ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶೀಘ್ರ ಯಕೃತ್ತು ಕಸಿ ಸೇವೆ ಆರಂಭ

KannadaprabhaNewsNetwork |  
Published : May 06, 2025, 12:22 AM IST
4ಶಿರಿನ್ | Kannada Prabha

ಸಾರಾಂಶ

ಕಸ್ತೂರ್ಬಾ ಆಸ್ಪತ್ರೆಯು ಶೀಘ್ರದಲ್ಲೇ ಡಾ. ಶಿರನ್ ಶೆಟ್ಟಿ ಅವರ ನೇತೃತ್ವದಲ್ಲಿ ಯಕೃತ್ (ಲಿವರ್) ಕಸಿ ಸೇವೆಗಳನ್ನು ಪ್ರಾರಂಭಿಸಲಿದೆ. ಇದರಿಂದ ರೋಗಿಗಳಿಗೆ ಸಂಕೀರ್ಣ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ನೀಡಲಿದ್ದು, ಸಮಗ್ರ ಯಕೃತ್ ಆರೈಕೆ ಲಭ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ ಮತ್ತು ಉಪ ವೈದ್ಯಕೀಯ ಅಧೀಕ್ಷಕ ಡಾ. ಶಿರನ್ ಶೆಟ್ಟಿ ಅವರು ಚೀನಾದ ಶಾಂಘೈನಲ್ಲಿರುವ ಫುಡಾನ್ ವಿಶ್ವವಿದ್ಯಾಲಯದ ಝೋಂಗ್‌ಶಾನ್ ಆಸ್ಪತ್ರೆಯಲ್ಲಿ ನಡೆದ ‘ಎಂಡೋಸ್ಕೋಪಿಯ ಪ್ರಸ್ತುತ ಹೊಸ ಪರಿಕಲ್ಪನೆ’ ಅಂತರರಾಷ್ಟ್ರೀಯ ಎಂಡೋಸ್ಕೋಪಿ ತರಬೇತಿ ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.ಅವರು ಜಠರಗರುಳಿನ ಎಂಡೋಸ್ಕೋಪಿಯಲ್ಲಿನ ಇತ್ತೀಚಿನ ಪ್ರಗತಿಗಳು ಮತ್ತು ನವೀನ ತಂತ್ರಗಳ ಮೇಲೆ ಕೇಂದ್ರಿತವಾಗಿದ್ದ ಕೋರ್ಸ್‌ನಲ್ಲಿ ಅತ್ಯಾಧುನಿಕ ಕೌಶಲ್ಯಗಳು ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳ ತರಬೇತಿಯನ್ನು ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಕಸ್ತೂರ್ಬಾ ಆಸ್ಪತ್ರೆಯು ಶೀಘ್ರದಲ್ಲೇ ಡಾ. ಶಿರನ್ ಶೆಟ್ಟಿ ಅವರ ನೇತೃತ್ವದಲ್ಲಿ ಯಕೃತ್ (ಲಿವರ್) ಕಸಿ ಸೇವೆಗಳನ್ನು ಪ್ರಾರಂಭಿಸಲಿದೆ. ಇದರಿಂದ ರೋಗಿಗಳಿಗೆ ಸಂಕೀರ್ಣ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ನೀಡಲಿದ್ದು, ಸಮಗ್ರ ಯಕೃತ್ ಆರೈಕೆ ಲಭ್ಯವಾಗಲಿದೆ. ಕಸ್ತೂರ್ಬಾ ಆಸ್ಪತ್ರೆ ಸುಧಾರಿತ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಆರೈಕೆಯಲ್ಲಿ ಶ್ರೇಷ್ಠತೆಯ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಬದ್ಧವಾಗಿದೆ ಎಂದು ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಆನಂದ್ ವೇಣುಗೋಪಾಲ್ ಹೇಳಿದ್ದಾರೆ.

ಡಾ.ಶಿರಿನ್ ಶೆಟ್ಟಿ ಅವರು ಈ ಉನ್ನತ ಮಟ್ಟದ ತರಬೇತಿಯಲ್ಲಿ ಭಾಗವಹಿಸಿದ್ದು, ಆಸ್ಪತ್ರೆಯ ವೈದ್ಯಕೀಯ ಸಾಮರ್ಥ್ಯಗಳನ್ನು ಬಲಪಡಿಸುವುದಲ್ಲದೆ, ಶೈಕ್ಷಣಿಕ ಅನ್ವೇಷಣೆಗಳನ್ನು ಶ್ರೀಮಂತಗೊಳಿಸುತ್ತದೆ ಮತ್ತು ರೋಗಿಗಳ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆಸ್ಪತ್ರೆಯ ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ಒದಗಿಸುವ ಮತ್ತು ಅತ್ಯಾಧುನಿಕ ಚಿಕಿತ್ಸೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತವೆ ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು