ಲೋಕ ಅದಾಲತ್‌: ಹೊಸಪೇಟೆಯಲ್ಲಿ 5,114 ಪ್ರಕರಣಗಳು ಇತ್ಯರ್ಥ

KannadaprabhaNewsNetwork |  
Published : Jul 13, 2025, 01:19 AM IST
12ಎಚ್‌ಪಿಟಿ5- ಹೊಸಪೇಟೆಯ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 5,114 ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು. | Kannada Prabha

ಸಾರಾಂಶ

ಹೊಸಪೇಟೆ ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 5,114 ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹9,63,79,136.21 ಸರ್ಕಾರಕ್ಕೆ ಸಂದಾಯವಾಗಿದೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಶಾಂತ ನಾಗಲಾಪುರ ಅವರು ತಿಳಿಸಿದ್ದಾರೆ.

ಹೊಸಪೇಟೆ: ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 5,114 ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹9,63,79,136.21 ಸರ್ಕಾರಕ್ಕೆ ಸಂದಾಯವಾಗಿದೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಶಾಂತ ನಾಗಲಾಪುರ ಅವರು ತಿಳಿಸಿದ್ದಾರೆ.

ಸಿವಿಲ್‌ ದಾವೆಗಳು 49, ಚೆಕ್‌ ಬೌನ್ಸ್‌ ಪ್ರಕರಣಗಳು 124, ಕ್ರಿಮಿನಲ್‌ ಕಾಂಪೌಂಡ್‌ ಎಬಲ್‌ ಪ್ರಕರಣಗಳು 6, ಕ್ರಿಮಿನಲ್‌ ಮಿಸ್‌ ಪ್ರಕರಣಗಳು 669, ಅಪೀಲ್‌ ಪ್ರಕರಣಗಳು 4, ಲಘು ಪ್ರಕರಣಗಳು 4253, ಅಪಘಾತ ಪ್ರಕರಣಗಳು 9, ವ್ಯಾಜ್ಯ ಪೂರ್ವ ಪ್ರಕರಣಗಳು 18 ಸೇರಿ ಒಟ್ಟು 5,114 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಹರಪನಹಳ್ಳಿಯಲ್ಲಿ 1474 ಪ್ರಕರಣ ಇತ್ಯರ್ಥ:

ಹರಪನಹಳ್ಳಿ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಒಟ್ಟು 1,830 ಪ್ರಕರಣಗಳ ಪೈಕಿ 1,474 ಪ್ರಕರಣಗಳನ್ನು ಉಭಯ ನ್ಯಾಯಾಧೀಶರಾದ ಆರ್. ಉಷಾರಾಣಿ ಮತ್ತು ಎಸ್.ಪಿ. ಮನುಶರ್ಮ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಸೇರಿದಂತೆ ಬಾಕಿ ಇದ್ದ ಇನ್ನಿತರ ಪ್ರಕರಣಗಳನ್ನು ಲೋಕ್ ಆದಾಲತ್‌ನಲ್ಲಿ ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 840 ಪ್ರಕರಣಗಳ ಪೈಕಿ 670 ಪ್ರಕಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಿದರೆ, ಕೆಲವನ್ನು ಹಣದ ರೂಪದಲ್ಲಿ ಇತ್ಯರ್ಥಪಡಿಸಲಾಯಿತು.ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ 990 ಪ್ರಕರಣಗಳ ಪೈಕಿ 804 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡರೆ ಇನ್ನು ಕೆಲವು ಹಣದ ರೂಪದಲ್ಲಿ ಬಗೆಹರಿಸಲಾಯಿತು.ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ, ಉಪಾಧ್ಯಕ್ಷ ಮಂಜುನಾಥ ಎಸ್. ಬಾಗಳಿ, ಕಾರ್ಯದರ್ಶಿ ಎಂ. ಮಲ್ಲಪ್ಪ, ಕೆ. ಸಣ್ಣನಿಂಗನಗೌಡ, ಸರ್ಕಾರಿ ಅಭಿಯೋಜಕಿ ಮೀನಾಕ್ಷಿ ಎನ್., ನಿರ್ಮಲಾ, ಹಿರಿಯ ವಕೀಲರಾದ ಕೃಷ್ಣಮೂರ್ತಿ, ಮತ್ತಿಹಳ್ಳಿ ಅಜ್ಜಣ್ಣ, ರಾಮ್‌ ಭಟ್, ಎಸ್. ರುದ್ರಮನಿ, ಬಿ. ಗೋಣಿಬಸಪ್ಪ, ಬಿ. ಹಾಲೇಶ್, ಕೆ.ಎಂ. ಚಂದ್ರಮೌಳಿ, ಆನಂದ ಬಂಡ್ರಿ, ಎಸ್.ಜಿ. ತಿಪ್ಪೇಸ್ವಾಮಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.

PREV

Latest Stories

ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಗೆ ಕ್ರಮ : ನ್ಯಾ.ವಿಭು
ಕೃಷ್ಣಾ ಮೇಲ್ದಂಡೆ-3 ಭೂಸ್ವಾಧೀನಕ್ಕೆ 2.01 ಲಕ್ಷ ಕೋಟಿ ಬೇಕು : ಸಚಿವ ಕೃಷ್ಣ
ನಮ್ಮ ಗ್ಯಾರಂಟಿ ಯೋಜನೆ ದೇಶಕ್ಕೇ ಮಾದರಿ - ಟೀಕಿಸಿದ್ದ ಬಿಜೆಪಿಯೇ ಕಾಪಿ ಮಾಡಿದೆ : ಡಿಸಿಎಂ ಡಿಕೆಶಿ