ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಜ್ಞಾನಾರ್ಜನೆ ಹೆಚ್ಚಲೆಂದು ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಸಿಕೊಟ್ಟಿದ್ದೇವೆ. ಶುದ್ಧವಾದ ಜೇನುತುಪ್ಪದಿಂದ ಉತ್ತರಾಣಿ ಕಡ್ಡಿಯ ಮೂಲಕ ಮಕ್ಕಳ ನಾಲಿಗೆಯ ಮೇಲೆ ಶಾರಧಮಾತೆಯ ಬೀಜಾಕ್ಷರ ಮಂತ್ರದ ಮೂಲಕ ಅಕ್ಷರ ಬರೆದು ಆಶೀರ್ವಾದ ನೀಡಲಾಗಿದೆ.
ಪಾಂಡವಪುರ:
ತಾಲೂಕಿನ ಬೇಬಿಗ್ರಾಮದ ದುದೇಂಡೇಶ್ವರ ಮಠದ ಡಿಎಂಎಸ್ ಜ್ಞಾನಾಕುಟೀರ ಪಾಠ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಸಂಸ್ಥೆ ಅಧ್ಯಕ್ಷ ಡಾ.ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗಳು ನಡೆಸಿದರು.
ಬೇಬಿಬೆಟ್ಟದ ಶ್ರೀದುದಂಡೇಶ್ವರ ಮಠದ ಆವರಣದಲ್ಲಿ ಇರುವ ಲಿಂಗೈಕ್ಯ ಶ್ರೀಮರೀದೇವರು ಸ್ವಾಮೀಜಿಗಳ ಗದ್ದುಗೆಯಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಶ್ರೀತ್ರಿನೇತ್ರ ಸ್ವಾಮೀಜಿಗಳು ಮಕ್ಕಳ ನಾಲಿಗೆಯ ಮೇಲೆ ಉತ್ತರಾಣಿ ಕಡ್ಡಿಯಿಂದ ಜೇನುತುಪ್ಪದಲ್ಲಿ ಶಾರದಮಾತೆಯ ಬೀಜಾಕ್ಷದ ಮಂತ್ರವನ್ನು ಬರೆಯುವ ಮೂಲಕ ಅಕ್ಷರಾಭ್ಯಾಸ ನಡೆಸಿಕೊಟ್ಟರು.
ಬಳಿಕ ಮಾತನಾಡಿದ ಅವರು, ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಜ್ಞಾನಾರ್ಜನೆ ಹೆಚ್ಚಲೆಂದು ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಸಿಕೊಟ್ಟಿದ್ದೇವೆ. ಶುದ್ಧವಾದ ಜೇನುತುಪ್ಪದಿಂದ ಉತ್ತರಾಣಿ ಕಡ್ಡಿಯ ಮೂಲಕ ಮಕ್ಕಳ ನಾಲಿಗೆಯ ಮೇಲೆ ಶಾರಧಮಾತೆಯ ಬೀಜಾಕ್ಷರ ಮಂತ್ರದ ಮೂಲಕ ಅಕ್ಷರ ಬರೆದು ಆಶೀರ್ವಾದ ನೀಡಲಾಗಿದೆ ಎಂದರು.
ಮಕ್ಕಳು ಹೆಚ್ಚಿನ ಜ್ಞಾನಾರ್ಜನೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು, ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಾಲೆಯನ್ನು ಆರಂಭಿಸಲಾಗಿದೆ. ಎಲ್ಲಾ ಮಕ್ಕಳು ಸದ್ಬಳಕೆಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಅಡಳಿತಧಿಕಾರಿ ಚಿಕ್ಕತಿಮ್ಮಯ್ಯ, ಜ್ಙಾನ ಕುಟಿರ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಮಾಸಂಜಯ್, ಶಿಕ್ಷಕರಾದ ಮಂಜು, ವಾಣಿಶ್ರೀ, ಪ್ರೀತಿ, ನವೀನ್, ಲತಾ, ಪಲ್ಲವಿ ಸೇರಿದಂತೆ ಪೋಷಕರು ಇದ್ದರು.
ಚನ್ನಮ್ಮ ನಿಧನಕ್ಕೆ ತ್ರಿನೇತ್ರ ಸ್ವಾಮೀಜಿ ಸಂತಾಪಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ನಿಧನಕ್ಕೆ ಡಾ.ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ.
ಚನ್ನಮ್ಮ ಅವರು ಎಚ್.ಡಿ.ದೇವೇಗೌಡರ ರಾಜಕೀಯ ಜೀವನಕ್ಕೆ ಬೆನ್ನೆಲುಬಾಗಿ ಜತೆಯಲ್ಲಿ ನಿಂತವರು. ಅವರು ಬೇರೆ ರಾಜಕಾರಣಿಗಳ ಪತ್ನಿಯಂತೆ ಎಂದಿಗೂ ರಾಜಕೀಯ ಮುನ್ನೆಲೆಗೆ ಬಂದವರು. ಗಜಕೇಸರಿ ಯೋಗದಲ್ಲಿ ಜನಿಸಿದ ಚನ್ನಮ್ಮ ಅವರು ದೇವೇಗೌಡರ ಮನೆಗೆ ಹೋದ ಬಳಿಕ ಆ ಮನೆ ಸಂವೃದ್ಧಿಯಾಯಿತು.ಎಂದಿಗೂ ಅವರು ರಾಜಕೀಯದ ಹೆಸರು ಸಂಪಾದನೆ ಮಾಡಬೇಕೆಂದು ಬಯಸಿದವರಲ್ಲ. ಅಂತಹ ಮಹಿಳೆ ನಿಧನರಾಗಿರುವುದು ಎಲ್ಲರಿಗೂ ದುಃಖ ತರುವ ವಿಚಾರವಾಗಿದೆ. ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ಅವರ ಕುಟುಂಬಕ್ಕೆ ನೀಡಲೆಂದು ಆಶೀರ್ವಾದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.