ಜನರ ನೈಜ ನಂಬಿಕೆ, ಸಂಸ್ಕೃತಿ ಪ್ರತಿಬಿಂಬಿಸುವ ಸಾಹಿತ್ಯ: ಡಾ. ವೀರೇಂದ್ರ ಪಾಲ್

KannadaprabhaNewsNetwork |  
Published : Apr 18, 2026, 02:00 AM IST
ಗದಗ ನಗರದ ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಸಮ್ಮೇಳನವನ್ನು ಡಾ. ವೀರೇಂದ್ರ ಪಾಲ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಹರಿಯಾಣದ ಗುರು ಜಂಬೇಶ್ವರ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯಕುಮಾರ್ ಮಾತನಾಡಿ, ಸಾಹಿತ್ಯ ನಮ್ಮ ಬದುಕಿನ ವಿವಿಧ ಆಯಾಮಗಳನ್ನು ಒಳಗೊಂಡು ಜನರ ಮನಸ್ಸು ಮತ್ತು ಬುದ್ಧಿಯನ್ನು ಬೆಳಗುತ್ತದೆ. ಸಾಹಿತ್ಯದಲ್ಲಿ ಸುಂದರ ಬದುಕಿಗೆ ಬೇಕಾದ ಹಲವು ವಿಚಾರಗಳಿವೆ ಎಂದರು.

ಗದಗ: ಸಮಕಾಲೀನ ಭಾರತೀಯ ಸಾಹಿತ್ಯ ವೈವಿಧ್ಯಮಯವಾಗಿ ಬೆಳೆದಿದೆ. ಅದು ಭಾರತೀಯ ಜನರ ನೈಜ ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹರಿಯಾಣದ ಕುರುಕ್ಷೇತ್ರ ವಿವಿ ಕುಲಸಚಿವ ಡಾ. ವೀರೇಂದ್ರ ಪಾಲ್ ಹೇಳಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ., ಕನ್ನಡ, ಹಿಂದಿ, ಇಂಗ್ಲಿಷ್ ಭಾಷಾ ವಿಭಾಗಗಳ ಸಹಯೋಗದಲ್ಲಿ ''''ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿನ ಇತ್ತೀಚಿನ ಪ್ರವೃತ್ತಿಗಳು'''' ಎಂಬ ವಿಷಯದ ಮೇಲೆ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಹರಿಯಾಣದ ಗುರು ಜಂಬೇಶ್ವರ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯಕುಮಾರ್ ಮಾತನಾಡಿ, ಸಾಹಿತ್ಯ ನಮ್ಮ ಬದುಕಿನ ವಿವಿಧ ಆಯಾಮಗಳನ್ನು ಒಳಗೊಂಡು ಜನರ ಮನಸ್ಸು ಮತ್ತು ಬುದ್ಧಿಯನ್ನು ಬೆಳಗುತ್ತದೆ. ಸಾಹಿತ್ಯದಲ್ಲಿ ಸುಂದರ ಬದುಕಿಗೆ ಬೇಕಾದ ಹಲವು ವಿಚಾರಗಳಿವೆ ಎಂದು ಹೇಳಿದರು.

ಚೆನ್ನೈನ ಮದ್ರಾಸ್ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಮಿಳು ಸೆಲ್ವಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಮುಖ್ಯ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಬದುಕಿನಲ್ಲಿ ಹಲವು ವಿಷಯಗಳನ್ನು ನೋಡಿ ಕಲಿತರೆ ಕೆಲವನ್ನು ಶಾಸ್ತ್ರಗಳಿಂದ, ಕೆಲವು ವಿಚಾರಗಳನ್ನು ಸಜ್ಜನರಿಂದ ಕಲಿಯಬಹುದಾಗಿದೆ. ವಿದ್ಯಾರ್ಥಿಗಳು ಕಲಿಯುವ ಮನಸ್ಥಿತಿ ಬೆಳೆಸಿಕೊಳ್ಳಿ. ಇತ್ತೀಚಿನ ಭಾರತೀಯ ಸಾಹಿತ್ಯದಲ್ಲಿ ಅನುವಾದವು ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ಇದರಿಂದ ನಮ್ಮ ದೇಶದ ಬೇರೆ, ಬೇರೆ ಭಾಷೆಗಳಲ್ಲಿನ ಸಾಹಿತ್ಯ, ಸಂಸ್ಕೃತಿಯನ್ನು ಪರಸ್ಪರ ಪರಿಚಯ ಮಾಡಿಕೊಳ್ಳಲು ನೆರವಾಗುತ್ತದೆ. ಭಾರತೀಯ ಸ್ತ್ರೀವಾದವು ಹೊಸ ರೂಪುರೇಷೆಗಳೊಂದಿಗೆ ಸ್ತ್ರೀಯರ ಬದುಕಿನಲ್ಲಿ ಆಮೂಲಾಗ್ರವಾದ ಬದಲಾವಣೆಯನ್ನು ಉಂಟುಮಾಡಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ಸೀತಾರಾಮ ಕೆ. ಪವಾರ್ ಮಾತನಾಡಿ, ಸಾಹಿತ್ಯ ಮತ್ತು ಸಮಾಜದ ನಡುವಿನ ಸಂಬಂಧವನ್ನು ವಿವರಿಸುತ್ತಾ, ಸಾಹಿತ್ಯವನ್ನು ಸಮಾಜದ ಕನ್ನಡಿ ಎಂದರು.

ಅಧ್ಯಕ್ಷತೆಯನ್ನ ಪ್ರಾಚಾರ್ಯ ಪ್ರೊ. ಪಿ.ಜಿ. ಪಾಟೀಲ ವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪ್ರಬಂಧ ಮಂಡಿಸಿದರು. ಪ್ರೊ. ಜಿ. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಿ.ಆರ್. ಚಿನಗುಂಡಿ, ಪ್ರೊ. ಸ್ನೇಹಾ ಕೊಡಗುಳಿ ಪರಿಚಯಿಸಿದರು. ಸುಶ್ಮಿತಾ ಪೂಜಾರ ಪ್ರಾರ್ಥಿಸಿದರು. ಸಂಜನಾ ಹಾಗೂ ಸಂಗೀತಾ ವಣಗೇರಿ ಕಾರ್ಯಕ್ರಮ ನಿರೂಪಿಸಿದರು. ಡಾ. ನಾಗರಾಜ್ ಬಳಿಗೇರ ಹಾಗೂ ಡಾ. ನಾಗರಾಜ್ ಓಬ್ಬಯ್ಯ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಮೋಫಿಲಿಯಾ ಬಗ್ಗೆ ಭಯ ಬೇಡ: ಡಾ. ರಾಜೇಂದ್ರ ಗಡಾದ
ಮುಳಗುಂದದಲ್ಲಿ ಗಣತಿ ಕಿಟ್‌ಗಾಗಿ ಶಿಕ್ಷಕರ ಪ್ರತಿಭಟನೆ