ಕನ್ನಡಪ್ರಭ ವಾರ್ತೆ ಮೂಡಲಗಿ
ಸಮೀಪದ ಮುಸಗುಪ್ಪಿಯ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ನಡೆದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದರ ಅನುದಾನದಲ್ಲಿ ನಿರ್ಮಾಣವಾದ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು. ಅನ್ನ, ಆರೋಗ್ಯ, ಅಕ್ಷರ ಹಾಗೂ ಆಶ್ರಯ ಇವು ಮನುಷ್ಯನಿಗೆ ಬೇಕಾದ ನಾಲ್ಕು ಆಧಾರ ಸ್ತಂಭಗಳು ಇವುಗಳಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವುದೇ ಅಕ್ಷರ ಜ್ಞಾನ. ಅಂತಹ ಅಕ್ಷರ ಜ್ಞಾನ ದೇಗುಲದ ಶತಮಾನೋತ್ಸವ ಸಮಾರಂಭದಲ್ಲಿ ಗ್ರಾಮದ ಹಳೆಯ ವಿದ್ಯಾರ್ಥಿಗಳು ಸೇರಿ ಅಭಿವೃದ್ಧಿಪಡಿಸುವ ಮೂಲಕ ಒಳ್ಳೆಯ ಕಾರ್ಯಕ್ಕೆ ಮುನ್ನುಡಿ ಹಾಕಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್, ಆರೋಗ್ಯ ಕ್ಷೇತ್ರದಲ್ಲಿ ಜಿಮ್, ಆಂಬುಲೆನ್ಸ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮುದಾಯ ಭವನ, ಸಂಗೀತ ಕ್ಷೇತ್ರದಲ್ಲಿ ರಂಗ ಮಂದಿರ, ಪ್ರಯಾಣಿಕರಿಗೆ ಬಸ್ ತಂಗುದಾಣ ಹೀಗೆ ₹ 50 ಲಕ್ಷಕ್ಕಿಂತ ಹೆಚ್ಷು ಅನುದಾನ ಮುಸಗುಪ್ಪಿ ಗ್ರಾಮಕ್ಕೆ ನೀಡಿದ್ದನ್ನು ಸ್ಮರಿಸಿ, ಗ್ರಾಮಸ್ಥರ ಸಹಕಾರ ನೆನದು ಸಂತಸ ವ್ಯಕ್ತಪಡಿಸಿದರು.ಸಂಸದ ಜಗದೀಶ ಶೆಟ್ಟರ ಮಾತನಾಡಿ, ಶೈಕ್ಷಣಿಕ ವಿಷಯ ಎಲ್ಲರಲ್ಲಿ ಜಾಗೃತಿ ಬಂದಿದೆ. ಇದರಿಂದ ಹಳ್ಳಿಗಳಲ್ಲಿನ ಹೊಸ ಪ್ರತಿಭೆಗಳು ಹೊರ ಬರುತ್ತಿವೆ, ಇಂಗ್ಲೀಷ ಕಲಿತರೆ ಮಾತ್ರ ನಾವು ಜಾಣರು ಎಂಬ ತಪ್ಪು ಕಲ್ಪನೆಯನ್ನು ಪಾಲಕರು ಬೀಡಬೇಕು. ನಾನು ಸಹ ಮಾತೃ ಭಾಷೆಯಲ್ಲಿ ಶಾಲೆಯಲ್ಲಿ ಕಲಿತು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಕೀಳರಿಮೆ ಬಿಟ್ಟು ಮಾತೃ ಭಾಷೆಯಲ್ಲಿಯೇ ವಿದ್ಯಾಭ್ಯಾಸ ಮಾಡಬೇಕು. ಅತಿಯಾದ ವಿದ್ಯಾಭ್ಯಾಸದ ನಂತರ ತಂದೆ ತಾಯಿಯನ್ನು ಬಿಟ್ಟು ಬೀಡಬೇಡಿ ಎಂದು ಸಲಹೆ ನೀಡಿದರು.ವಿ.ಪ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಶಿಕ್ಷಣ ಮಹತ್ವ ಬಹಳ ದೊಡ್ಡದಾಗಿದೆ. ಪ್ರತಿಯೊಬ್ಬರು ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಸಂತಸದ ವಿಷಯವಾದರೂ, ನೌಕರಿಗೆ ಬೇರೆಯವರ ಹತ್ತಿರ ಕೈಚಾಚದೆ ಸಾವಲಂಬನೆಯ ಬದುಕು ಹಾಗೂ ಸ್ವಉದ್ಯೋಗಕ್ಕೂ ಆದ್ಯತೆ ನೀಡುವಂತೆ ತಿಳಿಸಿದರು.
ಕವಿತಾಳದ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಹೊಸಗುರ್ಗದ ಪುರುಷೋತ್ತಾಮನಂದಪುರಿ ಮಹಾಸ್ವಾಮೀಜಿ, ಗೋಕಾಕದ ಬಸವಪ್ರಭು ಮಹಾಸ್ವಾಮೀಜಿ, ಹಂದಿಗುಂದದ ಶಿವಾನಂದ ಮಹಾಸ್ವಾಮೀಜಿ ಆಶಿರ್ವಚನ ನೀಡಿದರು.ನಿವೃತ್ತ ಶಿಕ್ಷಕ ನಿಂಗಪ್ಪ ಯಕ್ಕುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಶಿಕ್ಷಣ ಇಲಾಖೆಯ ಡಿ.ವೈ ಪಿ.ಸಿ ರೇವತಿ ಮಠದ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹೀರೆಮಠ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಬಾಲಗೌಡ ಪಾಟೀಲ, ಓಸಾಟ್ ಸಂಸ್ಥೆಯ ಗೋಪಾಲ ಹಂಜಕ್ಕಿ, ಬಸವರಾಜ ಗಾಡವಿ, ಪ್ರಕಾಶ ಗೊಂಧಿ, ನಿಂಗಪ್ಪ ಯಕ್ಕುಂಡಿ, ಸಂಜು ಹೊಸಕೋಟಿ, ಬಾಳಪ್ಪ ಗಂಗನ್ನವರ, ಮುರಗೆಪ್ಪ ಗಾಡವಿ, ಶಿವಾನಂದ ಕಂಬಾರ, ಬಾಳೇಶ ಬುಜನವರ, ಮಲ್ಲಕಾರ್ಜುನ ಬುಜನ್ನವರ, ನಿಂಗಪ್ಪ ಬಡ್ನಿಂಗೋಳ ಇದ್ದರು. ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಸತ್ಕರಿಸಲಾಯಿತು. ಗ್ರಾಮಸ್ಥರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಸುಭಾಪೂರಮಠ ಸ್ವಾಗತಿಸಿದರು, ಶಿಕ್ಷಕ ಎಸ್.ಕೆ.ಮಠದ ನಿರೂಪಿಸಿದರು, ಪ್ರಭಾರಿ ಮುಖ್ಯೋಪಾಧ್ಯಾಯ ಶಂಕರ ಗಾಡವಿ ವಂದಿಸಿದರು,------ಕೋಟ್‌ಪ್ರತಿ ವರ್ಷ ಪ್ರವಾಹದಿಂದ ಮುಳುಗಡೆಯಾಗುವ ಮುಸಗುಪ್ಪಿ-ತಿಗಡಿ ಸಂಪರ್ಕ ಸೇತುವೆಯನ್ನು ಎತ್ತರಿಸುವ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿಯ ಸಚಿವ ನಿತೀನ ಗಡ್ಕರಿ ಅವರ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಮಾರು ₹ 50 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಶೀಘ್ರ ಕೈಗೆತ್ತಿ ಕೊಳ್ಳಲು ಒತ್ತಾಯಿಸಲಾಗಿದೆ. ಅದಕ್ಕೆ ನಿರಂತರ ಪ್ರಯತ್ನ ಮಾಡುವೆ.ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ