ಮಹಿಳೆಯರ ಆರ್ಥಿಕ ಸ್ವಾವಲಂಬನೆಗ ಸಾಲ ಸೌಲಭ್ಯ

KannadaprabhaNewsNetwork |  
Published : Sep 16, 2025, 12:03 AM IST
ಪೊಟೋ೧೪ಸಿಪಿಟಿ೧: ನಗರದ ಮಹೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಅಭ್ಯುದಯ ಮಹಿಳಾ ಪಟ್ಟಣ ಸಹಕಾರ  ಬ್ಯಾಂಕ್‌ನ ೨೬ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಸಾಲ ಪಡೆದಿರುವ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕ್‌ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ಗೀತಾಂಜಲಿ ಅಭಿಲಾಷ್ ಮನವಿ ಮಾಡಿದರು.

ಚನ್ನಪಟ್ಟಣ: ಸಾಲ ಪಡೆದಿರುವ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕ್‌ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ಗೀತಾಂಜಲಿ ಅಭಿಲಾಷ್ ಮನವಿ ಮಾಡಿದರು.

ನಗರದ ಮಹೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಬ್ಯಾಂಕ್‌ನ ೨೬ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಹಿರಿಯ ಸಹಕಾರ ಧುರೀಣರಾದ ವಿಜಯಲಕ್ಷ್ಮಿ ರಾಮಣ್ಣನವರು ಸ್ಥಾಪಿಸಿದ ಈ ಬ್ಯಾಂಕ್, ಈಗಾಗಲೇ ಬೆಳ್ಳಿ ಮಹೋತ್ಸವ ಆಚರಿಸಿಕೊಂಡಿರುವುದು ಸಂತಸದ ವಿಚಾರ. ಎಲ್ಲರೂ ಇದರ ಪ್ರಯೋಜನ ಪಡೆದು ಬ್ಯಾಂಕಿನ ಅಭಿವೃದ್ಧಿಗೂ ಸಹಕರಿಸಬೇಕು ಎಂದರು.

ಛಾಪಾ ಕಾಗದ ವಹಿವಾಟಿನಲ್ಲಿ ನಮ್ಮ ಬ್ಯಾಂಕ್ ಮೊದಲ ಸಾಲಿನಲ್ಲಿದೆ. ಇದರೊಂದಿಗೆ, ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲೆ ಸಾಲ ಸೇರಿದಂತೆ ಹಲವಾರು ಸೌಲಭ್ಯಗಳು ಬ್ಯಾಂಕ್ ಒಳಗೊಂಡಿದೆ. ಸದಸ್ಯರು ಹೆಚ್ಚಿನ ವಹಿವಾಟು ನಡೆಸುವ ಮೂಲಕ ಬ್ಯಾಂಕ್‌ನ್ನು ಬಲಗೊಳಿಸಬೇಕು ಎಂದು ಮನವಿ ಮಾಡಿದರು.

ಸಾಲ ವಸೂಲಾತಿಗೆ ಕ್ರಮ:ಬ್ಯಾಂಕಿನಿಂದ ಸಾವಿರಾರು ಮಹಿಳೆಯರು ಸಾಲ ಪಡೆದು ಕಿರು ಉದ್ಯಮಗಳನ್ನು ಆರಂಭಿಸಿ ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ. ಪ್ರಸುತ್ತ ಸಾಲ ವಸೂಲಾತಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಹಳೆಯ ಸಾಲ ಮರುಪಾವತಿಸಿದರೆ, ಹೊಸಸಾಲ ಹಾಗೂ ಮತ್ತೊಬ್ಬರಿಗೆ ಸಾಲ ನೀಡಲು ಅನುಕೂಲವಾಗಲಿದೆ. ಆದ್ದರಿಂದ ಸಕಾಲದಲ್ಲಿ ಸಾಲ ಮರುಪಾವತಿಸಿ ಎಂದು ಕೋರಿದರು.

ಅಭಿವೃದ್ಧಿಗೆ ಶ್ರಮಿಸುತ್ತೇವೆ:

ಮಹಿಳೆಯರ ಅಭಿವೃದ್ಧಿಯ ಹಿತದೃಷ್ಟಿಯಿಂದ ಬ್ಯಾಂಕ್ ಸ್ಥಾಪನೆ ಮಾಡಿದ ವಿಜಯಲಕ್ಷ್ಮಿ ರಾಮಣ್ಣನವರ ಕೊಡುಗೆ ಅಪಾರ. ಬ್ಯಾಂಕ್ ಆಡಳಿತ ಪಾರದರ್ಶಕವಾಗಿ ನಡೆದುಕೊಂಡು ಸಾಗುತ್ತಿದೆ. ನಮ್ಮ ಆಡಳಿತ ಮಂಡಳಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಭಿವೃದ್ಧಿಯೇ ನಮ್ಮ ಮೂಲಮಂತ್ರವಾಗಿದೆ. ಎಲ್ಲಾ ನಿರ್ದೇಶಕರು ಬ್ಯಾಂಕ್ ಪ್ರಗತಿಗೆ ಶ್ರಮಿಸುತ್ತೇವೆ. ಬ್ಯಾಂಕ್ ನ ಸದಸ್ಯರು ಹೊಸ ಷೇರುದಾರರನ್ನು ಮಾಡಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಬ್ಯಾಂಕ್ ನ ಹಲವು ನ್ಯೂನತೆಗಳು ಸೇರಿದಂತೆ ಬ್ಯಾಂಕ್ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ಬ್ಯಾಂಕ್ ವತಿಯಿಂದ ಸ್ತ್ರೀಶಕ್ತಿ ಸಂಘಗಳಿಗೆ ಗುಂಪು ಸಾಲ ನೀಡುವಂತೆ ಸದಸ್ಯರು ಮನವಿ ಮಾಡಿದರು.

ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷೆ ರೂಪಸುಬ್ಬೇಗೌಡ, ನಿರ್ದೇಶಕರಾದ ರೇಖಾ ಉಮಾಶಂಕರ್, ಜಯಮಾಲ ಮಹಾಲಿಂಗು, ಆಶಾನಾಗೇಶ್, ನಿಂಗರಾಜಮ್ಮ ಲಕ್ಷ್ಮೀಪತಿ, ಸುಕನ್ಯ ರಾಜಶೇಖರ್, ಭಾಗ್ಯ ನಾಗರಾಜು, ಸಾವಿತ್ರಮ್ಮ ಕೃಷ್ಣಪ್ಪ, ಕೋಕಿಲಾರಾಣಿ ಜಗದೀಶ್, ಲಕ್ಷ್ಮಿ ಯಾಲಕ್ಕಿಗೌಡ, ಸುಷ್ಮಾಬಿಳಿಯಪ್ಪ, ಮಧುಶ್ರೀ ಭರತ್, ಪೂರ್ಣಿಮಾ ರಾಜಶೇಖರ್, ಕಾಳಮ್ಮ ಮುನಿಯಪ್ಪ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಶ್ರೀ, ಸಿಬ್ಬಂದಿಗಳಾದ ರಾಜೇಂದ್ರ, ಸವಿತಾ, ನಿಶ್ಚಿತ, ಶಶಿಕಲಾ, ನಾಗೇಂದ್ರ ಇತರರಿದ್ದರು.

ಪೊಟೋ೧೪ಸಿಪಿಟಿ೧:

ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್‌ನ ೨೬ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ