ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ಹಮ್ಮಿಕೊಂಡಿರುವ 4 ದಿನಗಳ 14ನೇ ಪ್ರೇರಣಾ ಉತ್ಸವದ ಅಂಗವಾಗಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂದೇಶ, ಧರ್ಮ, ಚಿಂತನೆ, ನಿಸ್ವಾರ್ಥ ಸಾಮಾಜಿಕ ಸೇವೆ ನಿರಂತರವಾಗಿ ನಡೆಯಬೇಕು. ಭಗಂವತ ಅಧಿಕಾರ ಮತ್ತು ಶ್ರೀಮಂತಿಕೆ ಕೊಟ್ಟಾಗ ಸಮಾಜಸೇವೆ ಮಾಡಬೇಕು, ಅಂದಾಗ ಭಗವಂತ ನಮಗೆ ಒಲಿಯುತ್ತಾನೆ ಎಂದು ತಿಳಿಸಿದರು.ಜೋಡಕುರಳಿಯ ಸಿದ್ದಾರೂಢ ಮಠದ ಚಿದ್ವಾನಾನಂದ ಮಹಾಸ್ವಾಮೀಜಿ ಮಾತನಾಡಿ, ಜೊಲ್ಲೆ ದಂಪತಿ ಪ್ರತಿ ವರ್ಷ ಪ್ರೇರಣಾ ಉತ್ಸವ ಏರ್ಪಡಿಸಿ ಪ್ರೇರಣೆ ಕೊಡುವ ಅಪರೂಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರಿಂದ ಜೊಲ್ಲೆ ಜಾತ್ರೆಯಾಗಿ ಪರಿಣಮಿಸುತ್ತಿದೆ. ಪ್ರತಿಯೊಬ್ಬರು ಭಗವಂತನ ಪರೀಕ್ಷೆಯಲ್ಲಿ ಫೇಲಾಗಬಾರದು, ಬಂದದ್ದನ್ನು ಸ್ವೀಕರಿಸಿಕೊಂಡು ಮುನ್ನಡೆಯಬೇಕೆಂದರು.ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 14ನೇ ಪ್ರೇರಣಾ ಉತ್ಸವ 4 ದಿನಗಳ ಕಾಲ ಆಚರಿಸುತ್ತಿದ್ದು, ಉತ್ಸವದ ಅಂಗವಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರಿಗಾಗಿ ರಂಗೋಲಿ ಮತ್ತು ಸಾಂಪ್ರದಾಯಿಕ ಉಡುಗೆ ಸ್ಪರ್ಧೆಗಳನ್ನು ಆಯೋಜಿಸಿದೆ. ಅಲ್ಲದೇ, ಪ್ರೇರಣಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊಲ್ಲೆ ಗ್ರುಪ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ ಅಧ್ಯಕ್ಷೆ ಜ್ಯೋತಿಪ್ರಸಾದ ಜೊಲ್ಲೆ ಸೇರಿ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸದ್ಯಸರು, ಅಧಿಕಾರಿಗಳು, ಅಂಗಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಪಾಲಕರು, ಉಪಸ್ಥಿತರಿದ್ದರು.