ದಾಬಸ್‍ಪೇಟೆ: ಹೈನುಗಾರರಿಗೆ ಶೇ.3ರ ಬಡ್ಡಿ ದರದಲ್ಲಿ ವಾರ್ಷಿಕವಾಗಿ ಬಮೂಲ್ ಸಾಲ-ಸೌಲಭ್ಯ ಯೋಜನೆ ತಂದಿದೆ ಎಂದು ಬಮೂಲ್ ನಿರ್ದೇಶಕ ಬೈರೇಗೌಡ ತಿಳಿಸಿದರು
ದಾಬಸ್‍ಪೇಟೆ: ಹೈನುಗಾರರಿಗೆ ಶೇ.3ರ ಬಡ್ಡಿ ದರದಲ್ಲಿ ವಾರ್ಷಿಕವಾಗಿ ಬಮೂಲ್ ಸಾಲ-ಸೌಲಭ್ಯ ಯೋಜನೆ ತಂದಿದೆ ಎಂದು ಬಮೂಲ್ ನಿರ್ದೇಶಕ ಬೈರೇಗೌಡ ತಿಳಿಸಿದರು.
ಸೋಂಪುರ ಹೋಬಳಿಯ ಬೆಣ್ಣೆಗೆರೆ ಡೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಹೈನೋದ್ಯಮ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಏಳಿಗೆಗೆ ಪ್ರಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ರೈತರ ಭರವಸೆಗಳನ್ನು ಈಡೇರಿಸುತ್ತೇನೆ, ಸಹಕಾರ ಸಂಸ್ಥೆಗಳಲ್ಲಿ ಯಾರು ರಾಜಕೀಯ ಬೆರೆಸಬಾರದು. ತಾಲೂಕಿನ 184 ಡೇರಿಗಳಿಗೆ ಭೇಟಿ ನೀಡಿ ಅಧ್ಯಕ್ಷರು ಮತ್ತು ನಿರ್ದೇಶಕರ ಜೊತೆ ಚರ್ಚಿಸಿ ಅಗತ್ಯ ಸೌಲಭ್ಯಗಳು ನೀಡುತ್ತಿದ್ದೇವೆ, ಸಂಘದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದರು.
ಡೇರಿ ಅಧ್ಯಕ್ಷೆ ಪ್ರೇಮಲತಾ ಮಾತನಾಡಿ, ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಶಾಸಕ ಶ್ರೀನಿವಾಸ್, ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ, ಮಾಜಿ ನಿರ್ದೇಶಕ ಭಾಸ್ಕರ್, ಮುಖಂಡರಾದ ಗೋವಿಂದರಾಜು, ಕಟ್ಟಡದ ನಿವೇಶನ ದಾನಿಗಳಾದ ದಿ.ಅಕ್ಕಯ್ಯಮ್ಮ ಸಾವಂದಯ್ಯ, ದಿ.ನಿಂಗಮ್ಮ ಸಿದ್ದಗಂಗಯ್ಯ ಇತರರಿಗೂ ಕೃತಜ್ಞತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕಿಯರಾದ ಲತಾ, ಗೌರಮ್ಮ, ಸಾವಿತ್ರಮ್ಮ, ರತ್ನಮ್ಮ, ಗಂಗಮ್ಮ, ಮಂಜುಳ, ಸೌಭಾಗ್ಯ, ಅನುಸೂಯ, ಶಿವರುದ್ರಮ್ಮ, ಸಿಇಒ ಉಮಾದೇವಿ ಗಿರೀಶ್, ಸಹಾಯಕ ವ್ಯವಸ್ಥಾಪಕ ಡಾ.ಆದರ್ಶ, ವಿಸ್ತರಣಾಧಿಕಾರಿಗಳಾದ ಅಶೋಕ್, ಚಿಕ್ಕಮಾರೇಗೌಡ, ಚಂದನ್, ಅನಿಲ್ ಕುಮಾರ್, ಗ್ರಾಮಸ್ಥರಾದ,ಬಚ್ಚೇಗೌಡ, ಜಗದೀಶ್, ಶಿವರುದ್ರಪ್ಪ, ಈಶ್ವರಯ್ಯ, ರುದ್ರಯ್ಯ, ಚಿಕ್ಕಯ್ಯ, ಚನ್ನಬಸವಯ್ಯ, ಕುಟುಂಬದವರು, ಗ್ರಾಮಸ್ಥರು, ಹೈನುಗಾರರು ಹಾಜರಿದ್ದರು.
ಫೆÇೀಟೋ 6 :
ಸೋಂಪುರ ಹೋಬಳಿಯ ಬೆಣ್ಣೆಗೆರೆ ಡೇರಿ ನೂತನ ಕಟ್ಟಡವನ್ನು ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.