ನಾಡಿದ್ದು ಸಾಹಿತಿ ಹನೂರು ಚನ್ನಪ್ಪ ವಿಚಾರ ಸಂಕಿರಣ

KannadaprabhaNewsNetwork |  
Published : Feb 19, 2026, 01:45 AM IST
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಹನೂರು ಚನ್ನಪ್ಪ ರಚಿತ ಕಥೆ, ನಾಟಕ, ಕಾದಂಬರಿ ಕುರಿತ ವಿಚಾರಸಂಕಿರಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ನಗರದ ಚೇತನ ಕಲಾವಾಹಿನಿ, ಜೋಳಿಗೆ ಪ್ರಕಾಶನ ಹಾಗೂ ಮೈಸೂರು ನೆಲೆ ಹಿನ್ನೆಲೆ ಸಂಸ್ಥೆ ವತಿಯಿಂದ ಸಾಹಿತಿ ಹನೂರು ಚನ್ನಪ್ಪ ರಚಿತ ಕಥೆ, ನಾಟಕ, ಕಾದಂಬರಿ ಕುರಿತ ವಿಚಾರಸಂಕಿರಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಫೆ.21ರಂದು ಬೆಳಗ್ಗೆ 10ಕ್ಕೆ ನಗರದ ಡಾ. ರಾಜ್‌ಕುಮಾರ್‌ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ನೆಲೆ ಹಿನ್ನೆಲೆ ಸಂಸ್ಥೆ ಅಧ್ಯಕ್ಷ ಕೆ.ಆರ್.ಗೋಪಾಲಕೃಷ್ಣ ಹೇಳಿದರು.

- ಕನ್ನಡಪ್ರಭದ ಅಂಶಿ ಪ್ರಸನ್ನಕುಮಾರ್‌ ಸೇರಿ ಹಲವರಂದ ವಿಚಾರಮಂಡನೆ । ಕವಿಗಳಿಂದ ಸ್ವರಚಿತ ಕವನ ವಾಚನ---ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಚೇತನ ಕಲಾವಾಹಿನಿ, ಜೋಳಿಗೆ ಪ್ರಕಾಶನ ಹಾಗೂ ಮೈಸೂರು ನೆಲೆ ಹಿನ್ನೆಲೆ ಸಂಸ್ಥೆ ವತಿಯಿಂದ ಸಾಹಿತಿ ಹನೂರು ಚನ್ನಪ್ಪ ರಚಿತ ಕಥೆ, ನಾಟಕ, ಕಾದಂಬರಿ ಕುರಿತ ವಿಚಾರಸಂಕಿರಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಫೆ.21ರಂದು ಬೆಳಗ್ಗೆ 10ಕ್ಕೆ ನಗರದ ಡಾ. ರಾಜ್‌ಕುಮಾರ್‌ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ನೆಲೆ ಹಿನ್ನೆಲೆ ಸಂಸ್ಥೆ ಅಧ್ಯಕ್ಷ ಕೆ.ಆರ್.ಗೋಪಾಲಕೃಷ್ಣ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾತನಾಡಿದ ಅವರು, ‘ಹನೂರು ಚನ್ನಪ್ಪ ಅವರು ಸರ್ಕಾರಿ ಸೇವೆಯಲ್ಲಿದ್ದುಕೊಂಡೇ, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಒಂದಕ್ಕೊಂದು ವಿಭಿನ್ನವಾದ ಕಥೆ, ಕಾದಂಬರಿ, ಕಥಾಸಂಕಲನ ಮಾಡಿದ್ದು, ಅವರ ಹೆಗ್ಗಳಿಕೆ’ ಎಂದರು.ಫೆ.21ರ ಬೆಳಗ್ಗೆ 10ಕ್ಕೆ ಸಂಗೀತ ನಿರ್ದೇಶಕ ವಿ.ಮನೋಹರ್‌ ಅವರು ವಿಚಾರ ಸಂಕಿರಣ ಉದ್ಘಾಟಿಸುವರು. ಸಂಸ್ಕೃತಿ ಚಿಂತಕ ಎಚ್‌. ಗೋವಿಂದಯ್ಯ ಅಧ್ಯಕ್ಷತೆ ವಹಿಸುವರು.2004ರಲ್ಲಿ ‘ಅನ್ನ’ ಕಥಾಸಂಕಲನ, 2008ರಲ್ಲಿ ‘ಬೆಲ್ಲದ ದೋಣಿ’ ನಾಟಕ, 2025ರಲ್ಲಿ ಕಬ್ಬಿಣದ ಕುದುರೆಗಳು ಕಾದಂಬರಿ ರಚನೆ ಮಾಡಿದ್ದಾರೆ. ಸುಬ್ಬು ಹೊಲೆಯಾರ್‌, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್’ ‘ಬೆಲ್ಲದ ದೋಣಿ’ ವಿಮರ್ಶಕಿ ಕುಸುವ ಆಯರಹಳ್ಳಿ ‘ಕಬ್ಬಿಣದ ಕುದುರೆಗಳು’ ಕುರಿತು ವಿಚಾರಮಂಡನೆ ಮಾಡುವರು.ಮೂರು ಕೃತಿಗಳಿಗೆ ಸಾಹಿತಿಗಳಾದ ಸ್ವಾಮಿ ಪೊನ್ನಾಚಿ, ವಿಮರ್ಶಕ ಅನಿಲ್ ಕುಮಾರ್‌ ಹೊಸೂರು, ಎಂ.ಬಸವರಾಜು, ಬಸವಣ್ಣ ಮೂಕಹಳ್ಳಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು.ಚಿಂತಕ ಕೆ. ವೆಂಕಟರಾಜು ಕವಿಗೋಷ್ಠಿ ಉದ್ಘಾಟಿಸಲಿದ್ದು, ಮಹದೇವಶಂಕನಪುರ ಅಧ್ಯಕ್ಷತೆ ವಹಿಸುವರು. ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾದೇವಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಪುಟ್ಟಸ್ವಾಮಿ, ಸಮಾಜ ಸೇವಕ ಶ್ರೀನಿಧಿಕುದರ್, ಜಿಲ್ಲೆಯ 16 ಮಂದಿ ಕವಿಗಳು ಭಾಗವಹಿಸಿ, ಸ್ವರಚಿತ ಕವನರಚನೆ ವಾಚಿಸಲಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಎ.ಎಂ.ನಾಗಮಲ್ಲಪ್ಪ ಮಾತನಾಡಿ, ‘ಹನೂರು ಚನ್ನಪ್ಪ ರಚಿತ ಕಥೆ, ನಾಟಕ, ಕಾದಂಬರಿ ಕುರಿತ ವಿಚಾರಸಂಕಿರಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಚೇತನ ಕಲಾ ವಾಹಿನಿ ಅಧ್ಯಕ್ಷ ಜಿ.ರಾಜಪ್ಪ ಇದ್ದರು.---------೧೮ಸಿಎಚ್‌ಎನ್೧

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯದಂಗಡಿಯಲ್ಲಿದ್ದ ಬಾಲಕಿ ರಕ್ಷಣೆ: ಮಾಲೀಕನ ವಿರುದ್ಧ ಕೇಸ್‌
ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ಜರುಗಿದ ಸವದತ್ತಿಶ್ರೀ ಎಲ್ಲಮ್ಮ ದೇವಿ ಜಾತ್ರೆ