19ರಿಂದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಸಾಹಿತ್ಯ ಕಮ್ಮಟ

KannadaprabhaNewsNetwork |  
Published : Jun 18, 2025, 11:49 PM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಜೂ. 19ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕಂದರಾಜ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಹಾವೇರಿ: ಜೈಲಿನಲ್ಲಿರುವ ಕೈದಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ ಸೌಹಾರ್ದ ಬದುಕಿಗೆ ಭರವಸೆ ತುಂಬುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜೈಲಿನ ಕೈದಿಗಳಿಗೆ ಸಾಹಿತ್ಯ ಕಮ್ಮಟ ಹಮ್ಮಿಕೊಂಡಿದೆ. ಜತೆಗೆ, ಗಣ್ಯರ ಉಪನ್ಯಾಸ, ಸಂವಾದವೂ ಇರಲಿದ್ದು, ಸಾಹಿತ್ಯ ಅಕಾಡೆಮಿಯು ಹೊಸ ಹೆಜ್ಜೆ ಇರಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕಾರಾಗೃಹ ಇಲಾಖೆ, ಜಿಲ್ಲಾ ಕಾರಾಗೃಹ ಸಹಯೋಗದಲ್ಲಿ ಕಾರಾಗೃಹವಾಸಿಗಳಿಗೆ ಜೂ. 19, 20 ಹಾಗೂ 21ರಂದು ಮೂರು ದಿನಗಳ ಸಾಹಿತ್ಯ ಕಮ್ಮಟವನ್ನು ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಲಾಗಿದೆ.ಜೂ. 19ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕಂದರಾಜ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ, ಹಾವೇರಿ ವಿವಿ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ, ಗೊಟಗೋಡಿ ಕರ್ನಾಟಕ ಜಾನಪದ ವಿವಿ ಕುಲಸಚಿವ ಡಾ. ಸಿ.ಟಿ. ಗುರುಪ್ರಸಾದ್ ಅವರು ಭಾಗವಹಿಸಲಿದ್ದಾರೆ.ಜಿಲ್ಲಾ ಕಾರಾಗೃಹ ಅಧೀಕ್ಷಕಿ ನಾಗರತ್ನ ವೈ.ಡಿ. ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್., ಸಾಹಿತ್ಯ ಕಮ್ಮಟ ಸಂಚಾಲಕ ಗಣೇಶ ಅಮೀನಗಡ ಅವರು ಉಪಸ್ಥಿತರಿರುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.ಜೂ. 20ರಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಸಾಹಿತಿ ಹೆಬಸೂರ ರಂಜಾನ್ ಅವರು ಕನ್ನಡ ಕಾವ್ಯದಲ್ಲಿ ಸೌಹಾರ್ದ ನೆಲೆಗಳು, ಶಿಗ್ಗಾಂವಿಯ ಚೆನ್ನಪ್ಪ ಕುನ್ನೂರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜ ದ್ಯಾಮನಕೊಪ್ಪ ಅವರು ವಚನ ಸಾಹಿತ್ಯದ ಮಹತ್ವ, ಕೂನಬೇವು ಕವಿ ಹಾಗೂ ರೈತ ಚಂಸು ಪಾಟೀಲ ಅವರು ಕೃಷಿ ಬದುಕು: ಒಂದು ಸ್ವಾನುಭವ ಕಥನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗೊಟಗೋಡಿ ಉತ್ಸವ ರಾಕ್ ಗಾರ್ಡ್ ಕ್ಯೂರೇಟರ್ ಡಾ. ವೇದರಾಣಿ ದಾಸನೂರ ಅವರು ಭಾಗವಹಿಸಲಿದ್ದಾರೆ.ಜೂ. 21ರಂದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಹಾಗೂ ಲೇಖಕ ಗಣೇಶ ಅಮಿನಗಡ ಅವರು ರಂಗಚಿಕಿತ್ಸೆ ಉಪನ್ಯಾಸ ನೀಡಲಿದ್ದಾರೆ. ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ.ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

ರಾಣಿಬೆನ್ನೂರು: ತಾಲೂಕಿನ 110 ಕೆವಿ ತುಮ್ಮಿನಕಟ್ಟಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ. 20ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.ಶುಕ್ರವಾರ ಕೂಸಗಟ್ಟಿ ಗ್ರಾಮದಲ್ಲಿನ ಹಿರೇಕೆರೂರು ಗ್ರಾಮದ ಕುಡಿಯುವ ನೀರಿನ ಸ್ಥಾವರ, ಆಣೂರು ಕೆರೆ ತುಂಬಿಸುವ 33 ಕೆವಿ ಸ್ಥಾವರ, ತುಮ್ಮಿನಕಟ್ಟಿ, ಫತ್ತೇಪುರ, ಕೂಸಗಟ್ಟಿ, ಮೆಣಸಿನಹಾಳ, ತಿಮ್ಮೆನಹಳ್ಳಿ, ಸಣ್ಣಸಂಗಾಪುರ, ಮಾಳನಾಯಕನಹಳ್ಳಿ ಗ್ರಾಮಗಳಿಗೆ ಹಾಗೂ ಕೋಟಿಹಾಳ ಗ್ರಾಮದಲ್ಲಿರುವ ಅಸುಂಡಿ ಕೆರೆ ತುಂಬಿಸುವ 33 ಕೆವಿ ಸ್ಥಾವರ, ಬಡಬಸಾಪುರ, ಕೂಲಿ, ಕುಪ್ಪೇಲೂರು, ನಿಟ್ಟಪಳ್ಳಿ, ಕೋಟಿಹಾಳ, ಚಿಕ್ಕಮಾಗನೂರು, ಹಿರೇಮಾಗನೂರು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಆದರೆ ಕೃಷಿ/ನೀರಾವರಿ ಪಂಪ್‌ಸೆಟ್‌ಗಳ 11 ಕೆವಿ ಮಾರ್ಗಗಳಿಗೆ ವೇಳೆ ಬದಲಾವಣೆ ಮಾಡಿ ಹಿಂದಿನ ದಿನದ ರಾತ್ರಿ ಪಾಳಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಉಪವಿಭಾಗ- 2ರ ಕಚೇರಿ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ