ಕನ್ನಡಪ್ರಭ ವಾರ್ತೆ ಕುಕನೂರು
ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಜಾತ್ರಾ ಮಹೋತ್ಸವ ಮತ್ತು ಶ್ರೀ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಮಂಗಳದ ಸಾನಿಧ್ಯ ವಹಿಸಿ ಮಾತನಾಡಿದರು.
ಜೀವನದಲ್ಲಿ ಯಶಸ್ಸು ಸಾಧಿಸಲು ನಮ್ಮಲ್ಲಿ ತಾಳ್ಮೆ ಇರಬೇಕು. ತಾಳಿದವನು ಬಾಳುತ್ತಾನೆ. ಗುರುವಿನ ಮಾರ್ಗದರ್ಶನದಲ್ಲಿ ಸದಾ ನಡೆಯಬೇಕು. ಸೇವೆ ಮಾಡುವ ಗುಣ ಅಳವಡಿಸಿಕೊಳ್ಳಬೇಕು. ನಮ್ಮಲ್ಲಿ ತ್ಯಾಗದ ಬದುಕು ಇರಬೇಕು. ಒಬ್ಬರನ್ನ ನೋಡಿ ಖುಷಿ ಪಡಬೇಕು. ಬದುಕು ನಾಲ್ಕು ಜನರ ಕಲ್ಯಾಣಕ್ಕೆ ದಾರಿಯಾಗಬೇಕು. ಹಮ್ಮು ಬಿಮ್ಮುಗಳು ಇಲ್ಲದ ಬದುಕು ನಮ್ಮದಾಗಬೇಕು ಎಂದರು.ಶ್ರೀ ಶಾಖಾಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ಮುಂಡರಗಿ ಅನ್ನದಾನೀಶ್ವರ ಮಠಕ್ಕೆ 900 ವರ್ಷಗಳ ಭವ್ಯವಾದ ಪರಂಪರೆಯಿದೆ. ಶ್ರೀ ಮಠ ತನ್ನ ಮೂಲ ಆಸ್ತಿಯನ್ನು ಹಲವಾರು ಕಲ್ಯಾಣ ಕಾರ್ಯಗಳಿಗೆ ದಾನ ನೀಡಿದೆ. ಸಾಹಿತ್ಯಿಕವಾಗಿ 260ಕ್ಕೂ ಹೆಚ್ಚು ಗ್ರಂಥಗಳನ್ನು ಈ ನಾಡಿಗೆ ನೀಡಿದೆ. ಶೈಕ್ಷಣಿಕವಾಗಿ 1924ರಲ್ಲೆ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಪ್ರಾರಂಭಿಸಿ ಶಿಕ್ಷಣವನ್ನು ನೀಡಿದ ಕೀರ್ತಿ ಶ್ರೀಮಠಕ್ಕೆ ಇದೆ. ಇಂತಹ ಶ್ರೀಮಠಕ್ಕೆ ನಾಡಿನ ತುಂಬೆಲ್ಲ ಭಕ್ತರು ಇದ್ದಾರೆ. ಅವರ ಭಕ್ತಿ ದೊಡ್ಡದು ಎಂದರು.
ಪ್ರವಚನ ಸೇವೆಯನ್ನು ಶಿವಯೋಗಿಶ್ವರ ಸ್ವಾಮೀಜಿ, ಸಂಗೀತ ಸೇವೆಯನ್ನ ಕುಮಾರ ಶಾಸ್ತ್ರಿ ತೊಳಲಿ, ಮಲ್ಲಿಕಾರ್ಜುನ ಕರ್ಜಗಿ, ಈಶ್ವರಯ್ಯ ಹಲಸಿನಮಠದ, ಬಸಯ್ಯ ಚಂಡೂರು ಮಾಡಿದರು.
ಬೆಳಗ್ಗೆ ಶ್ರೀ ಕಲ್ಬುರ್ಗಿ ಶರಣಬಸವೇಶ್ವರ ಭಾವಚಿತ್ರ, ಕುಂಭ ಮೇರವಣಿಗೆ ಮತ್ತು ಸಂಜೆ ಅನ್ನದಾನೀಶ್ವರ ರಥೋತ್ಸವಕ್ಕೆ ಮುಂಡರಗಿ ಪೂಜ್ಯರು ಚಾಲನೆ ನೀಡಿದರು. ಮಹಾದಾಸೋಹ ಜರುಗಿತು.ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ಮೈನಳ್ಳಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ, ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಗೂಳಪ್ಪಜ್ಜ ಮೂಲಿಮನಿ, ವೀರಯ್ಯ ತೋಂಟದಾರ್ಯಮಠ, ಜಯಣ್ಣ ಮುಂಡರಗಿ, ತಳಕಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರಿದ್ದರು.