ಸಾಹಿತ್ಯವೇ ಸಮಾಜ ಪರಿವರ್ತನೆ ಪ್ರಮುಖ ಅಸ್ತ್ರ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Nov 08, 2026, 01:30 AM IST
ಚಿತ್ರ 7ಬಿಡಿಆರ್‌22ಬೀದರ್‌ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಲಾಗಿದ್ದ ಪ್ರಥಮ ಲಿತ ಬಂಡಾಯ ಸಮ್ಮೇಳನ ಉದ್ಘಾಟಿಸಿ  ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರ ಖಂಡ್ರೆ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದಲ್ಲಿ ಪರಿವರ್ತನೆಗೆ ಅನೇಕ ಕಾರಣಗಳಿದ್ದರೂ, ಸಾಹಿತ್ಯವೇ ಅತ್ಯಂತ ಮಹತ್ವದ ಪರಿವರ್ತನೆಯ ಸಾಧನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರ ಖಂಡ್ರೆ ನುಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಸಮಾಜದಲ್ಲಿ ಪರಿವರ್ತನೆಗೆ ಅನೇಕ ಕಾರಣಗಳಿದ್ದರೂ, ಸಾಹಿತ್ಯವೇ ಅತ್ಯಂತ ಮಹತ್ವದ ಪರಿವರ್ತನೆಯ ಸಾಧನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರ ಖಂಡ್ರೆ ನುಡಿದರು.

ಅವರು ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಲಾಗಿದ್ದ ಪ್ರಥಮ ದಲಿತ ಬಂಡಾಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಮಸಮಾಜದ ಪರಿಕಲ್ಪನೆಯೊಂದಿಗೆ ಸಮಾಜದಲ್ಲಿ ಧಾರ್ಮಿಕ ಕ್ರಾಂತಿ ಮಾಡಿದ ಪುಣ್ಯಭೂಮಿ ಇದು. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಮಾಜದ ಶೋಷಣೆ ಹಾಗೂ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಕ್ರಾಂತಿ ಮಾಡಿದ್ದರು. ಭಾಷೆ ಮತ್ತು ಸಾಹಿತ್ಯವಿಲ್ಲದಿದ್ದರೆ ಮನುಷ್ಯ ಪಶುವಿನಂತೆ ಇರುತ್ತಿದ್ದನು ಎಂದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ನೀಡಿರುವ ವಾಕ್‌ ಸ್ವಾತಂತ್ರ‍್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದಿಂದಲೇ ಇಂದು ಬಂಡಾಯ ಸಾಹಿತ್ಯ ಮುಕ್ತವಾಗಿ ಹೊರಬರಲು ಸಾಧ್ಯವಾಗಿದೆ. ಒಂದು ವೇಳೆ ಈ ಸ್ವಾತಂತ್ರ‍್ಯವಿಲ್ಲದಿದ್ದರೆ ಬಂಡಾಯ ಸಾಹಿತ್ಯವು ಬೃಹತ್‌ ಆಲದ ಮರದಂತೆ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ ಎಂದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಅವರ ತತ್ವಗಳು ಜಾತಿರಹಿತ, ಶೋಷಣಾರಹಿತ ಸಮಾಜ ನಿರ್ಮಾಣ ಮಾಡಲು ನಮಗೆ ದಾರಿದೀಪವಾಗಿವೆ. ಸಮಾಜ ದಲ್ಲಿರುವ ಎಲ್ಲಾ ವರ್ಗದ ಜನರು ಆರ್ಥಿಕ, ಸಾಮಾಜಿಕವಾಗಿ ಬಲಗೊಂಡರೆ ಮಾತ್ರ ನಮ್ಮ ದೇಶ ಬಲಶಾಲಿಯಾಗಲು ಮತ್ತು ವಿಶ್ವಗುರುವಾಗಲು ಸಾಧ್ಯವಿದೆ ಹೀಗಾಗಿ ಎಲ್ಲರೂ ಶಿಕ್ಷಣ ಪಡೆಯಬೇಕು ಎಂದರು.

ಬೌದ್ದೆ ಅವರ ನಾಲ್ಕು ದಶಕಗಳ ಹೋರಾಟ ಶ್ಲಾಘನೀಯ:

ಕಳೆದ 40 ವರ್ಷಗಳಿಂದ ಮಾರುತಿ ಬೌದ್ಧೆ ಅವರು ಅಸಮಾನತೆ, ಅಸ್ಪೃಶ್ಯತೆ, ಕಂದಾಚಾರ ಮತ್ತು ಜಾತೀಯತೆ ವಿರುದ್ಧ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರಾಗಿದ್ದು, ಅಂಥವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವದು ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ.ಎಂದು ಪ್ರಶಂಸಿಸಿದರು.

ಇದೇ ಸಂದರ್ಭದಲ್ಲಿ ರಂಗಮಂದಿರದ ನವೀಕರಣಗೊಳಿಸುವ ಕೆಲಸ ಮಾಡಲು ಬೇಕಾಗುವ ಅನುದಾನ ನೀಡಲಾಗುವುದು ಎಂದರು. ಇದಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ರಹೀಮ್‌ ಖಾನ್‌, ಡಾ.ಶೈಲೇಂದ್ರ ಬಲ್ದಾಳೆ, ಭಂತೆ ವರಜ್ಯೋತಿ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಸಮ್ಮೇಳನ ಸರ್ವಾ ಧ್ಯಕ್ಷರಾದ ಮಾರುತಿ ಬೌದ್ಧೆ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಡಿಜಿ ಸಾಗರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿ.ಬಿ.ಸೋಮಶೆಟ್ಟಿ, ಶಾಂತಾಬಾಯಿ ಕಾಂಬಳೆ, ಎಸ್‌.ಎಂ.ಜನವಾಡಕರ, ಶಿವಯ್ಯ ಸ್ವಾಮಿ, ದೇವಿದಾಸ ಚಿಮಕೋಡೆ, ಕಲ್ಯಾಣರಾವ್‌ ಗುಮ್ಮಾ, ಓಂಕಾರ ಮಠಪತಿ, ಗುರುನಾಥ ರಾಜಗೀರಾ, ಎಸ್‌ಪಿ ಸುಳ್ಳದ, ಸುರೇಶ ಹಾದಿಮನಿ, ಅರುಣ ಪಟೇಲ್‌, ಗಾಲೀಬ್‌ ಹಾಶ್ಮಿ ಸೇರಿದಂತೆ ಜಿಲ್ಲೆಯ ತಾಲೂಕುಗಳ ಕಸಾಪ ಅಧ್ಯಕ್ಷರು ಡಿಎಸ್‌ಎಸ್‌ ಪ್ರಮುಖರು ಹಾಜರಿದ್ದರು. ಎಂಎಸ್‌ ಮನೋಹರ ಸ್ವಾಗತಿಸಿದರೆ, ಶಿವಶಂಕರ ಟೋಕರೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ