ಪಂಚಭೂತಗಳಲ್ಲಿ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಲೀನ

KannadaprabhaNewsNetwork |  
Published : Mar 16, 2025, 01:45 AM IST
15ಕೆಪಿಎಲ್202 ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಡಾ. ಪಂಚಾಕ್ಷರಿ ಹಿರೇಮಠ ಅವರ ಅಂತ್ಯಸಂಸ್ಕಾರ ನೆರವೇರಿಸಲಿಯಿತು. | Kannada Prabha

ಸಾರಾಂಶ

ಡಾ. ಪಂಚಾಕ್ಷರಿ ಹಿರೇಮಠ ಅವರ ನಿಧನಕ್ಕೆ ಕೊಪ್ಪಳದ ಕವಿ ಸಮೂಹ ಬಳಗ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿತು. ಹಿರೇಮಠ ಅವರನ್ನು ಕಳೆದುಕೊಂಡು ಇಡೀ ನಾಡು, ಸಾಹಿತ್ಯ ಲೋಕ ಬಡವಾಗಿದೆ. ಹಳೆಯ ತಲೆಮಾರಿನ ಕೊಂಡಿ ಕಳಿಚಿಕೊಂಡಂತಾಗಿದೆ ಎಂದು ಕವಿ ಸಮೂಹ ಬಳಗ ಕಂಬನಿ ಮಿಡಿದಿದೆ.

ಕೊಪ್ಪಳ:

ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರ ಅಂತ್ಯಸಂಸ್ಕಾರ ಸ್ವಗ್ರಾಮವಾದ ತಾಲೂಕಿನ ಬಿಸರಳ್ಳಿ ಗ್ರಾಮದ ಅವರ ಜಮೀನಿನಲ್ಲಿ ಶನಿವಾರ ಸಂಜೆ ನೆರವೇರಿತು.

ಅವರ ಆಶಯದಂತೆ ವೀರಶೈವ ಧರ್ಮದ ಪರಂಪರೆಯಂತೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಧಾರವಾಡದಿಂದ ಬಂದಿದ್ದ ಪಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ನಂತರ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಮೈನಳ್ಳಿ-ಬಿಕನಳ್ಳಿ ಗ್ರಾಮದಲ್ಲಿರುವ ಉಜ್ಜಯನಿ ಶಾಖಾ ಮಠದ ಶ್ರೀಸಿದ್ಧೇಶ್ವರ ಶಿವಚಾರ್ಯ ಸ್ವಾಮೀಜಿ, ಹಿರೇಹಡಗಲಿ ಗವಿಸಿದ್ಧೇಶ್ವರ ಮಠದ ಹಿರಿಶಾಂತವೀರ ಸ್ವಾಮೀಜಿ, ತಹಸೀಲ್ದಾರ್‌ ವಿಠ್ಠಲ ಚೌಗಲೆ, ಸಿಪಿಐ ಸುರೇಶ, ಪಿಎಸ್‌ಐ ಪ್ರಹ್ಲಾದ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್, ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್. ಪಾಟೀಲ್, ಬಿ.ವಿ. ರಾಮರಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶರಡ್ಡಿ ಮೂಲಿಮನಿ, ರಾಬಕೊ ಒಕ್ಕೂಟದ ನಿರ್ದೇಶಕ ವೆಂಕನಗೌಡ ಹಿರೇಗೌಡ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕವಿ ಸಮೂಹ ಸಂತಾಪ:

ಡಾ. ಪಂಚಾಕ್ಷರಿ ಹಿರೇಮಠ ಅವರ ನಿಧನಕ್ಕೆ ಕೊಪ್ಪಳದ ಕವಿ ಸಮೂಹ ಬಳಗ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿತು. ಹಿರೇಮಠ ಅವರನ್ನು ಕಳೆದುಕೊಂಡು ಇಡೀ ನಾಡು, ಸಾಹಿತ್ಯ ಲೋಕ ಬಡವಾಗಿದೆ. ಹಳೆಯ ತಲೆಮಾರಿನ ಕೊಂಡಿ ಕಳಿಚಿಕೊಂಡಂತಾಗಿದೆ ಎಂದು ಕವಿ ಸಮೂಹ ಬಳಗ ಕಂಬನಿ ಮಿಡಿದಿದೆ. ಅವರ ಹೆಸರು ಎಂದಿಗೂ ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೊಪ್ಪಳದ ಕವಿ ಸಮೂಹ, ಬಹುತ್ವ ಭಾರತ ಬಳಗ ಸೇರಿದಂತೆ ಜಿಲ್ಲೆಯ ಸಾಹಿತ್ಯ ಬಳಗದ ಡಾ. ಮಹಂತೇಶ್ ಮಲ್ಲನಗೌಡರ, ಅಲ್ಲಮಪ್ರಭು ಬೆಟ್ಟದೂರು, ಎ.ಎಂ. ಮದರಿ, ಈಶ್ವರ ಹತ್ತಿ, ಸಿರಾಜ್ ಬಿಸರಳ್ಳಿ, ವಿಜಯ್ ಅಮೃತರಾಜ್, ಮಹೇಶ ಬಳ್ಳಾರಿ, ಸಾವಿತ್ರಿ ಮುಜುದಾರ್, ಅನುಸೂಯ ಜಾಗೀದಾರ, ವಿಜಯಲಕ್ಷ್ಮಿ ಕೊಟಗಿ, ಶ್ರೀನಿವಾಸ ಚಿತ್ರಗಾರ, ಎ.ಪಿ. ಅಂಗಡಿ, ಅಮರದೀಪ, ಶಿವಪ್ರಸಾದ ಹಾದಿಮನಿ. ಜಿ.ಎಸ್. ಬಾರಕೇರ, ಪುಷ್ಪಲತಾ ಏಳುಬಾವಿ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಸೇರಿದಂತೆ ಕೊಪ್ಪಳದ ಸಾಹಿತಿಕ ಬಳಗವು ಶ್ರದ್ಧಾಂಜಲಿ ಸಲ್ಲಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು