ಮಲಗಿದ್ದ ಪ್ರಿಯತಮೆಗೆ ಚಾಕು ಇರಿದ ಕೊಲೆ ಮಾಡಿದ ಲಿವಿ ಇನ್‌ ಪಾರ್ಟ್‌ನರ್‌

KannadaprabhaNewsNetwork |  
Published : Jun 15, 2026, 03:00 AM IST
Crime

ಸಾರಾಂಶ

ಬೇರೊಬ್ಬನ ಜೊತೆ ಸಂಬಂಧವಿದೆ ಎಂಬ ಸಂಶಯದಿಂದ ಪ್ರೇಯಸಿಗೆ ಪ್ರಿಯಕರ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. ಸಿಕ್ಕಿಂ ಮೂಲದ ಅತಿ ಹಂಗ್ಮಾ ಸೂಬ (22) ಮೃತ ಯುವತಿ. ಪೊಲೀಸರು ಡಾರ್ಜಿಲಿಂಗ್ ಮೂಲದ ಆರೋಪಿ ಪುರ್ಬಾ ಲೆಪ್ಚಾ ಎಂಬಾತನನ್ನು ಬಂಧಿಸಿದ್ದಾರೆ.

 ಬೆಂಗಳೂರು :  ಬೇರೊಬ್ಬನ ಜೊತೆ ಸಂಬಂಧವಿದೆ ಎಂಬ ಸಂಶಯದಿಂದ ಪ್ರೇಯಸಿಗೆ ಪ್ರಿಯಕರ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. ಸಿಕ್ಕಿಂ ಮೂಲದ ಅತಿ ಹಂಗ್ಮಾ ಸೂಬ (22) ಮೃತ ಯುವತಿ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಡಾರ್ಜಿಲಿಂಗ್ ಮೂಲದ ಆರೋಪಿ ಪುರ್ಬಾ ಲೆಪ್ಚಾ ಎಂಬಾತನನ್ನು ಬಂಧಿಸಿದ್ದಾರೆ.  

ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು

ಅತಿ ಹಂಗ್ಮಾ ಸೂಬ ಸೆಲೂನ್‌ವೊಂದರಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಪುರ್ಬಾ ಲೆಪ್ಚಾ ಖಾಸಗಿ ಹೋಟೆಲ್ ಒಂದರಲ್ಲಿ ವೈಟರ್ ಆಗಿದ್ದ. ಇಬ್ಬರು ಅಸ್ಸಾಂನಲ್ಲಿರುವಾಗ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. 

ಕಳೆದ 1 ತಿಂಗಳಿನಿಂದ ಸಹ ಜೀವನ

ನಗರದ ದೊಡ್ಡಕನ್ನಹಳ್ಳಿಯ ಮನೆಯಲ್ಲಿ ಕಳೆದ 1 ತಿಂಗಳಿನಿಂದ ಸಹ ಜೀವನ ನಡೆಸುತ್ತಿದ್ದರು. ಯುವತಿ ಮತ್ತೊಬ್ಬ ಯುವಕನ ಜತೆ ಸಂಪರ್ಕದಲ್ಲಿ ಇದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇತ್ತೀಚೆಗೆ ಈಕೆಯ ವರ್ತನೆಯಲ್ಲಿ ಬದಲಾವಣೆ ಆಗಿರುವುದನ್ನು ಗಮನಿಸಿ ಬೇರೊಬ್ಬ ಯುವಕನೊಂದಿಗೆ ಸಂಬಂಧವಿರಬಹುದು ಎಂದು ಶಂಕಿಸಿದ್ದ. 

ಶನಿವಾರ ರಾತ್ರಿ ಅತಿ ಹಂಗ್ಮಾ ಜನ್ಮದಿನವನ್ನು ಕೂಡ ಆರೋಪಿ ಆಚರಿಸಿದ್ದ. ಈ ವೇಳೆಯೂ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಅತಿ ಹಂಗ್ಮಾ ಇನ್ನುಮುಂದೆ ಪ್ರತ್ಯೇಕವಾಗಿ ಒಂಟಿಯಾಗಿ ವಾಸಿಸುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡಿದ್ದ ಆತ ಪ್ರೇಯಸಿ ಮಲಗಿದ್ದಾಗ ಭಾನುವಾರ ಬೆಳಗ್ಗೆ ಅಡುಗೆಮನೆಯಲ್ಲಿದ್ದ ಚಾಕುವಿನಿಂದ ಆಕೆಗೆ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಕೊಲೆಯ ವಿಷಯ ತಿಳಿದು ಬೆಳ್ಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಾರ್... ನಾನ್ ನಿಮ್ ಅಭಿಮಾನಿ! - ಕುಡಿದ ಮತ್ತಲ್ಲಿ ಡಿಕೆಶಿ ಭೇಟಿಗೆ ಬಂದಿದ್ದ ವ್ಯಕ್ತಿಯಿಂದ ಪೊಲೀಸರಿಗೆ ಪೀಕಲಾಟ
ಯುವಜನತೆ ಡ್ರಗ್ಸ್‌ನಿಂದ ದೂರ ಇರಿ : ರಾಜ್ಯಪಾಲ