ್ದೇಶವಾದ ಭಾಗವತದ ಕಥಾ ಶ್ರವಣದಿಂದ ಆಯುಷ್ಯ ಸಾರ್ಥಕ. ಶಾಸ್ತ್ರ ವಿಹಿತವಾದ ಜೀವನದಿಂದ ಇಂದ್ರಿಯ ನಿಗ್ರಹ ಸಾಧ್ಯ.

ಸವಣೂರು: ಸಮಸ್ತ ಜೀವ ಚೇತನಗಳಿಗಾಗಿಯೇ ಈ ಜಗತ್ತಿನ ಸೃಷ್ಟಿಯನ್ನು ಮಾಡಿರುವ ಭಗವಂತ, ಮೋಹ ಹಾಗೂ ಮಾಯೆಯ ಆವರಣವನ್ನು ರೂಪಿಸಿದ್ದಾನೆ. ನಾನು ಎಂಬ ಅಭಿಮಾನವನ್ನು ಮಾತ್ರ ಹೊರತುಪಡಿಸಿ, ಉಳಿದೆಲ್ಲವೂ ಸತ್ಯ ಸೃಷ್ಟಿಯಾಗಿದೆ ಎಂದು ಧಾರವಾಡದ ವಿದ್ವಾಂಸ ಭೀಮಸೇನಾಚಾರ್ಯ ಮಳಗಿ ತಿಳಿಸಿದರು. ಪಟ್ಟಣದ ಸತ್ಯಬೋಧ ಸ್ವಾಮೀಜಿ ಅವರ ಮೂಲ ವೃಂದಾವನ ಸನ್ನಿಧಾನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರವಣ ಯಜ್ಞದಲ್ಲಿ ಭಾಗವತದ ದ್ವಿತೀಯ ಸ್ಕಂದದ ಪ್ರವಚನ ನೀಡಿದರು.ವೈರಾಗ್ಯವೇ ಪ್ರಮುಖ ಉದ್ದೇಶವಾದ ಭಾಗವತದ ಕಥಾ ಶ್ರವಣದಿಂದ ಆಯುಷ್ಯ ಸಾರ್ಥಕ. ಶಾಸ್ತ್ರ ವಿಹಿತವಾದ ಜೀವನದಿಂದ ಇಂದ್ರಿಯ ನಿಗ್ರಹ ಸಾಧ್ಯ. ಪ್ರತಿಯೊಂದು ಯಜ್ಞ, ಸತ್ಕರ್ಮ, ಜ್ಞಾನದ ಉದ್ದೇಶ ಭಗವಂತನಾಗಿದ್ದಾನೆ ಎಂದರು.ಶ್ರೀಮಠದ ಪರ್ಯಾಯಸ್ಥರಾದ ಅವಿನಾಶ ಆಚಾರ್ಯ ರಾಯಚೂರು, ಅಭಿಷೇಕ ಆಚಾರ್ಯ ರಾಯಚೂರು ಶ್ರವಣ ಯಜ್ಞದ ನೇತೃತ್ವ ವಹಿಸಿದ್ದರು.ವಿದ್ವಾಂಸರಾದ ಸುರೇಶ ಆಚಾರ್ಯ ರಾಯಚೂರು, ಸತ್ಯಪ್ರಮೋದ ಆಚಾರ್ಯ ಮಳಗಿ, ರಂಗಾಚಾರ್ಯ ರಾಯಚೂರು, ಆಯಿ ಆಚಾರ್ಯರು, ಮಾಧವ ಆಚಾರ್ಯ ಸಿಂಗನಮಲ್ಲಿ, ಕೇಶವ ಪಡಸಲಗಿ, ಸುರೇಶ ದೇಶಪಾಂಡೆ, ಪ್ರವೀಣ ಕುಲಕರ್ಣಿ, ಪಾಂಡುರಂಗ ರಿತ್ತಿ, ವಿಜಯೀಂದ್ರ ರಿತ್ತಿ ಭಜನಾ ಮಂಡಳಿಯ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.

ನಮ್ಮ ಕ್ಲಿನಿಕ್ ಉದ್ಘಾಟನೆ ಇಂದು

ರಾಣಿಬೆನ್ನೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ನಗರಸಭೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಜು. 28ರಂದು ಬೆಳಗ್ಗೆ 11ಕ್ಕೆ ನಗರದ ತಳವಾರ ಓಣಿ, ಗಾಂಧಿ ಗಲ್ಲಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ.ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರಡೆಣ್ಣನವರ, ಸದಸ್ಯ ಶಶಿಧರ ಬಸೇನಾಯಕ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ತಹಸೀಲ್ದಾರ್ ಆರ್.ಎಚ್. ಭಾಗವಾನ, ತಾಪಂ ಇಒ ಪರಮೇಶ, ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಯಾನಂದ ಎಂ., ತಾಲೂಕು ಆರೋಗ್ಯ ಇಲಾಖೆ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ಕೂಡಲೇ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿ : ತೇಜಸ್ವಿ ಆಗ್ರಹ
ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!