ಕನ್ನಡಪ್ರಭ ವಾರ್ತೆ ಬೆಳಗಾವಿ:
ನಮ್ಮ ಬೇಡಿಕೆಗೆ ಸ್ಪಂದಿಸಿ ಅತ್ಯಂತ ತ್ವರಿತವಾಗಿ ರಸ್ತೆ ನಿರ್ಮಿಸುವ ಮೂಲಕ ಕಷ್ಟವನ್ನು ಪರಿಹರಿಸಿದ್ದೀರಿ. ನಿಮ್ಮ ಸಹಾಯಕ್ಕೆ ಧನ್ಯವಾದ. ನಿಮ್ಮಂತ ಜನಪ್ರತಿನಿಧಿಯನ್ನು ಪಡೆದಿದ್ದು ನಮ್ಮ ಸುಧೈವ ಎಂದು ನಾಗರಿಕರು ಹೇಳಿದರು.
ನಿಮ್ಮಿಂದಾಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ನಾಗರಿಕರಲ್ಲಿ ಹೊಸ ಆಶಾಕಿರಣ ಮೂಡಿದೆ. ವ್ಯವಸ್ಥೆಯಲ್ಲಿ ಭರವಸೆ ಮೂಡಿದೆ. ಹಾಗಾಗಿ ಋಣಿಯಾಗಿದ್ದೇವೆ ಎಂದು ತಿಳಿಸಿದರು.ಈ ಸಮಯದಲ್ಲಿ ರಫಿಕ್ ಶೇಖ್, ಜಾನ್ಸನ್, ಎಸಯ್ಯ, ಜಾನ್ ದಾಸ್, ಅನುಶ್ರೀಯಾ ಕೋಲೆ, ಸಂಗೀತಾ ಕೋಟ್ರೆ, ಮೊಬಿನಾ ಸನದಿ, ಅನಿತಾ ಶಹಾಪೂರಕರ್, ಈಬೂ, ಸೂರ್ಯಕಾಂತ ದೋಶಿ, ಉತ್ತಮ ಜಾಮದಾರ್, ರಾಮಯ್ಯ, ಅರೀಫ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.