ಜ್ಞಾನಭಾರತಿ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಣಿಗಲ್ಈ ಮಣ್ಣಿನ ಸಂಸ್ಕೃತಿಯಾದ ಅಕ್ಷರಾಭ್ಯಾಸಕ್ಕೆ ಹೆಚ್ಚು ಮಹತ್ವವಿದೆ. ಈಗ ಈ ಕಾರ್ಯಕ್ರಮ ನಶಿಸುತ್ತಿದೆ. ಅದನ್ನು ಮುಂದುವರಿಸುವ ಕೆಲಸವನ್ನು ನಮ್ಮ ವಿದ್ಯಾ ಸಂಸ್ಥೆಯಿಂದ ಆರಂಭಿಸಿದ್ದೇವೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.
ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಸನಾತನ ಸಂಸ್ಕೃತಿಯಲ್ಲಿ ಅಕ್ಷರಾಭ್ಯಾಸಕ್ಕೆ ತನ್ನದೇ ಆದ ಮಹತ್ವವಿದೆ. ಉಳ್ಳವರು ಹಲವಾರು ದೇಗುಲಗಳಿಗೆ ಹೋಗಿ ಅಲ್ಲಿನ ಗುರುಗಳ ಸಮ್ಮುಖದಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಆ ಕೆಲಸ ಪ್ರತಿ ಮಗುವಿಗೂ ತಲುಪಿಸಬೇಕೆಂದು ನಮ್ಮ ಸಂಸ್ಥೆ ಅಕ್ಷರಾಭ್ಯಾಸದ ಕಾರ್ಯವನ್ನು ಮುಂದುವರಿಸುತ್ತಿದೆ ಎಂದು ಹೇಳಿದರು,
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಎಂಬುದು ಸ್ಪರ್ಧೆ ಆಗಿದೆ. ಅದು ಒಳ್ಳೆಯ ರೀತಿ ಆಗಿರಬೇಕು. ಅದರಿಂದ ಮಕ್ಕಳಿಗೆ ಒಳಿತಾಗಬೇಕು ಬೇರೆ ರೀತಿ ಸಮಸ್ಯೆಗಳು ಉಂಟಾಗಬಾರದು ಎಂದರು,ಶಿಕ್ಷಣ ತಜ್ಞ ಕುಂದೂರು ನರಸಿಂಹಯ್ಯ ಮಾತನಾಡಿ, ಮಕ್ಕಳಿಗೆ ಪಾಠ ಮಾಡುವ ಗುರು ಶಾಲೆಗೆ ಬರುವ ಮುನ್ನ ಆ ದಿನದ ಪಾಠದ ತಯಾರಿ ಆಗಿರಬೇಕು. ಶಿಕ್ಷಣದಲ್ಲಿ ಸ್ವಚ್ಛತೆ ಮತ್ತು ತರಬೇತಿ ಬಹು ಮುಖ್ಯ. ನಮ್ಮ ನಡವಳಿಕೆಯನ್ನು ಮಕ್ಕಳು ಅನುಸರಿಸುತ್ತಾರೆ. ಆದ್ದರಿಂದ ಶಿಕ್ಷಣ ಸಮೂಹದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು,
ಪ್ರತಿ ಮಗು ಜೊತೆಗೂಡಿ ತಾಯಂದಿರು ತಟ್ಟೆಯಲ್ಲಿದ್ದ ಅಕ್ಕಿಯ ಮೇಲೆ ಅರಿಶಿಣ ಕೊಂಬಿನ ಮುಖಾಂತರ ಓಂ ಅಕ್ಷರವನ್ನು ಬರೆಸಲಾಯಿತು. ನಂತರ ಗಣೇಶನ ಹೆಸರನ್ನು ಸ್ಲೇಟ್‌ಗಳ ಮೇಲೆ ಬರೆಸಿ ಅದಕ್ಕೆ ಪೂಜಿಸುವ ಕಾರ್ಯಕ್ರಮವನ್ನು ನಡೆಸಲಾಯಿತು. ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೆನ್ನಪ್ಪ, ಲಕ್ಷ್ಮಣ್ ಗೌಡ ಪಟೇಲ್ ಕೆ.ಎಚ್.ಗೌಡ, ಬೆಟ್ಟಸ್ವಾಮಿ, ಪ್ರಾಂಶುಪಾಲರಾದ ಗೋವಿಂದೇಗೌಡ ರಮೇಶ್ ಗಂಗಮ್ಮ, ಇದ್ದರು.