ಹೊನ್ನಾವರ:
ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಎಲ್ಲರನ್ನು ಪ್ರೀತಿಯಿಂದ ಕಂಡವರು. ಓರ್ವ ಸಾಹಿತಿಯಾಗಿ ಬದುಕುವ ಕಲೆಯನ್ನು ವಿಷ್ಣು ನಾಯ್ಕರು ಹೊಂದಿದ್ದರು. ಹಲವು ನಾಟಕಗಳಲ್ಲಿ ತೊಡಗಿ ನಾಟಕಕಾರರಾಗಿಯು ಮಿಂಚಿದವರು. ರಾಘವೇಂದ್ರ ಪ್ರಕಾಶನದ ಮೂಲಕ ಹಲವಾರು ಕವಿಗಳನ್ನು ಹೊರತಂದವರು. ಜಿಲೆಯ ಎಲ್ಲ ಕವಿಗಳು ಸೇರಿ ಸಹಕಾರಿ ಪುಸ್ತಕ ಪ್ರಕಾಶನದ ಅಗತ್ಯ ಇದೆ ಎಂದಿದ್ದರು. ದಿನಕರ ದೇಸಾಯಿಯವರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದು ಅವರ ಸಾಹಿತ್ಯಿಕ ಕೊಡುಗೆ ಸ್ಮರಿಸಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಓರ್ವ ಸಾಮಾನ್ಯ ವ್ಯಕ್ತಿ ಸಾಹಿತ್ಯ ಪ್ರೀತಿಯ ಮೂಲಕ ಹೇಗೆ ಕೊಡುಗೆ ನೀಡಬಹುದು ಎನ್ನುವುದಕ್ಕೆ ವಿಷ್ಣು ನಾಯ್ಕ ಅವರು ಮಾದರಿ. ಅವರ ಸಾಹಿತ್ಯ ಓದುವ ಮೂಲಕ ಅವರ ಆದರ್ಶ, ಜೀವನ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಸಾಪ ಸದಸ್ಯೆ ಶಿಕ್ಷಕಿ ಸಾಧನಾ ಬರ್ಗಿ ಮಾತನಾಡಿ, ವಿಷ್ಣು ನಾಯ್ಕರು ಉತ್ತಮ ಬರಹಗಾರರು, ಚಿಂತನಶೀಲರಾಗಿದ್ದರು. ಅವರ ಬರಹಗಳು ಮನಸ್ಸಿಗೆ ಮುದ ನೀಡುವಂತದಾಗಿತ್ತು ಎಂದರು.ಯುವಜನ ಕ್ರೀಡಾಧಿಕಾರಿ ಸುಧೀಶ್ ನಾಯ್ಕ, ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್. ಗೌಡ ಮಾತನಾಡಿ, ವಿಷ್ಣು ನಾಯ್ಕರು ಜಿಲ್ಲೆಯ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧವಾಗಿ ಬೆಳೆಸಿದ ಧೀಮಂತ ಸಾಹಿತಿಯಾಗಿದ್ದರು. ಹಿಂದುಳಿದ ವರ್ಗದವರ ಏಳ್ಗೆಗೆ, ಭಿನ್ನತೆ ಹೋಗಲಾಡಿಸಲು ದುಡಿದವರು. ಅವರ ಜೀವನದ ಗುರಿಯನ್ನು ಸಾಹಿತ್ಯ, ಬರವಣಿಗೆ ಮೂಲಕ ತಿಳಿಸಿದ್ದರು. ಅದನ್ನು ನಾವು ಅನುಸರಿಸಿ ಎಲ್ಲರಿಗೂ ಮನಮುಟ್ಟುವಂತೆ ಮಾಡಬೇಕು ಎಂದರು.ಶಿಕ್ಷಕರಾದ ಪ್ರಕಾಶ ನಾಯ್ಕ, ಲಕ್ಷ್ಮೀ ಹೆಗಡೆ, ರೋಟರಿ ಕ್ಲಬ್ ಅಧ್ಯಕ್ಷ ದೀಪಕ್ ಲೋಪಿಸ್, ಎಚ್.ಎಸ್. ಗುನಗಾ ಮುಂತಾದವರಿದ್ದರು.