ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ನಗರ ದಸರಾ ಸಮಿತಿ ಹಾಗೂ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ‘ಬಹುಭಾಷಾ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುವ ಬಹು ಅಮೂಲ್ಯವಾದ ನೈಜ ವಿಚಾರಧಾರೆಗಳನ್ನು ಆಧರಿಸಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಾಹಿತ್ಯ ಸೃಷ್ಟಿಸಿ ಪುಸ್ತಕದ ರೂಪದಲ್ಲಿ ಹೊರತರುವುದು ಶ್ರೇಷ್ಠ ಕಾರ್ಯವಾಗಿದೆ. ಕವಿಗಳು ಸದಾ ಸಮಾಜದ ಭಾಗವಾಗಿದ್ದಾರೆ, ರಾಜಕೀಯ ರಹಿತವಾಗಿ, ಭ್ರಷ್ಟಾಚಾರದ ಸೋಂಕಿಲ್ಲದೆ, ಪ್ರಶಾಂತವಾದ ಮನಸ್ಸು ಮತ್ತು ಆಗಾಧವಾದ ಕಲ್ಪನಾಶೀಲತೆ ಹೊಂದಿದವರಾಗಿದ್ದಾರೆ. ನಮ್ಮ ಸುತ್ತಮುತ್ತಲ ಪ್ರಾಕೃತಿಕ ವೈಭವ ಮತ್ತು ಆಗುಹೋಗುಗಳನ್ನು ಅಕ್ಷರ ರೂಪಕ್ಕಿಳಿಸುವ ಸಾಹಿತ್ಯ ಕಲೆ ಅದ್ಭುತವೆಂದು ಬಣ್ಣಿಸಿದರು.ಸೈನಿಕರು, ಪತ್ರಕರ್ತರು, ಕವಿಗಳು ಹಾಗೂ ಆರಕ್ಷಕರು ತಮ್ಮದೇ ಆದ ಕಾರ್ಯಕ್ಷೇತ್ರದ ಮೂಲಕ ನಾಡಿನ ಅಖಂಡತೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆ ಮೂಲಕ ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ವಿಶೇಷ ಕಾಣಿಕೆ ಮತ್ತು ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ.
ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ಜಿ.ಎಫ್., ಸಲಾರ್ ಚಲನಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್ ಅವರು ಮಾತನಾಡಿ, ಕವಿಗಳು ತಮ್ಮ ಕಲ್ಪನೆಗಳನ್ನು ಪದಗಳ ಮೂಲಕ ವರ್ಣಿಸುತ್ತಾರೆ. ಕವಿಗಳ ಬದುಕಿನ ಅವಿಭಾಜ್ಯ ಅಂಗ ಲೇಖನಿಯೇ ಆಗಿದೆ. ಅತ್ಯಂತ ಪ್ರಭಾವಶಾಲಿಯಾದ ಲೇಖನಿಯ ಮೂಲಕ ನಮ್ಮೆಲ್ಲರ ಕನಸುಗಳನ್ನು ಅವರು ಅಕ್ಷರ ರೂಪದಲ್ಲಿ ಸಾಕಾರಗೊಳಿಸುವಂತಾಗಬೇಕು ಎಂದು ಆಶಿಸಿದರು.
ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ್ ಅವರು ಮಾತನಾಡಿ, ಕೋಗಿಲೆಯ ಧ್ವನಿ ಕೇಳಲು ಚಂದ, ಕವಿಗಳ ಅಕ್ಷರಮಾಲೆ ಓದಲು ಚಂದ ಎಂದರು.
ಕಾವ್ಯ ಕಲರವ ಅನಾವರಣ:
ಇದೇ ಸಂದರ್ಭ ಲೇಖಕಿ ಡಿ.ಹೆಚ್.ಪುಷ್ಪ ಅವರ ‘ಸಂವೇದನೆ'''''''' ಕವನ ಸಂಕಲನ ಹಾಗೂ ಕೆ.ಶೋಭಾ ರಕ್ಷಿತ್ ಅವರ ‘ಮನ ಸೆಳೆದ ಹಿಮಗಿರಿ'''''''' ಪ್ರವಾಸ ಕಥನವನ್ನು ಕಿನ್ನಾಳ ರಾಜ್ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಕರ್ನಾಟಕ ಒಕ್ಕಗಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಸಾಹಿತಿ ಕ್ಯಾಪ್ಟನ್ ಬಿದ್ದಂಡ ನಾಣಯ್ಯ, ಕೆ.ಜಿ.ಎಫ್., ಸಲಾರ್ ಚಲನಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್, ನಗರಸಭೆಯ ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಹಾಗೂ ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ಸಭೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿತು.
*ಪುಷ್ಪ ನಮನ*ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿರುವ ಕುವೆಂಪು ಪುತ್ಥಳಿಗೆ ಕವಯಿತ್ರಿ ಹಾಗೂ ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷೆ ಸುನೀತಾ ಲೋಕೇಶ್ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ನಗರ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.