ಜಿಲ್ಲೆಯ ಬಹುತೇಕ ಜಲಪಾತ, ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಉತ್ತರ ಕನ್ನಡದ ಪ್ರಕೃತಿ ಸೌಂದರ್ಯಕ್ಕೆ ಮಳೆಗಾಲದಲ್ಲಿ ಇನ್ನಷ್ಟು ಜೀವಕಳೆ. ಧೋ ಎಂದು ಸುರಿಯುವ ಮಳೆ, ಹಸಿರು ಹೊದ್ದ ಬೆಟ್ಟ-ಗುಡ್ಡಗಳು, ಮೈದುಂಬಿ ಧುಮ್ಮಿಕ್ಕುವ ಜಲಪಾತಗಳು... ಈ ದೃಶ್ಯ ಸವಿಯಲೆಂದೇ ದೂರದೂರುಗಳಿಂದ ಪ್ರವಾಸಿಗರು ಜಿಲ್ಲೆಗೆ ಬರುತ್ತಾರೆ. ಆದರೆ ಸುರಕ್ಷತೆ ಹೆಸರಿನಲ್ಲಿ ಜಿಲ್ಲೆಯ ಬಹುತೇಕ ಜಲಪಾತಗಳು ಹಾಗೂ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿರುವುದರಿಂದ ಪ್ರವಾಸಿಗರು ನಿರಾಶರಾಗಿದ್ದಾರೆ. ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ.
ಮಳೆಗಾಲದಲ್ಲಿ ಜಲಪಾತಗಳು ಮೈದುಂಬಿ ಹರಿಯುವುದೇ ಅವುಗಳ ವಿಶೇಷ. ಇದೇ ಅವಧಿಯಲ್ಲಿ ಜಲಪಾತಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾತರರಾಗಿರುತ್ತಾರೆ. ಆದರೆ ಜಲಪಾತಗಳ ಬಳಿ ಸುರಕ್ಷತಾ ವ್ಯವಸ್ಥೆ ಕಲ್ಪಿಸುವ ಬದಲು ಪ್ರವಾಸಿಗರ ಪ್ರವೇಶವನ್ನೇ ನಿರ್ಬಂಧಿಸುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಪ್ರವಾಸೋದ್ಯಮ ವಲಯದಲ್ಲಿ ಕೇಳಿಬರುತ್ತಿದೆ.ಸುರಕ್ಷತೆ ಮುಖ್ಯ, ಬಂದ್ ಪರಿಹಾರವಲ್ಲ:
ಇನ್ನು ಯಾಣಕ್ಕೂ ಹೋಗುವಂತಿಲ್ಲ. ಮಳೆಗಾಲದಲ್ಲಿ ಸಮುದ್ರ ಅಪಾಯಕಾರಿಯಾಗಿರುವುದರಿಂದ ಮುರ್ಡೇಶ್ವರ, ಗೋಕರ್ಣ ಕಡಲತೀರಗಳಲ್ಲಿ ಜಲಸಾಹಸ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ.
ಮಳೆಗಾಲದ ಸೌಂದರ್ಯ ಬೇಸಿಗೆಯಲ್ಲಿ ಸಿಗುವುದೇ?:
ಪ್ರಕೃತಿಯ ಸೊಬಗನ್ನು ಬಂದ್ ಮಾಡುವುದಲ್ಲ, ಅಪಾಯವನ್ನು ಬಂದ್ ಮಾಡುವುದು ಜಿಲ್ಲಾ ಆಡಳಿತದ ಹೊಣೆ. ಉತ್ತರ ಕನ್ನಡದ ಮಳೆಗಾಲದ ಪ್ರವಾಸೋದ್ಯಮಕ್ಕೆ ಹೊಸ ಸುರಕ್ಷತಾ ಮಾದರಿ ರೂಪಿಸುವ ಅಗತ್ಯ ಈಗ ಎದುರಾಗಿದೆ.ನಿರ್ಬಂಧದಿಂದ ಪ್ರವಾಸಿ ಚಟುವಟಿಕೆ ಕುಂಠಿತಗೊಂಡಿದೆ. ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ಸಿಬ್ಬಂದಿ ನೇಮಿಸಿ, ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿ ಚಟುವಟಿಕೆ ಆರಂಭಿಸಲು 13 ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ಕೊಡುವುದಾಗಿ ತಿಳಿಸಿದ್ದೇನೆ. ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಮಂಗಳಗೌರಿ ಭಟ್.