ಮುಂಡಗೋಡದ ಮೂರು ಅನಧಿಕೃತ ಖಾಸಗಿ ಆಸ್ಪತ್ರೆಗಳಿಗೆ ಬೀಗ

KannadaprabhaNewsNetwork |  
Published : Mar 21, 2025, 12:37 AM IST
ಮುಂಡಗೋಡ: ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷಮೆಂಟ್ (ಕೆ.ಪಿ.ಎಮ್.ಇ) ಪರವಾನಗಿ ಪಡೆಯದೆ ನಡೆಸುತ್ತಿದ್ದ ಆಸ್ಪತ್ರೆಗಳ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಢೀರ್ ದಾಳಿ ನಡೆಸಿ ಆಸ್ಪತ್ರೆಯನ್ನು ಮುಚ್ಚಿಸಿದರು | Kannada Prabha

ಸಾರಾಂಶ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಡಿಢೀರ್ ದಾಳಿ ನಡೆಸಲಾಯಿತು.

ಮುಂಡಗೋಡ: ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಇ) ಪರವಾನಗಿ ಪಡೆಯದೇ ನಡೆಸುತ್ತಿದ್ದ ಆಸ್ಪತ್ರೆಗಳ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಡಿಢೀರ್ ದಾಳಿ ನಡೆಸಿ ಆಸ್ಪತ್ರೆಯನ್ನು ಮುಚ್ಚಿಸಿದ ಘಟನೆ ಗುರುವಾರ ನಡೆಯಿತು.

ಮೊದಲಿಗೆ ಇಲ್ಲಿಯ ಹುಬ್ಬಳ್ಳಿ ರಸ್ತೆಯ ಕಿರಣ್ ಮಕ್ಕಳ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ವೈದ್ಯಾಧಿಕಾರಿಗಳು ದಾಖಲೆ ಪರಿಶೀಲಿಸಿದಾಗ ಪರವಾನಗಿ ಪಡೆಯದೇ ಇರುವುದು ಕಂಡು ಬಂತು. ಇದರಿಂದ ಪರವಾನಗಿ ಪಡೆದುಕೊಂಡು ನಂತರ ಆಸ್ಪತ್ರೆಯನ್ನು ಆರಂಭಿಸಿ. ಅಲ್ಲಿವರೆಗೆ ಬೀಗ ಹಾಕುವಂತೆ ಸೂಚಿಸಿದರು. ಅಲ್ಲದೇ ಅಧಿಕೃತವಾಗಿ ಕೆಪಿಎಂಇ ಪರವಾನಗಿ ಪತ್ರ ಪಡೆದುಕೊಂಡ ಬಳಿಕವೇ ಆಸ್ಪತ್ರೆ ಬಾಗಿಲು ತೆಗೆಯುವಂತೆ ಸೂಚಿಸಿದರು.

ಬಳಿಕ ರೋಣ ಮೆಡಿಕಲ್ ಬಳಿಯಲ್ಲಿ ಕ್ಲಿನಿಕ್ ತೆರೆದಿರುವ ಡಾ.ಭಾಸ್ಕರ್ ರಾವ್ ಕೂಡ ಕೆಪಿಎಂಇ ಪರವಾನಗಿ ಪಡೆಯದ ಕಾರಣ ಅವರಿಗೂ ಪರವಾನಗಿ ಪಡೆದು ಕ್ಲಿನಿಕ್ ತೆರೆಯುವಂತೆ ಸೂಚಿಸಿ ಕ್ಲಿನಿಕ್ ಬಂದ್ ಮಾಡಿಸಲಾಯಿತು. ಬಳಿಕ ಪಟ್ಟಣದ ಪಾಂಡುರಂಗ ಕ್ಲಿನಿಕ್ ಸೇರಿದಂತೆ ತಾಲೂಕಿನ ವಿವಿಧ ಕಡೆಗೆ ತೆರಳಿ ಪರಿಶೀಲಿಸಿದರು.

ದಿಢೀರ್ ಕಾರ್ಯಾಚರಣೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್, ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗದೇ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕ್ಲಿನಿಕ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕೆಪಿಎಂಇ ನೋಂದಣಿ ಆದ ಬಳಿಕವೇ ಕ್ಲಿನಿಕ್ ತೆರೆದು ಕಾರ್ಯ ನಿರ್ವಹಿಸಬೇಕು ಎಂದು ಮಾಹಿತಿ ನೀಡಿದರು.

ಇದೇ ರೀತಿ ಗ್ರಾಮೀಣ ಭಾಗದಲ್ಲಿ ಕೆಪಿಎಂಇ ನೋಂದಣಿ ಇಲ್ಲದೇ ಸಾಕಷ್ಟು ಕ್ಲಿನಿಕ್ ಗಳಿರುವ ಬಗ್ಗೆ ಮಾಹಿತಿ ಇದ್ದು, ಅವುಗಳ ಮೇಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಅಶ್ವಿನಿ ಬೋರ್ಕರ್, ಮುಂಡಗೋಡ ಆಯುರ್ವೇದ ವೈದ್ಯಾಧಿಕಾರಿ ಸಂಜೀವ ಗಲಗಲಿ, ಮುಂಡಗೋಡ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸ್ವರೂಪರಾಣಿ ಪಾಟೀಲ್, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಭರತ್ ಡಿ.ಟಿ. ಹಾಗೂ ಮುಂಡಗೋಡ ಪೊಲೀಸರು ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ