ಜಗತ್ತಿನ ಸೂಕ್ಷ್ಮ ಗೃಹಿಕೆಗೆ ಸಾಹಿತ್ಯ ಕೃತಿಗಳು ಅಗತ್ಯ: ಪ್ರೊ ಬಿ.ಎಸ್.ಬಿರಾದಾರ

KannadaprabhaNewsNetwork |  
Published : Nov 14, 2025, 01:30 AM IST
ಚಿತ್ರ 13ಬಿಡಿಆರ್50 | Kannada Prabha

ಸಾರಾಂಶ

ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸಲು ಸಾಹಿತ್ಯ ಕೃತಿಗಳು ಅಗತ್ಯ. ಕನ್ನಡ ಸೃಜನಶೀಲ ಮತ್ತು ವಿಮರ್ಶಾ ಕೃತಿಗಳು ಲೋಕ ವಿಮರ್ಶೆ ಹೆಚ್ಚು ಬೌದ್ಧಿಕ, ವೈಚಾರಿಕ ನೆಲೆಯಲ್ಲಿ ಮಾಡಿವೆ ಎಂದು ಬೀದರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸಲು ಸಾಹಿತ್ಯ ಕೃತಿಗಳು ಅಗತ್ಯ. ಕನ್ನಡ ಸೃಜನಶೀಲ ಮತ್ತು ವಿಮರ್ಶಾ ಕೃತಿಗಳು ಲೋಕ ವಿಮರ್ಶೆ ಹೆಚ್ಚು ಬೌದ್ಧಿಕ, ವೈಚಾರಿಕ ನೆಲೆಯಲ್ಲಿ ಮಾಡಿವೆ ಎಂದು ಬೀದರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.

ನಗರದ ಬೀದರ್‌ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಗೂ ಶರಣ ಸಾಹಿತ್ಯ ಗ್ರಂಥಾಲಯದಲ್ಲಿ ಬುಧವಾರ ಮೀನಾಕ್ಷಿ ಪ್ರಭು ಬಿರಾದಾರ ಹಾಗೂ ಡಾ. ಭೀಮಾಶಂಕರ ಬಿರಾದಾರ ಅವರು ಸಂಪಾದಿಸಿದ ''''''''ಕೀರ್ತನೆಗಳ ಸಂಗ್ರಹ'''''''' ಬೀದರ್‌ ವಿಶ್ವವಿದ್ಯಾಲಯದ ಬಿ.ಎ.ತೃತೀಯ ಸಾಮಾನ್ಯ ಕನ್ನಡ ಪಠ್ಯ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾಹಿತ್ಯ ಮನುಷ್ಯನನ್ನು ಆಳದ ಶೋಧನೆಗೆ ಹಚ್ಚುತ್ತವೆ ಎಂದರು.

ವಚನ, ಕೀರ್ತನೆ ಮತ್ತು ತತ್ವಪದಗಳು ಈ ನೆಲದ ಅನುಭಾವಿಕ ಸತ್ವವನ್ನು, ಬದುಕಿನ ಶೋಧನೆಯನ್ನು ಕಟ್ಟಿಕೊಟ್ಟಿವೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಸ್ಮಿತೆ ಯನ್ನು ರೂಪಿಸಿವೆ. ಪ್ರಸ್ತುತ ''''''''ಕೀರ್ತನೆಗಳ ಸಂಗ್ರಹ'''''''' ಕೃತಿ ಅನುಭಾವಿಕ ಮತ್ತು ಸಾಮಾಜಿಕ ಬದುಕಿನ ಅಂತಃಸತ್ವವನ್ನು ಸಾರುತ್ತದೆ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯಕ ಮಾತನಾಡಿ, ನಿರಂತರ ಅಧ್ಯಯನ, ಸಂಶೋಧನೆ ಮತ್ತು ವಿಮರ್ಶೆಯಿಂದ ಹೊಸ ತಿಳಿವಳಿಕೆ ಮೂಡು ತ್ತದೆ. ಈ ಮೂರು ಸಂಗತಿಗಳು ಶೈಕ್ಷಣಿಕ ವಲಯಗಳ ಬೆಳವಣಿಗೆ ನಿರ್ಧರಿಸುತ್ತವೆ. ಕೀರ್ತನೆಗಳ ಸಂಗ್ರಹ ಪಠ್ಯ ಪುಸ್ತಕ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಅರಿವಿಗೆ ದಾರಿಯಾಗಿದೆ ಎಂದರು.

ಸಂಶೋಧನಾತ್ಮಕ ಓದಿನಿಂದ ತಾರ್ಕಿಕ ಆಲೋಚನೆ, ವೈಚಾರಿಕ ನೆಲೆಯ ಅನುಸಂಧಾನ ಸಾಧ್ಯ. ಪದವಿ ಹಂತದಲ್ಲಿಯೇ ಸಂಶೋಧನಾ ಪ್ರಬಂಧದ ಓದು ಅಗತ್ಯ. ಪ್ರಸ್ತುತ ಪಠ್ಯ ಕೀರ್ತನಕಾರರ ರಚನೆ ಓದಿಗೆ ದಾರಿಯಾಗಿ ನಾಡಿನ ಹಿರಿಯ ಬರಹಗಾರ ಎಚ್.ಎಸ್.ವೆಂಕಟೇಶ್ ಮೂರ್ತಿ, ವಿಕ್ರಮ ವಿಸಾಜಿ, ಕಿರಣ್ ಗಾಜನೂರು ಬರಹಗಳು ಸಹಾಯಕವಾಗಿವೆ ಎಂದರು.

ಕೀರ್ತನೆಗಳ ಸಂಗ್ರಹ ಪಠ್ಯ ಪುಸ್ತಕ ಸಂಪಾದಕ ಮೀನಾಕ್ಷಿ ಪ್ರಭು ಬಿರಾದಾರ ಹಾಗೂ ಡಾ. ಭೀಮಾಶಂಕರ ಬಿರಾದಾರ ಮಾತನಾಡಿದರು.

ಬೀದರ್‌ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ಅರ್ಜುನ ಕನಕ, ನಾಗಭೂಷಣ, ಶಿವನಾಥ ಪಾಟೀಲ, ವೈಷ್ಣವಿ ಪಾಟೀಲ, ಸಚಿನ್ ಮಲ್ಕಾಪುರೆ, ವಿಠಲದಾಸ್ ಪ್ಯಾಗೆ, ಅಬ್ದುಲ್ ಸತ್ತಾರ್ ಸೇರಿದಂತೆ ಬೀದರ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ