ಸ್ಥಳೀಯ ಕಲಾವಿದರಿಗೆ ಅವಕಾಶ, ಪೋತ್ಸಾಹ ಅಗತ್ಯ

KannadaprabhaNewsNetwork |  
Published : Jul 23, 2024, 12:37 AM IST
೨೨ಕೆಎಲ್‌ಆರ್-೪ಕೋಲಾರ ತಾಲೂಕಿನ ಸುಗಟೂರು ಶ್ರೀ ವೀರಬ್ರಹ್ಮೇಂದ್ರಸ್ವಾಮಿ ಸೇವಾ ಸಮಿತಿ ಮತ್ತು ಸವಿತಾ ಸಮಾಜ ವತಿಯಿಂದ ೪ನೇ ವರ್ಷದ ಗುರು ಪೂರ್ಣಿಮ ಸಂಗೀತೋತ್ಸವ ಕಾರ್ಯಕ್ರಮ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮಲ್ಲಿ ಕಲಾವಿದರಿಗೆ ಕೊರತೆ ಇಲ್ಲ, ಆದರೆ ಇಲ್ಲಿ ಅವರಿಗೆ ಅವಕಾಶದ ಕೊರತೆ ಇದೆ, ಅವರನ್ನು ಗುರುತಿಸಿ ಕಲೆಗೆ ಪ್ರೋತ್ಸಾಹ ನೀಡುವ ಮನಸ್ಸುಗಳು ನಮ್ಮಲ್ಲಿಯೇ ಹೆಚ್ಚಾಗಬೇಕು ಕಲೆಯೆಂಬುದು ಒಬ್ಬರ ಸ್ವತ್ತಲ್ಲ, ಕಲೆಯು ಜಾತಿ, ಮತ, ಪ್ರಾದೇಶಿಕತೆ, ಗಡಿಯನ್ನು ಮೀರಿದಂತಹದ್ದು

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರಗ್ರಾಮೀಣ ಭಾಗದಲ್ಲಿ ಕಲೆಗೆ ಕೊರತೆಯಿಲ್ಲ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಿದಾಗ ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದರು.ತಾಲೂಕಿನ ಸುಗಟೂರು ಶ್ರೀ ವೀರಬ್ರಹ್ಮೇಂದ್ರಸ್ವಾಮಿ ಸೇವಾ ಸಮಿತಿ ಮತ್ತು ಸವಿತಾ ಸಮಾಜ ವತಿಯಿಂದ ೪ನೇ ವರ್ಷದ ಗುರು ಪೂರ್ಣಿಮೆ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲಾವಿದರಿಗೆ ಅವಕಾಶ ಕಲ್ಪಿಸಿ

ನಮ್ಮಲ್ಲಿ ಕಲಾವಿದರಿಗೆ ಕೊರತೆ ಇಲ್ಲ, ಆದರೆ ಇಲ್ಲಿ ಅವರಿಗೆ ಅವಕಾಶದ ಕೊರತೆ ಇದೆ, ಅವರನ್ನು ಗುರುತಿಸಿ ಕಲೆಗೆ ಪ್ರೋತ್ಸಾಹ ನೀಡುವ ಮನಸ್ಸುಗಳು ನಮ್ಮಲ್ಲಿಯೇ ಹೆಚ್ಚಾಗಬೇಕು ಕಲೆಯೆಂಬುದು ಒಬ್ಬರ ಸ್ವತ್ತಲ್ಲ, ಕಲೆಯು ಜಾತಿ, ಮತ, ಪ್ರಾದೇಶಿಕತೆ, ಗಡಿಯನ್ನು ಮೀರಿದಂತಹದ್ದು ಎಂದರು.ಸವಿತಾ ಸಮಾಜದ ಬಂಧುಗಳು ಸಮಾಜದಲ್ಲಿ ಯಾರಿಗೂ ತೊಂದರೆ ಕೊಡದೇ ತಮ್ಮ ಕೆಲಸ ಮಾಡಿಕೊಂಡು ಗೌರವಯುತವಾದ ಬದುಕು ಕಂಡುಕೊಂಡಿದ್ದಾರೆ. ಈ ಸಮದಾಯದ ಅಭಿವೃದ್ಧಿಗಾಗಿ ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಸಹಾಯ ಮಾಡಲು ಸಿದ್ಧನಿದ್ದೇನೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕೈಗಾರಿಕೆಗಳ ಸ್ಥಾಪನೆ

ಕ್ಷೇತ್ರದಲ್ಲಿನ ನಿರುದ್ಯೋಗ ಯುವಕರಿಗೆ ಉದ್ಯೋಗಕ್ಕಾಗಿ ಐದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಗಳು ಸ್ಥಾಪನೆಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಅನುಮೋದನೆ ಮಾಡಿಸಲಾಗಿದೆ, ಗ್ರಾಮೀಣ ರಸ್ತೆಗಳು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಾ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ಅಂತಾರಾಷ್ಟ್ರೀಯ ಜಾನಪದ ಕಲಾವಿದ ಗೋ.ನಾ.ಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸುಗಟೂರಿಗೆ ಐತಿಹಾಸಿಕ ಪರಂಪರೆ ಇದೆ ಈ ಗ್ರಾಮವನ್ನು ಮಾದರಿಯಾಗಿ ಗುರುತಿಸಿಕೊಳ್ಳುವಂತೆ ಮಾಡಬೇಕಾಗಿದೆ, ಈ ಗ್ರಾಮದಿಂದ ಪೋತ್ಸಾಹಿಸಿದ್ದರಿಂದಾಗಿ ನಿಮ್ಮ ಹುಡುಗ ಇವತ್ತು ಅಕ್ಕ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಬಂದಿದೆ. ಕಲೆಯನ್ನು ನಾವು ಪ್ರೀತಿ ಗೌರವದಿಂದ ಕಂಡಾಗ ಕಲೆ ನಮ್ಮ ಬದುಕು ಕಟ್ಟಿಕೊಡುತ್ತದೆ, ಪ್ರತಿ ಗ್ರಾಮದಲ್ಲಿ ಕಲಾವಿದರು ಇದ್ದು ಅವರನ್ನು ಪೋತ್ಸಾಹಿಸುವ ಕೆಲಸವನ್ನು ಗ್ರಾಮ ಮಟ್ಟದಿಂದಲ್ಲೇ ಮಾಡಬೇಕಾಗಿದೆ ಎಂದರು.ಹಿರಿಯ ಕಲಾವಿದರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಸುಗಟೂರು ಗ್ರಾಪಂ ಅಧ್ಯಕ್ಷ ಭೂಪತಿಗೌಡ, ಸದಸ್ಯ ಎಸ್.ವಿ.ನಾರಾಯಣಗೌಡ, ಮುಖಂಡರಾದ ಕಿಟ್ಟೇಗೌಡ, ಗೋಪಾಲಗೌಡ, ಉರಿಗಲಿ ನಾರಾಯಣಸ್ವಾಮಿ, ಸುಬ್ರಮಣಿ, ಮಂಜುನಾಥ್ ಮುಂತಾದವರು ಇದ್ದರು. ರಾತ್ರಿಯಿಡೀ ವಿವಿಧ ತಂಡಗಳಿಂದ ನಾದಸ್ವರ, ವಾದ್ಯ, ಭಜನೆ, ಪ್ರವಚನ ಕಾರ್ಯಕ್ರಮಗಳನ್ನು ಸೋಮವಾರ ಬೆಳಗಿನ ತನಕ ನಡೆಯಿತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ