ರವಿ ಕಾಂಬಳೆ
ಪ್ರಖರ ಬಿಸಿಲಿನ ಹೊಡೆತಕ್ಕೆ ಬಾಯಾರಿಕೆಯಿಂದ ಬಳಲುತ್ತಿದ್ದ ಹಳ್ಳಿಗರ ಜಲಮೂಲ, ಕೃಷಿಕರ ಜೀವನಾಡಿ ಎನಿಸಿರುವ ಕೆರೆಗಳಲ್ಲಿ ಈಗ ನೀರು ಸಂಗ್ರಹಗೊಂಡಿದೆ. ಇದರೊಂದಿಗೆ ಕೆರೆಗಳ ತಳ ತಣಿದು ಜಲವೈಭವ ಸೃಷ್ಟಿಯಾಗಿದೆ. ಈ ಮೂಲಕ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಮುಂಗಾರು ಪೂರ್ವ ಮಳೆಯಿಂದ ಹುಕ್ಕೇರಿ ತಾಲೂಕಿನ ಕೆರೆಗಳಿಗೆ ಜೀವಕಳೆ ಬಂದಿದೆ. ನೀರಿಲ್ಲದೇ ಭಣಗುಡುತ್ತಿದ್ದ ಕೆರೆಗಳ ಒಡಲಲ್ಲಿ ಜೀವಜಲ ಶೇಖರಣೆಯಾಗಿದೆ. ಕಳೆದ ವರ್ಷ ಉಂಟಾದ ಭೀಕರ ಬರ ಪರಿಸ್ಥಿತಿಯಿಂದ ಕೆರೆ-ಕುಂಟೆ, ಕಳ್ಳ-ಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿದ್ದವು. ಇದೀಗ ಸುರಿದ ಪೂರ್ವ ಮುಂಗಾರು ಮಳೆ ನೀರಿನ ಸೆಲೆ ಮೂಡಿಸಿದೆ.ಗ್ರಾಮೀಣ ಜನರಿಗೆ ವರದಾನವಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರದಡಿ ಹೊಸ ಕೆರೆ ನಿರ್ಮಾಣ ಮತ್ತು ಹಳೆ ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಮೂಲಕ ಮಳೆ ನೀರು ಹಿಡಿದಿಟ್ಟು ಅಂತರ್ಜಲಮಟ್ಟ ಹೆಚ್ಚಿಸುವುದರೊಂದಿಗೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನರೇಗಾ ಉದ್ದೇಶ ಸಫಲವಾಗುವ ಆಶಾಭಾವ ಮೂಡಿಸಿದೆ.
ತಾಲೂಕಿನ ಕರಿಕಟ್ಟಿಯಲ್ಲಿ ₹10 ಲಕ್ಷ, ಗುಡಸದಲ್ಲಿ ₹6 ಲಕ್ಷ, ಅಲದಾಳದಲ್ಲಿ ₹5 ಲಕ್ಷ ವೆಚ್ಚದಲ್ಲಿ ಹೊಸ ಕೆರೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರೆ ಯರನಾಳದಲ್ಲಿ ₹10 ಲಕ್ಷ, ದಡ್ಡಿಯಲ್ಲಿ ₹48 ಲಕ್ಷ, ಗುಡಸದಲ್ಲಿ ₹20 ಲಕ್ಷ, ಹೊಸೂರದಲ್ಲಿ ₹28 ಲಕ್ಷ, ಯರಗಟ್ಟಿಯಲ್ಲಿ ₹28 ಲಕ್ಷ, ಬಡಕುಂದ್ರಿಯಲ್ಲಿ ₹25 ಲಕ್ಷ, ರಕ್ಷಿಯಲ್ಲಿ ₹2 ಲಕ್ಷಗಳ ವೆಚ್ಚದಲ್ಲಿ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
----------
-ರಾಹುಲ್ ಶಿಂಧೆ, ಜಿಪಂ ಸಿಇಒ.
-ಟಿ.ಆರ್.ಮಲ್ಲಾಡದ, ಇಒ ತಾಪಂ.ನೀರು ಅಮೃತವಿದ್ದಂತೆ. ನೀರು ಇಲ್ಲದಿದ್ದರೆ ಭೂಮಿ ಬರಡಾಗುವುದು. ಬರಡಾದ ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ. ಭೂಮಿ ಬರಡಾಗುವುದನ್ನು ತಪ್ಪಿಸಲು ಹಾಗೂ ಜೀವಿಗಳನ್ನು ಬದುಕಿಸಲು ನೀರು ಅವಶ್ಯಕ. ಈ ಎಲ್ಲ ಅಂಶಗಳನ್ನು ಗಮನಿಸಿ ಕೆರೆಗಳ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.