ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾವೈಕ್ಯತೆ ಮೆರವಣಿಗೆ

KannadaprabhaNewsNetwork | Published : Mar 3, 2024 1:30 AM

ಸಾರಾಂಶ

ತಾಲೂಕಿನ ಭೀಮರಾಯನ ಗುಡಿಯ ಸಿದ್ಧಾರೂಢ ಮಠದ ಆವರಣದಲ್ಲಿ ಶನಿವಾರ ನಡೆದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರ ಡಿ.ಎನ್‌.ಅಕ್ಕಿ ಅವರ ಭಾವೈಕ್ಯತೆಯ ಅದ್ಧೂರಿ ಮೆರವಣಿಗೆ ನಡೆಯಿತು.

ಶಹಾಪುರ: ತಾಲೂಕಿನ ಭೀಮರಾಯನ ಗುಡಿಯ ಸಿದ್ಧಾರೂಢ ಮಠದ ಆವರಣದಲ್ಲಿ ಶನಿವಾರ ನಡೆದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರ ಡಿ.ಎನ್‌.ಅಕ್ಕಿ ಅವರ ಭಾವೈಕ್ಯತೆಯ ಅದ್ಧೂರಿ ಮೆರವಣಿಗೆ ನಡೆಯಿತು.

ಅಲಂಕೃತ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಡಿ.ಎನ್.ಅಕ್ಕಿ, ಸುಮಂಗಲ ದಂಪತಿ ಹಾಗೂ ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಭೀಮರಾಯನಗುಡಿ ವಲಯ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್ ಅವರನ್ನು ಮೆರವಣಿಗೆ ಸಿದ್ಧಾರೂಡ ಮಠದಿಂದ ಬಾಪುಗೌಡ ವೃತ್ತ, ಪ್ರವಾಸಿ ಮಂದಿರ ಅಂಚೆ ಕಚೇರಿ ವೀರಶೈವ ಕಲ್ಯಾಣ ಮಂಟಪದ ಮೂಲಕ ಮುಖ್ಯ ವೇದಿಕೆವರೆಗೆ ಅದ್ಧೂರಿ ಮೆರವಣಿಗೆ ನಡೆಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಸೇರಿ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕಿನಿಂದ ಆಗಮಿಸಿದ ವಿವಿಧ ಕಲಾ ತಂಡಗಳು ಮೆರವಣಿಗೆ ಮೆರಗು ನೀಡಿದರು. ವಿವಿಧ ಶಾಲಾ-ಕಾಲೇಜುಗಳ ಕಲಾತಂಡಗಳು ಹಾಗೂ ವಿವಿಧ ಶಾಲೆಗಳ ಭಾರತ ಸೇವಾದಳ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡಗಳು ಭಾಗವಹಿಸಿದ್ದವು.

ಬೆಳಗ್ಗೆ 7.30 ಗಂಟೆಗೆ ಹೊತಪೇಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬ್ಲಮ್ಮ ಮರೆಪ್ಪ ದೊರೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರೆ, ನಾಗನಟಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತಿಪ್ಪಮ್ಮ ಶಂಕ್ರಪ್ಪ ನಾಡಧ್ವಜ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಡಾ.ರವೀಂದ್ರನಾಥ್ ಹೊಸಮನಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ದಿಗ್ಗಿ ಸಂಗಮೇಶ್ವರ ದೇವಸ್ಥಾನದ ದೇವಯ್ಯ ಸ್ವಾಮಿ ಅವರು ಅಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ನಾಡು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದಕ್ಕೆ ಈ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಸಾಕ್ಷಿಯಾಗಲಿದೆ, ಇದರಲ್ಲಿ ಸರ್ವ ಜಾತಿಯ ಜನಾಂಗ ಪ್ರೀತಿ ವಿಶ್ವಾಸ ಭಾವೈಕ್ಯತೆಯಿಂದ ಪಾಲ್ಗೊಂಡಿದ್ದಾರೆ ಎಂದರು.

ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ, ಗಿರೆಪ್ಪಗೌಡ ಬಾಣತಿಹಾಳ್, ಬಸನಗೌಡ ಕಂಚನಕವಿ, ದೇವೇಂದ್ರ ದಿಗ್ಗಿ, ಮಾಂತೇಶ್ ರಾಂಪುರ, ದೇವಿಂದ್ರಪ್ಪ ಮಡಿವಾಳಕರ್, ಬಸನಗೌಡ ಕಂಚನ ಕವಿ, ಶರಣಪ್ಪ ಸಾಹು ಸುರಪುರ, ಗುರು ಮಣಿಕಂಠ, ವೀರೇಶ್ ಪಾಟೀಲ್, ವಿಜಯ ಜೋಶಿ, ಮೂರ್ತಿ ಮುದುಗಲ್, ಸಾಯಿಬಣ್ಣ ಬಾಣತಿಹಾಳ್, ಮಲ್ಲಿಕಾರ್ಜುನ್ ಬೆಲೇರಿ, ಮಶಾಕ್ ಇನಂದಾರ್ ಇತರರಿದ್ದರು.

Share this article