ಧರ್ಮಸ್ಥಳ ಸಂಸ್ಥೆಯಿಂದ ಆರ್ಥಿಕ ಸದೃಢತೆಗಾಗಿ ಸಾಲ ಸೌಲಭ್ಯ: ಗಣೇಶ್ ನಾಯ್ಕ್

KannadaprabhaNewsNetwork |  
Published : Jun 23, 2026, 01:45 AM IST
22ಕೆಎಂಎನ್ ಡಿ26 | Kannada Prabha

ಸಾರಾಂಶ

ಸಂಸ್ಥೆಯಿಂದ ಸದಸ್ಯರಿಗೆ ಸುಜ್ಞಾನ ನಿಧಿ, ವಾತ್ಸಲ್ಯ ಮನೆ, ನಿರ್ಗತಿಕರ ಮಾಸಾಸನ, ಜಲಮಂಗಲ ಕಾರ್ಯಕ್ರಮದಡಿ ಹಲವು ಕಿಟ್ ನೀಡುವುದು, ಗ್ರಾಮಗಳ ದೇವಸ್ಥಾನ, ಹಾಲಿನ ಡೈರಿಗಳು ಸೇರಿದಂತೆ ಮುಂತಾದ ಚಟುವಟಿಕೆಗಳಿಗೆ ಅನುದಾನ ನೀಡಲಾಗುತ್ತಿದೆ.

ಶ್ರೀರಂಗಪಟ್ಟಣ:

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಂಘದ ಸದಸ್ಯರಿಗೆ ಆರ್ಥಿಕವಾಗಿ ಸದೃಢಗೊಳಿಸಲು ಸಾಲದ ಮೂಲಕ ನೆರವು ನೀಡುತ್ತಿದೆ ಎಂದು ಯೋಜನಾಧಿಕಾರಿ ಗಣೇಶ್ ನಾಯ್ಕ್ ಹೇಳಿದರು.

ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಡಾ.ವಿ.ಹೇಮಾವತಿ ಅಮ್ಮನವರ ಆಶಯದಂತೆ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮೂರು ತಿಂಗಳ ಉಚಿತ ಟೈಲರಿಂಗ್ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

ಸಂಸ್ಥೆಯಿಂದ ಸದಸ್ಯರಿಗೆ ಸುಜ್ಞಾನ ನಿಧಿ, ವಾತ್ಸಲ್ಯ ಮನೆ, ನಿರ್ಗತಿಕರ ಮಾಸಾಸನ, ಜಲಮಂಗಲ ಕಾರ್ಯಕ್ರಮದಡಿ ಹಲವು ಕಿಟ್ ನೀಡುವುದು, ಗ್ರಾಮಗಳ ದೇವಸ್ಥಾನ, ಹಾಲಿನ ಡೈರಿಗಳು ಸೇರಿದಂತೆ ಮುಂತಾದ ಚಟುವಟಿಕೆಗಳಿಗೆ ಅನುದಾನ ನೀಡಲಾಗುತ್ತಿದೆ ಎಂದರು.

ಸದಸ್ಯರನ್ನು ಆರ್ಥಿಕವಾಗಿ ಸದೃಢ ಮಾಡಲು ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿಕೆ, ಜ್ಞಾನವಿಕಾಸ ಕಾರ್ಯಕ್ರಮದ ಅಡಿ ಬೀದಿ ನಾಟಕ, ಆರೋಗ್ಯ ತಪಾಸಣಾ ಶಿಬಿರ, ಪೌಷ್ಟಿಕ ಆಹಾರ, ಉಚಿತ ಟೈಲರಿಂಗ್ ಮತ್ತು ಟ್ಯೂಷನ್ ತರಬೇತಿಗಳೊಂದಿಗೆ ಸಂಘದ ಸದಸ್ಯರೊಂದಿಗೆ ನೆರವಾಗುವ ಮತ್ತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಈ ವೇಳೆ ಜ್ಞಾನವಿಕಾಸ ಸಮನ್ವಯಾಧಿಕಾರಿ ಸಂಗೀತ, ವಲಯದ ಮೇಲ್ವಿಚಾರಕ ಇಲಿಯಾಸ್, ಟೈಲರಿಂಗ್ ತರಬೇತಿ ಶಿಕ್ಷಕಿ ಶ್ವೇತ, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ನಾಗರತ್ನ, ಒಕ್ಕೂಟ ಅಧ್ಯಕ್ಷೆ ಕಾಮಾಕ್ಷಮ್ಮ, ಹಂಪಾಪುರ ಸೇವಾ ಪ್ರತಿನಿಧಿ ರಾಜಮ್ಮ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.ಚಿರತೆ ಸೆರೆಗೆ ಬೋನಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ

ಹಲಗೂರು:ಚಿರತೆ ದಾಳಿಯಿಂದ ಹಸುವಿನ ಕರು, ಸಾಕು ನಾಯಿ ಬಲಿಯಾದ ಹಿನ್ನೆಲೆಯಲ್ಲಿ ಹೆಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ

ಗ್ರಾಮದೇವತೆಪುರದಲ್ಲಿ ಚಿರತೆ ಸೆರೆಗಾಗಿ ಬೋನ್ ಇಟ್ಟಿದ್ದಾರೆ.ಶುಕ್ರವಾರ ಬೆಳಗಿನ ಜಾವ ಬಸವರಾಜ ಮೂರ್ತಿ ಅವರ ಮನೆ ಮುಂಭಾಗ ಚಿರತೆ ಒಂದು ಹಸುವಿನ ಕರು ಮತ್ತು ಸಾಕು ನಾಯಿ ತಿಂದು ಹೋಗಿತ್ತು. ಲಿಂಗನಾಪುರ ಗ್ರಾಮದಲ್ಲಿ ಒಂದು ಮೇಕೆ ಮರಿ ಕತ್ತಿನ ಭಾಗ ಕಚ್ಚಿ ರಕ್ತ ಕುಡಿದು ಸಾಯಿಸಿತ್ತು.

ಸುತ್ತಮುತ್ತಲ ಗ್ರಾಮಸ್ಥರು ರಾತ್ರಿ ವೇಳೆ ತಮ್ಮ ಹೊಲಗದ್ದೆಗಳಿಗೆ ಹೋಗುವುದಕ್ಕೂ ಭಯಪಡುವ ಪರಿಸ್ಥಿತಿ ಇತ್ತು. ಅರಣ್ಯ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ ಮೇರೆಗೆ ಸ್ಥಳಕ್ಕೆ ಹಲಗೂರು ಅರಣ್ಯ ಅಧಿಕಾರಿ ಆರ್ ಎಫ್ ಪ್ರಮೋದ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಭಾನುವಾರ ಬಸವರಾಜ್ ಮೂರ್ತಿ ಅವರ ಮನೆ ಹಿಂಭಾಗ ಚಿರತೆಯನ್ನು ಹಿಡಿಯುವುದಕ್ಕಾಗಿ ಬೋನ್ ಇಟ್ಟಿದ್ದಾರೆ. ಈ ವೇಳೆ ಧನಗೂರು ಬಿಟ್ ಅರಣ್ಯ ವ್ಯಾಪ್ತಿಯ ಇಲಾಖೆ ಸಿಬ್ಬಂದಿ ಪುನೀತ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದರ್ಶನ್‌ ಪತ್ನಿ ನಿಂದಕರಿಗೆ ಜೈಲೇ ಗತಿ
ಅಂಕೇಗೌಡರ ಸಂಗ್ರಹಿಸಿರುವ ಪುಸ್ತಕಗಳಿಗೆ ಸೂಕ್ತ ಜಾಗ, ಕಟ್ಟಡ ವ್ಯವಸ್ಥೆ: ಸಿಎಂ ಸೂಚನೆ