ತಂಬ್ರಹಳ್ಳಿ: ಜ.೨೯ರಂದು ತಾಲೂಕಿನ ನಂದಿಪುರ ಶ್ರೀಗುರು ದೊಡ್ಡಬಸವೇಶ್ವರ ಜಾತ್ರೆ ನಿಮಿತ್ತ ನುಡಿಜಾತ್ರೆ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಹರಿಹರದ ಸಾಹಿತಿ ಪ್ರೊ.ಎಚ್.ಎ. ಬಿಕ್ಷಾವರ್ತಿಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ ತಿಳಿಸಿದರು.ನಂದಿಪುರ ದೊಡ್ಡಬಸವೇಶ್ವರ ಮಠದಲ್ಲಿ ನುಡಿಜಾತ್ರೆ ಕುರಿತು ಮಾತನಾಡಿದ ಅವರು, ನುಡಿಜಾತ್ರೆ ಮೂಲಕ ಗ್ರಾಮೀಣರಿಗೆ ಸಾಹಿತ್ಯಿಕ ಪರಂಪರೆಯನ್ನು ಉಣಬಡಿಸಲಾಗವುದು. ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಗೆ ನುಡಿಜಾತ್ರೆ ವೇದಿಕೆಯಾಗಲಿದೆ. ಈ ಜಾತ್ರೆ ಸಾಹಿತ್ಯಿಕ ಮತ್ತು ಧಾರ್ಮಿಕ ಸಮಾಗಮವಾಗಿದೆ. ಪ್ರಮುಖವಾಗಿ ಹಲವು ಯುವ ಮತ್ತು ವಿದ್ಯಾರ್ಥಿ ಕವಿಹೃದಯಗಳಿಗೆ ನುಡಿಜಾತ್ರೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಸಹಸ್ರಾರು ಭಕ್ತರ ನೇತೃತ್ವದಲ್ಲಿ ದೊಡ್ಡಬಸವೇಶ್ವರ ಜಾತ್ರೋತ್ಸವ ವಿಜೃಂಭಣೆಯಿಂದ ಜರುಗುವುದು ಎಂದರು.
ನುಡಿಜಾತ್ರೆ ಸದಸ್ಯರಾದ ಹ್ಯಾಟಿ ಲೋಕಪ್ಪ, ಸಾಹಿತಿ ಗುಂಡೂರು ಪಾಟೀಲ್, ಉಪನ್ಯಾಸಕರಾದ ಗುರುಬಸವರಾಜ ಇತರರಿದ್ದರು.