ಸಾಹಿತ್ಯಕ್ಕೆ ಡಾ. ಶ್ರೀಶೈಲ ಹುದ್ದಾರ ಕೊಡುಗೆ ಅಪಾರ: ರಂಭಾಪುರಿ ಸ್ವಾಮೀಜಿ

KannadaprabhaNewsNetwork |  
Published : Jun 03, 2025, 12:18 AM IST
 ಪೊಟೋ ಪೈಲ್ ನೇಮ್ ೧ಎಸ್‌ಜಿವಿ೩   ಪಟ್ಟಣದ ಶ್ರೀ ರಂಭಾಪುರಿ ಕಾಲೇಜಿನಲ್ಲಿ ಜರುಗಿದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಡಾ.ಶ್ರೀಶೈಲ ಹುದ್ದಾರ ದಂಪತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಸನ್ಮಾನಿಸಿ, ಗೌರವಿಸಿದರು.೧ಎಸ್‌ಜಿವಿ೩-೧ ಪಟ್ಟಣದ ಶ್ರೀ ರಂಭಾಪುರಿ ಕಾಲೇಜಿನಲ್ಲಿ ಜರುಗಿದ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಮಾತನಾಡಿದರು. | Kannada Prabha

ಸಾರಾಂಶ

ಸಮಾಜದಲ್ಲಿ ಗುರುವಿಗೆ ಪೂಜ್ಯನೀಯ ಸ್ಥಾನವಿದೆ. ಯಾರು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುವರೋ ಅವರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸದಾ ಉಳಿಯುವರು.

ಶಿಗ್ಗಾಂವಿ: ನಮ್ಮ ಧರ್ಮಪೀಠ ಅಧೀನದ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ಕನ್ನಡ, ಜಾನಪದ, ರಂಗಭೂಮಿ ಹಾಗೂ ಅನೇಕ ದೇಸಿ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಡಾ. ಶ್ರೀಶೈಲ ಹುದ್ದಾರ ವ್ಯಕ್ತಿತ್ವ ಅಭಿನಂದನೀಯ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ಜರುಗಿದ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಸೇವಾ ನಿವೃತ್ತಿ ಹೊಂದಿದ ಡಾ. ಶ್ರೀಶೈಲ ಹುದ್ದಾರ ಅವರನ್ನು ಗೌರವಿಸಿ ಮಾತನಾಡಿ, ಹುದ್ದಾರ ಅವರು ಬಂಡಾಯ ಮತ್ತು ಎಡಪಂಥೀಯ ಚಳವಳಿಯಲ್ಲಿದ್ದರೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವರು. ವಿದ್ಯಾರ್ಥಿಗಳ ಮತ್ತು ಜನರ ಮಧ್ಯೆ ಇದ್ದು ತಮ್ಮ ಜ್ಞಾನ ನೀಡಿದ್ದಾರೆ ಎಂದರು.ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ನಮ್ಮ ಸಮಾಜದಲ್ಲಿ ಗುರುವಿಗೆ ಪೂಜ್ಯನೀಯ ಸ್ಥಾನವಿದೆ. ಯಾರು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುವರೋ ಅವರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸದಾ ಉಳಿಯುವರು ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಶ್ರೀಶೈಲ ಹುದ್ದಾರ ಅವರು, ನಾನು ಪ್ರಗತಿಪರ ಚಳವಳಿಯಲ್ಲಿದ್ದರೂ ಸಾಂಪ್ರದಾಯಿಕ ಪರಂಪರೆಯ ರಂಭಾಪುರಿ ಕಾಲೇಜಿನಲ್ಲಿ ೩೮ ವರ್ಷ ಸೇವೆ ಸಲ್ಲಿಸಿರುವುದು ನನ್ನ ಸೌಭಾಗ್ಯ. ನನ್ನನ್ನು ಕಾಲೇಜಿಗೆ ಕರೆತಂದ ಎಸ್.ವಿ. ಕೂಗು, ಅಕ್ಕರೆಯಿಂದ ನನ್ನನ್ನು ಪ್ರೋತ್ಸಾಹಿಸಿದ ಶ್ರೀಪೀಠ, ಅಭಿಮಾನದಿಂದ ನೋಡಿದ ವಿದ್ಯಾರ್ಥಿ ಸಮೂಹ ಮತ್ತು ಸಹಕರಿಸಿದ ಸಹೋದ್ಯೋಗಿಗಳನ್ನು ಸದಾ ಸ್ಮರಿಸುವೆ ಎಂದರು.ಕಾಲೇಜಿನ ಶೈಕ್ಷಣಿಕ ಸಂಯೋಜನಾಧಿಕಾರಿ ಪ್ರೊ. ಪಿ.ಸಿ. ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಳೆದ ತಿಂಗಳು ಸೇವಾ ನಿವೃತ್ತಿ ಹೊಂದಿದ ಪ್ರೊ. ರಾಜೇಶ್ವರಿ ಹೊಗರ್ತಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಬಾಲಚಂದ್ರ ತೊಂಡಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜರತನ್ ದಾದೂಗೌಡ್ರ ಸ್ವಾಗತಿಸಿದರು. ಚಾಂದಬೀ ನದಾಫ್ ನಿರೂಪಿಸಿದರು. ಸುರೇಶ ಹರಿಜನ ವಂದಿಸಿದರು.

ಸುಮಿತ್ರಾ ಹುದ್ದಾರ, ಡಾ. ಡಿ.ಎ. ಗೊಬ್ಬರಗುಂಪಿ, ಪ್ರೊ. ಬಿ.ಎಂ. ಮುಳಗುಂದ, ಪ್ರೊ. ಸಿ.ಎಚ್. ತಾವರಗೊಂದಿ, ಡಾ. ವಿನಯ್ ಎಚ್.ಕೆ. ಇತರರು ಇದ್ದರು.8ರಿಂದ ಪಾಂಡುರಂಗ ರುಕ್ಮಿಣಿ ದಿಂಡಿ ಮಹೋತ್ಸವ

ಬ್ಯಾಡಗಿ: ಪಟ್ಟಣದ ನಾಮದೇವ ಸಿಂಪಿ ಸಮಾಜ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ಆಶ್ರಯದಲ್ಲಿ ಜೂ. 8ರಿಂದ 10 ವರೆಗೆ ಪಾಂಡುರಂಗ ರುಕ್ಮಿಣಿ ದಿಂಡಿ ಮಹೋತ್ಸವ ಕಾರ್ಯಕ್ರಮಗಳು ಜರುಗಲಿದೆ.ಜೂ. 8ರಂದು ಆರತಿ ಭಜನೆ ಹಾಗೂ ಪೋತಿ ಸ್ಥಾಪನೆ ಜೂ. 9ರಂದು ತುಳಜಾ ಭವಾನಿ ಮೂರ್ತಿಗೆ ಮಹಾಭಿಷೇಕ ಜರುಗಲಿದೆ. ಜೂ. 10ರಂದು ಪಟ್ಟಣದ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ದಿಂಡಿ ಉತ್ಸವ ಜರುಗಲಿದೆ ಎಂದು ನಾಮದೇವ ಸಿಂಪಿ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಡಾ. ಪ್ರಕಾಶ ಭಸ್ಮೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ