- ಧನಸಹಾಯಕ್ಕಾಗಿ ದಾನಿಗಳು, ಸಂಘ-ಸಂಸ್ಥೆಗಳಿಗೆ ಪೋಷಕರ ಮನವಿ - - -
ಲಿವರ್ ಫೇಲ್ಯೂರ್ ಆಗಿರುವ ಒಂದೂವರೆ ವರ್ಷದ ಮಗುವಿನ ಶಸ್ತ್ರಚಿಕಿತ್ಸೆಗೆ ದಾನಿಗಳು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡುವ ಮೂಲಕ ಬಡಮಗುವಿನ ಚಿಕಿತ್ಸೆಗೆ ನೆರವಿನ ಹಸ್ತ ಚಾಚಬೇಕು ಎಂದು ಸಂಬಂಧಿಗಳು ಮನವಿ ಮಾಡಿದರು.
ಹೊನ್ನಾಳಿಯ ಭ್ರಷ್ಟಾಚಾರ ವಿರೋಧಿ ವೇದಿಕೆ- ಕರ್ನಾಟಕದ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಹನುಮಂತಪ್ಪ ಸೊರಟೂರು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚೀಲೂರು ಗ್ರಾಮದ ಹನುಮಂತಪ್ಪ, ಅಕ್ಷತಾ ಎಂಬವರು ಕೂಲಿ ಮಾಡಿ ಜೀವನ ನಡೆಸುವ ದಂಪತಿ. ಇವರ ಒಂದೂವರೆ ವರ್ಷದ ಮಗು ಕುಶಾಂತ್‌ಗೆ ಲಿವರ್ ಫೇಲ್ಯೂರ್ ಆಗಿ, ತೀವ್ರ ಆರೋಗ್ಯ ತೊಂದರೆ ಅನುಭವಿಸುತ್ತಿದೆ ಎಂದರು.ಯಾರಾದರೂ ಲಿವರ್ ನೀಡಿದರೆ ಮಗುವಿನ ಲಿವರ್ ಜೋಡಣೆಗೆ ₹10 ಲಕ್ಷ ಹೊಂದಿಸಬೇಕು. ಲಿವರ್ ಕೊಡದಿದ್ದರೆ ₹25 ಲಕ್ಷ ಶಸ್ತ್ರಚಿಕಿತ್ಸೆಗೆ ನೀಡಬೇಕಿದೆ. ಬಡ ಕೂಲಿ ಕಾರ್ಮಿಕ ದಂಪತಿಗೆ ಈಗ ಮಗುವಿನದೇ ಚಿಂತೆಯಾಗಿದೆ. ಮಂಗಳೂರಿಗೆ ಎ.ಜೆ. ಆಸ್ಪತ್ರೆಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ. ಅಲ್ಲಿಂದ ಮಗುವನ್ನು ಕರೆದೊಯ್ಯಲು ಇನ್ನಿಲ್ಲದ ತೊಂದರೆ ಅನುಭವಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಮಗುವಿನ ಸಂಬಂಧಿಗಳಾದ ಸೋಮಶೇಖರ, ಮಂಜು ತಡಸ, ವಿ.ಸೋಮಶೇಖರ, ಸುನೀಲ್ ಇತರರು ಇದ್ದರು.
-1ಕೆಡಿವಿಜಿ5: ಕುಶಾಂತ್.