-ನಿವೃತ್ತ ಇಂಜಿನಿಯರ್ ಕೆ.ಸಿ.ನಿಂಗಪ್ಪ ಅವರ ಶ್ರದ್ಧಾಂಜಲಿ
---ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಾನವ ಸತ್ತಮೇಲೆ ಬದುಕುವುದೇ ಜೀವನ, ಮಾನವ ಸತ್ತರೂ ಬದುಕಿನಲ್ಲಿ ಎಂದು ಚಿರಸ್ಥಾಯಿಯಾಗಿರುವಂತ ಕಾರ್ಯ ಮಾಡಿದಾಗ ಅವನ ಬದುಕು ಶಾಶ್ವತವಾಗುತ್ತದೆ ಎಂದು ಸಾಣೇಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಿವೃತ್ತ ಎಂಜಿನಿಯರ್ ಕೆ.ಸಿ.ನಿಂಗಪ್ಪನವರ ಶ್ರದ್ಧಾಂಜಲಿ ಸಭೆಯ ಸಾನಿಧ್ಯವಹಿಸಿ, ಯಾವುದೇ ವ್ಯಕ್ತಿ ಧರ್ಮದ ಹೆಸರಿನಲ್ಲಿ ಧರ್ಮಾಂಧತೆ ಬೆಳೆಸಿದರೆ ಅದನ್ನು ವಿರೋಧಿಸಬೇಕು. ಫುಲ್ಗಾಮ್ ನಲ್ಲಿ ಅಮಾಯಕ ಜೀವಿಗಳನ್ನು ಬಲಿ ತೆಗೆದುಕೊಂಡ ದುಷ್ಟ ಶಕ್ತಿಗಳನ್ನು ದಮನ ಮಾಡಬೇಕಿದೆ ಎಂದರು.
ಶಾಸಕ ಬಿಜೆಪಿ ಗೋವಿಂದಪ್ಪ ಮಾತನಾಡಿ, ಅಪ್ಪರ್ ಭದ್ರಾ ಯೋಜನೆ ಯಶಸ್ವಿಗೆ ಕೆ.ಸಿ.ನಿಂಗಪ್ಪನವರ ಸೇವೆ ಅನನ್ಯ. ತಾಲೂಕಿನ ಎಲ್ಲಾ ರೀತಿಯ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದ ದೀಮಂತ ನಾಯಕ, ಟಿ ಬಿ ವೃತ್ತದ ಅಂಬೇಡ್ಕರ್ ಸರ್ಕಲ್ ಗೆ ತಾಂತ್ರಿಕ ಸಲಹೆ ನೀಡಿದವರು ಅನುಭವಿ ನಿವೃತ್ತ ಇಂಜಿನಿಯರ್ ಅವರ ಅಗಲಿಕೆ ಅತೀವ ನೋವು ತಂದಿದೆ ಎಂದರು.ಬಾಲ್ಯದಲ್ಲಿ ಮಕ್ಕಳಿಗೆ ನೀತಿವಂತ ಸತ್ಯವಂತ ಶಿಕ್ಷಣ ಕೊಡುವ ಅಗತ್ಯತೆ ಇದೆ ಎಂದರು.
ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಕಣ್ಣು ತೆರದರೆ ಜನನ ಮುಚ್ಚಿದರೆ ಮರಣ ಲೆಸೆನಿಸಿಕೊಂಡು ಬಹುದಿನ ಬದುಕಿದರೂ ಸಾರ್ಥಕ ಬದುಕಿದ್ದಾರೆ ಕೆ ಸಿ ನಿಂಗಪ್ಪ, ಮಠ ಮತ್ತು ಸಮಾಜದೊಂದಿಗೆ ಸಾರ್ಥಕ ಬದುಕನ್ನು ಸವೆಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶ್ರೀ ಮಾದರ ಚೆನ್ನಯ್ಯ ಗುರು ಪೀಠದ ಡಾ, ಮಾದಾರ ಚೆನ್ನಯ್ಯ ಸ್ವಾಮೀಜಿ, ವಿಧಾನಪರಿಷತ್ ಎಸ್ ನವೀನ್, ಮಾತನಾಡಿದರು. ಮಾಜಿ ಸಚಿವ ಏಕಾಂತಪ್ಪ,ಮಾಜಿ ಶಾಸಕರಾದ ಇಲ್ಕಲ್ ವಿಜಯಕುಮಾರ್, ಟಿ ಹೆಚ್ ಬಸವರಾಜಪ್ಪ, ರಮೇಶ್, ಮಾಜಿ ಜಿ ಪಂ ಹನುಮಂತಪ್ಪ, ಗುರುಸ್ವಾಮಿ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ತಮ್ಮಣ್ಣ, ಕಲ್ಲೇಶ್, ದೊಡ್ಡಘಟ್ಟ ದ್ಯಾಮಪ್ಪ, ಶೇಖರಪ್ಪ, ವಿಶ್ವನಾಥ್ ಹಾಗೂ ಕುಟುಂಬದವರು ಭಾಗವಹಿಸಿದ್ದರು.
----ಫೋಟೋ: ಹೊಸದುರ್ಗದಲ್ಲಿ ನಿವೃತ್ತ ಇಂಜಿನಿಯರ್ ಕೆ.ಸಿ.ನಿಂಗಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು