ಸಾಹಿತ್ಯ ಯಾವತ್ತೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ

KannadaprabhaNewsNetwork |  
Published : Sep 01, 2025, 01:03 AM IST
31ಸಿಎಚ್‌ಎನ್‌51ಚಾಮರಾಜನಗರದ ಡಾ. ರಾಜ್‌ಕುಮಾರ್‌ ಕಲಾ ಮಂದಿರದಲ್ಲಿ ಪ್ರಕಾಶ್‌ ಪುಟ್ಟಪ್ಪ ಅವರ ಗಾಂಧೀ ಜೋಡಿನ ಮಳಿಗೆ ಮತ್ತು ಅಥನ್ಸಿನ ಪಾರಿವಾಳ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಮೈಸೂರು ಸಾಹಿತಿ ಹಾಗೂ ವಿಮರ್ಶಕರಾದ ಜಿ.ಪಿ. ಬಸವರಾಜು  ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಹಿತ್ಯ ಹಾಗೂ ಕಲೆ ಮೂಲಕ ದೇಶ ಬೆಳವಣಿಗೆಯಾಗುತ್ತದೆ ಎಂದು ಸಾಹಿತ್ಯ ಯಾವತ್ತೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ಅಹಿಂಸೆಯ ಮೂಲಕ ಜೀವನ ತತ್ವ, ಹೃದಯವನ್ನು ಪರಿವರ್ತನೆ ಮಾಡುತ್ತದೆ ಎಂದು ಮೈಸೂರು ಸಾಹಿತಿ ಜಿ.ಪಿ. ಬಸವರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಾಹಿತ್ಯ ಹಾಗೂ ಕಲೆ ಮೂಲಕ ದೇಶ ಬೆಳವಣಿಗೆಯಾಗುತ್ತದೆ ಎಂದು ಸಾಹಿತ್ಯ ಯಾವತ್ತೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ಅಹಿಂಸೆಯ ಮೂಲಕ ಜೀವನ ತತ್ವ, ಹೃದಯವನ್ನು ಪರಿವರ್ತನೆ ಮಾಡುತ್ತದೆ ಎಂದು ಮೈಸೂರು ಸಾಹಿತಿ ಜಿ.ಪಿ. ಬಸವರಾಜು ಹೇಳಿದರು.

ನಗರದ ಡಾ. ರಾಜ್‌ಕುಮಾರ್‌ ಕಲಾ ಮಂದಿರದಲ್ಲಿ ಪ್ರಕಾಶ್‌ ಪುಟ್ಟಪ್ಪ ಅವರ ಗಾಂಧೀ ಜೋಡಿನ ಮಳಿಗೆ ಮತ್ತು ಅಥನ್ಸಿನ ಪಾರಿವಾಳ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಸಾಹಿತ್ಯವನ್ನು ಪ್ರೋತ್ಸಾಹಿಸುವುದು ಕಾಣುತ್ತಿಲ್ಲ. ಕಥೆಗಳು, ಕಾದಂಬರಿಗಳನ್ನು ಹಾಕುತ್ತಿಲ್ಲ, ಆನ್‌ಲೈನ್‌ನಲ್ಲಿ ಹಾಕಲಾಗುತ್ತಿದೆ. ಪತ್ರಿಕೆಯಲ್ಲಿರುವುದನ್ನೇ ಓದುತ್ತಿಲ್ಲ, ಆನ್‌ಲೈನ್‌ನಲ್ಲಿ ಓದುತ್ತಾರೆಯೇ ಇದು ಸಾಹಿತ್ಯ ವಿರೋಧಿ ನಿಲುವು ಎಂದು ಹೇಳಿದರು.

ಸಾಹಿತಿಗಳಿಗೆ ಸಾಹಿತ್ಯ ಪ್ರಕಟಿಸಲು ಕಷ್ಟಬಂದಿದೆ. ಫೇಸ್‌ಬುಕ್‌ನಲ್ಲಿ ಹಾಕಬೇಕಾಗಿದ್ದು, ಸೋಸಿಯಲ್‌ ಮೀಡಿಯಾದಲ್ಲಿ ಓದಿ ಲೈಕ್‌ ಮತ್ತು ಡಿಸ್‌ಲೈಕ್‌ ಜನರು ಕೊಡುತ್ತಾರೆ. ಸಾಹಿತ್ಯಕ್ಕೆ ಇದೊಂದು ಆತಂಕಕರಾರಿ ವಿಚಾರವಾಗಿದ್ದು, ಇದನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕು. ಸಾಹಿತ್ಯ ಕಲೆಯ ಮೂಲಕ ದೇಶ ಬೆಳೆಯುತ್ತದೆ ಎಂದರು.

ಇಂದು ಬಹಳ ಜನ ಕೃತಿ ಬರೆಯುತ್ತಿದ್ದಾರೆ. ಕೆಲವರಿಗೆ ತಮ್ಮ ನೆಲದ ಜೀವನ ದರ್ಶನವಿಲ್ಲ, ಅನುಭವದಲ್ಲೂ ಇರಲ್ಲ, ಇದನ್ನು ಬರೆಯುತ್ತಿರುವುದು ಒಳ್ಳೇಯದು. ಜಾತಿ ವ್ಯವಸ್ಥೆ ಹೇಯವಾದ ವ್ಯವಸ್ಥೆ, ಇದನ್ನು ತಡೆಯಲು ವಚನಕಾರರು ಕೃತಿಗಳಲ್ಲಿ ಅಂದಿನ ವರ್ತಮಾನವನ್ನು ಬರೆದರು. ಅದೇ ರೀತಿ ಜಯಪ್ರಕಾಶ್‌ ಪೊನ್ನಾಚಿ ಅವರು ಕೂಡ ವರ್ತಮಾನವನ್ನು ಪುಸ್ತಕದಲ್ಲಿ ಬರೆದಿದ್ದಾರೆ ಎಂದರು.

ಸಾಹಿತಿ ಹನೂರು ಕೃಷ್ಣಮೂರ್ತಿ ಮಾತನಾಡಿ, ಬರಹಕ್ಕೆ ಅಂತ್ಯವೂ ಇಲ್ಲ, ಕೊನೆ ಇಲ್ಲ, ಎಲ್ಲೆಯೂ ಕೂಡ ಇಲ್ಲ. ಇದು ನಮ್ಮ ಅಂತರಂಗದಲ್ಲಿ ಪ್ರವಹಿಸುತ್ತ ಇರುತ್ತದೆ. ಸಾಹಿತ್ಯಕ್ಕೆ ಪ್ರಶಸ್ತಿಗಳು ಹೆಚ್ಚಾಗಿವೆ. ಬರವಣೆಯ ಸತ್ವಗಳು ಕಡಿಮೆಯಾಗಿವೆ. ಪ್ರಶಸ್ತಿ ಸಿಕ್ಕಿರುವ ಕಾವ್ಯಗಳೇಲ್ಲವು ಶ್ರೇಷ್ಠ ಬರವಣಿಗೆಯಲ್ಲ. ಶ್ರೇಷ್ಠ ಬರವಣಿಗೆಗೆ ಪ್ರಶಸ್ತಿಗಳು ಬಂದಿಲ್ಲ, ಪ್ರಶಸ್ತಿಗಳಿಗೆ ಮಾನದಂಡಗಳಿದೆ ಆ ಪ್ರಕಾರ ನೀಡಲಾಗಿದೆ. ನನ್ನ ಪ್ರಕಾರ ಪ್ರಶಸ್ತಿಗಳು ಬಂದಿರವೆಲ್ಲವು ಸರ್ವ ಶ್ರೇಷ್ಠ ಬರವಣಿಗೆ ಅಲ್ಲ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಸ್ವಾಮಿ ಪೊನ್ನಾಚಿ, ಸಾಹಿತಿ ಮತ್ತು ಪತ್ರಕರ್ತೆ ಕುಸುಮ ಆಯರಹಳ್ಳಿ, ದೀನಬಂಧು ಸಂಸ್ಥೆ ಜಯದೇವ್‌ ಮಾತನಾಡಿದರು. ಸಾಹಿತಿ ಹಾಗೂ ಜಾನಪದ ವಿದ್ವಾಂಸರಾದ ಮಹದೇವ ಶಂಕನಪುರ, ಬೆಂಗಳೂರು ಅಮೂಲ್ಯ ಪುಸ್ತಕ ಪ್ರಕಾಶಕ ಕೃಷ್ಣ ಚಂಗಡಿ, ಲೇಖಕ ಜಯಪ್ರಕಾಶ್‌ ಪೊನ್ನಾಚಿ ಅವರು ಇದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ