ಸಮಾಜದ ಸುಧಾರಣೆಗೆ ಸಾಹಿತ್ಯ ಅವಶ್ಯಕ: ಡಾ.ಬಂಜಗೆರೆ

KannadaprabhaNewsNetwork |  
Published : May 13, 2025, 01:26 AM IST
ಪೊಟೋ೧೧ಸಿಪಿಟಿ೬: ನಗರದ ಪ್ರಥಮ ದರ್ಜೇ ಕಾಲೇಜಿನಲ್ಲಿ ನಡೆದ ಚಕೋರ ಕಾರ್ಯಕ್ರಮದಲ್ಲಿ ಬಂಜೆಗೆರೆ ಜಯಪ್ರಕಾಶ ಮಾತನಾಡಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಸತ್ಯದ ಅನ್ವೇಷಣೆ, ಸಮಾಜದ ಸುಧಾರಣೆಗೆ ಸಾಹಿತ್ಯ ಅವಶ್ಯಕ. ಯಾವುದೇ ವಿಚಾರವಿರಲಿ ಅದನ್ನು ಮೊದಲು ಕೇಳಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾಹಿತ್ಯ ಅದನ್ನು ಕಲಿಸುತ್ತದೆ ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಚನ್ನಪಟ್ಟಣ: ಸತ್ಯದ ಅನ್ವೇಷಣೆ, ಸಮಾಜದ ಸುಧಾರಣೆಗೆ ಸಾಹಿತ್ಯ ಅವಶ್ಯಕ. ಯಾವುದೇ ವಿಚಾರವಿರಲಿ ಅದನ್ನು ಮೊದಲು ಕೇಳಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾಹಿತ್ಯ ಅದನ್ನು ಕಲಿಸುತ್ತದೆ ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಸೃಜನ ಕನ್ನಡ ಸಂಘ, ಕನ್ನಡ ವಿಭಾಗ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು, ಚಕೋರ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನಸ್ಸಿಗೆ ಚೈತನ್ಯ ಸಂವಾದನಾಶೀಲತೆ, ಇನ್ನೊಬ್ಬರ ನೋವನ್ನು ಅರಿಯುವುದು ಸಾಹಿತ್ಯದ ಕೆಲಸ. ಸಾಹಿತ್ಯ ಜೀವಂತ ಕನ್ನಡಿ. ನಾವು ನೆರೆಹೊರೆಯವರೊಂದಿಗೆ ಬೆರೆತು ಬಾಳಬೇಕು. ಸಮಾಜವಿರುವುದೇ ಸಹಜೀವನ, ಒಡನಾಟದಿಂದ ಬದುಕಲು. ಇದನ್ನು ಸಾಹಿತ್ಯ ತಿಳಿಸುತ್ತದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನಗಳ ಸಾಧನಗಳ ಬಳಕೆ ಹೆಚ್ಚಾಗಿದೆ. ಇದು ತಪ್ಪಲ್ಲ ಆದರೆ, ಬಳಕೆಯಲ್ಲಿ ತಪ್ಪಾಗಿದೆ. ಆಧುನಿಕ ತಂತ್ರಜ್ಞಾನವನ್ನು ಸರಿಯಾದ ವಿಧಾನದಲ್ಲಿ ಬಳಸಿಕೊಳ್ಳಬೇಕು. ನಮ್ಮ ಶಿಕ್ಷಣ, ಮಾಧ್ಯಮಗಳು ವಿದ್ಯಾರ್ಥಿಗಳಿಗೆ, ಸಾಂಸ್ಕೃತಿಕ ವಿಚಾರಗಳನ್ನು ತಲುಪಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅಪರಾಧಿ ಕೃತ್ಯಗಳು ಹೆಚ್ಚಾಗುತ್ತಿವೆ. ಅಪರಾಧಿಗಳು ನಮ್ಮ ನಡುವೆಯೇ ಸೃಷ್ಟಿಯಾಗುತ್ತಿದ್ದು, ಹಾದಿಗೆ ಬಿದ್ದ ಮುಳ್ಳು ಸುಮ್ಮನೆ ಇರುವುದಿಲ್ಲ. ಅಪರಾಧವನ್ನು ದ್ವೇಷಿಸಿ, ರೋಗವನ್ನು ದ್ವೇಷಿಸಬೇಕೇ ಹೊರತು, ರೋಗಿಯನ್ನಲ್ಲ. ಬುದ್ದ, ಬಸವ, ಅಂಬೇಡ್ಕರರಂತೆ ನೀವು ಸಾಧಕರಾಗಿ. ಪುಸ್ತಕ ಓದಿ, ವಿಮರ್ಶಾ ಪ್ರಜ್ಞೆ, ನ್ಯಾಯ ಪ್ರಜ್ಞೆ, ಆತ್ಮಸಾಕ್ಷಿ, ಮನಸಾಕ್ಷಿಯನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಉಷಾ ಮಾಲಿನಿ, ಡಾ.ರವಿಕುಮಾರ್, ಡಾ.ಡಿ.ಆರ್.ದೇವರಾಜ್‌, ಕನ್ನಡ ವಿಭಾಗದ ಮುಖ್ಯಸ್ಥ ವಿ.ಎಚ್.ರಾಜಶೇಖರ್ ವಿರುಪಸಂದ್ರ, ಉಮಾ ಇತರರು ಪಾಲ್ಗೊಂಡಿದ್ದರು.

ಪೊಟೋ೧೧ಸಿಪಿಟಿ೬: ಚನ್ನಪಟ್ಟಣದ ಪ್ರಥಮ ದರ್ಜೇ ಕಾಲೇಜಿನಲ್ಲಿ ನಡೆದ ಚಕೋರ ಕಾರ್ಯಕ್ರಮದಲ್ಲಿ ಬಂಜೆಗೆರೆ ಜಯಪ್ರಕಾಶ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!